ಚಿಕ್ಕಮಗಳೂರು-ಆರ್.ಎಸ್.ಎಸ್ ಎರಡು ದಶಕಗಳ ಮೊದಲೇ ಉಗಮವಾಗಿದ್ದರೆ ಭಾರತ ರಾಷ್ಟ್ರವು ವಿಭಜನೆಗೊಳ್ಳದೇ ಅಖಂಡ ರಾಷ್ಟ್ರವಾಗಿ ಬೆಳಗುತ್ತಿತ್ತು-ಮನೋಹರ್

ಚಿಕ್ಕಮಗಳೂರು-ಸ್ವಾತಂತ್ರ್ಯ ಪೂರ್ವದ ಮುನ್ನ ಸ್ಥಾಪಿತವಾದ ರಾಷ್ಟ್ರೀಯ ಸೇವಕ ಸ್ವಯಂ ಸಂಘವು ಎರಡು ದಶಕಗಳ ಮೊದಲೇ ಉಗಮವಾಗಿದ್ದರೆ ಭಾರತ ರಾಷ್ಟ್ರವು ವಿಭಜನೆಗೊಳ್ಳದೇ ಅಖಂಡ ರಾಷ್ಟ್ರವಾಗಿ ಬೆಳಗುತ್ತಿತ್ತು ಎಂದು ಆರ್‌ಎಸ್‌ಎಸ್ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯ ಮನೋಹರ್ ಹೇಳಿದರು.

ನಗರದ ಗಾಯತ್ರಿ ಸಮುದಾಯ ಭವನದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಮಂಗಳವಾರ ಸಂಜೆ ಏರ್ಪಡಿಸಿದ್ಧ ಸಂಕ್ರಾoತಿ ಉತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿಶ್ವದ ಮುಂಚೂಣಿ ರಾಷ್ಟ್ರವಾದ ಭಾರತದ ಮೇಲೆ ಮೊಘಲರು ಸೇರಿದಂತೆ ಅನೇಕ ಮತಾಂಧ ಶಕ್ತಿಗಳು ಯುದ್ಧೋಪಾದಿಯಲ್ಲಿ ಆಕ್ರಮಣ ನಡೆಸಿದರೂ ಸೋತಿರಲಿಲ್ಲ. ಆದರೆ ಬ್ರಿಟಿಷರು ದೇಶದ ಅಧ್ಯಯನ ನಡೆಸಿ ಮೊದಲು ಗುರುಕುಲ ಪದ್ಧತಿ ನಾಶಕ್ಕೆ ಮುಂದಾಗಿದ ಕಾರಣ ಭಾರತೀಯ ಸಂಸ್ಕೃತಿಗೆ ಕೊಡಲಿಪೆಟ್ಟು ಬಿತ್ತು ಎಂದರು.

ಗುರುಕುಲ ಪದ್ಧತಿ ನಾಶಗೊಳಿಸಿ, ಮಕ್ಕಳಿಗೆ ಕಾನ್ವೆಂಟ್ ಪದ್ಧತಿ ಜಾರಿಗೆ ತಂದರು. ಕಾನ್ವೆಂಟ್ ಎಂದರೆ ಇಂಗ್ಲೇಡ್ ದೇಶದಲ್ಲಿ ಅಪ್ಪ, ಅಮ್ಮವಿಲ್ಲದ ಶಾಲೆಗಳು ಎಂದರ್ಥ. ಅಲ್ಲಿಂದ ಭಾರತ ಅಧಪಥನಕ್ಕೆ ಮುಂದಾಗಿದ್ದನ್ನು ಕಂಡ ಸಂಘಟನೆ, ದೇಶಕ್ಕೆ ಔಷಧಿ ನೀಡುವ ಸಲುವಾಗಿ ರಾಷ್ಟ್ರದಾದ್ಯಂತ ಶಾಖೆಗಳನ್ನು ಸ್ಥಾಪಿಸಿ ಹಿಂದೂ ಸಮಾಜದ ಏಳಿಗೆಗೆ ಶ್ರಮಿಸುತ್ತಿದೆ ಎಂದು ಹೇಳಿದರು.

ಅಮೇರಿಕಾ ಸೇರಿದಂತೆ ಇಡೀ ವಿಶ್ವಾದ್ಯಂತ ಸುಮಾರು 52 ದೇಶಗಳಲ್ಲಿ ಆರ್‌ಎಸ್‌ಎಸ್ ಸಂಘಟನೆ ಕಾರ್ಯಪ್ರವೃ ತ್ತವಾಗಿದೆ. ಇದನ್ನು ಗಮನಿಸಿದರೆ ಪ್ರಪಂಚದ ದೊಡ್ಡಣ್ಣ ಅಮೇರಿಕಾವಲ್ಲ, ಭಾರತವೆಂದು ಪರಿಗಣಿಸಬೇಕು. ಹಾಗಾಗಿ ಹಿಂದೂ ಸಮಾಜವು ಪ್ರತಿ ಮನೆಗಳಲ್ಲಿ ರಾಷ್ಟ್ರಭಕ್ತಿ ಮೂಡಿಸಿ, ಸಂಘಟನೆಗೆ ಕೈಜೋಡಿಸಬೇಕಿದೆ ಎಂದು ತಿಳಿಸಿದರು.

1925ರಲ್ಲಿ ಜನನಗೊಂಡ ಆರ್‌ಎಸ್‌ಎಸ್ ಸಂಘಟನೆ, ಕೇವಲ ಎರಡು ದಶಕಗಳ ಹಿಂದೆ ಜನಿಸಿದ್ದರೆ ಅಖಂಡ ಭಾರತದಲ್ಲಿ ಪಾಕಿಸ್ತಾನ ದೇಶ ಪ್ರತ್ಯೇಕವಾಗುತ್ತಿರಲಿಲ್ಲ. ಸ್ವಾತಂತ್ರ್ಯದ ಬಳಿಕ ಅಂದಿನ ಆಡಳಿತವು ಸಂಘಟನೆಯನ್ನು ಬೇರುಸಮೇತ ಕಿತ್ತೊಗೆಯಲು ಅನೇಕ ಸಂಚು ನಡೆಸಿ ವಿಫಲಗೊಂಡವು. ಆದರೀಗ ಸದೃಢವಾಗಿ ನಿಂತಿರುವ ಕಾರಣ ಜಗತ್ತಿನ ಅತಿದೊಡ್ಡ ಸಂಘಟನೆಯಾಗಿ ಹೊರಹೊಮ್ಮಿದೆ ಎಂದರು.

ಹಿoದುತ್ವ ಬೇರಿನಿಂದ ಗಟ್ಟಿಗೊಳಿಸುವ ಹಾಗೂ ಒಗ್ಗೂಡಿಸುವ ನಿಟ್ಟಿನಲ್ಲಿ ದೇಶಾದ್ಯಂತ ಸುಮಾರು 73 ಸಾವಿರ ಶಾಖೆಗಳನ್ನು ಸಂಘಟನೆ ಹೊಂದಿದೆ. ಈ ಬಲವನ್ನು ಗಮನಿಸಿದ ಪ್ರಸ್ತುತ ಇಂಗ್ಲೇಡ್ ದೇಶ, ಸಂಘಟನೆ ಎಂದರೆ ಆರ್‌ಎಸ್‌ಎಸ್‌ನಂತೆ ಇರಬೇಕೆಂದಿದ್ದರು ಎಂದ ಅವರು ತಪಸ್ಸಿನಿಂದ ಸಂಘಟನೆ ಬೆಳೆದು ಕತ್ತಲೆಯಿಂದ ಬೆಳಕು ಚೆಲ್ಲುತ್ತಿದೆ ಎಂದು ಹೇಳಿದರು.

ಸದ್ಯದಲ್ಲೇ ಆರ್‌ಎಸ್‌ಎಸ್ ಸಂಘಟನೆ ಶತದಿನೋತ್ಸವಕ್ಕೆ ಕಾಲಿಡುತ್ತಿದೆ. ಸಂಘಟನಾ ಬಲವು ಮೇಲ್ನೋಟಕ್ಕೆ ಬಂಡೆಯoತೆ ಕಾಣುತ್ತಿದೆ. ಕೆಳಹೊಕ್ಕಿ ವೀಕ್ಷಿಸಿದರೆ ಬೃಹದಾಕಾರವಾಗಿ ಬೆಳೆದಿದೆ. ಪ್ರಚಾರ ಬಯಸದೇ ರಾಷ್ಟ್ರ ಚಿಂತನೆಗೆ ಬೇರೂರಿರುವ ಏಕೈಕ ಸಂಘಟನೆ ಆರ್‌ಎಸ್‌ಎಸ್. ಜಿಲ್ಲೆ, ತಾಲ್ಲೂಕು ಮಟ್ಟದಲ್ಲಿ ಮಂಡಲಗಳನ್ನು ರಚಿಸಿಕೊಂಡು ಹಿಂದುತ್ವಕ್ಕಾಗಿ ಕೆಲಸ ಮಾಡುತ್ತಿದೆ ಎಂದರು.

ಇಂದಿನ ಯುವಸಮೂಹಗಳಿಗೆ ಪಾಲಕರು ದೇಶದ ಆಚಾರ-ವಿಚಾರಗಳನ್ನು ಮನದಟ್ಟಾಗಿ ತುಂಬಬೇಕು.ರಾಷ್ಟ್ರ ಮೊದಲು ಎಂಬ ವಿವೇಕವಾಣಿಯನ್ನು ಅನುಸರಿಸಬೇಕು. ಸಂಘಟನೆ ಬೆಳೆದ ಹಾದಿಯನ್ನು ಪರಿಚಯಿಸಿ ಸ್ವಯಂ ಪ್ರೇರಿತರಾಗಿ ಮಕ್ಕಳು ಸೇರಿದಂತೆ ಗಂಡನನ್ನು ಸೇರ್ಪಡೆಗೊಳಿಸಿದರೆ ಭವ್ಯಭಾರತ ನಿರ್ಮಾಣವಾಗುಲ್ಲಿ ಸಂದೇಹವಿಲ್ಲ ಎಂದು ತಿಳಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಸಂಘಟನೆ ಕಾರ್ಯಕರ್ತರಿಂದ ಶಾರೀರಿಕ ಮತ್ತು ದಂಡ ವ್ಯಾಯಾಮ ನಡೆ ಸಲಾಯಿತು. ಬಳಿಕ ಶ್ಲೋಕ ಹಾಗೂ ಹಿಂದುತ್ವದ ಗೀತೆ ಹಾಡಲಾಯಿತು. ಈ ಸಂದರ್ಭದಲ್ಲಿ ಆರ್‌ಎಸ್‌ಎಸ್ ಜಿಲ್ಲಾ ಸಂಚಾಲಕ ಗನಶ್ಯಾಮ್ ಆಳ್ವ, ನಗರ ಸಂಚಾಲಕ ರಾಜರಾಮ್ ಕೋಟೆ ಸೇರಿದಂತೆ ಕುಟುಂಬಸ್ಥರು ಉಪಸ್ಥಿತರಿದ್ದರು.

————--ಸುರೇಶ್

Leave a Reply

Your email address will not be published. Required fields are marked *

× How can I help you?