ಬಣಕಲ್-ಅಪ್ರಾಪ್ತರ ಕೈಗೆ ವಾಹನ ಕೊಡಬೇಡಿ ಮನವಿ-ಅಡ್ಡಾದಿಡ್ಡಿ ಪಾರ್ಕಿಂಗ್ ವೀರರಿಗೆ ಬಿಸಿ-ಪಿ ಎಸ್ ಐ ರೇಣುಕಾರವರ ಕಾರ್ಯಕ್ಕೆ ಮೆಚ್ಚುಗೆ

ಬಣಕಲ್;ಅಪ್ರಾಪ್ತರ ಕೈಗೆ ವಾಹನಗಳನ್ನು ಚಲಾಯಿಸಲು ನೀಡದಂತೆ ಬಣಕಲ್ ಠಾಣೆಯ ಪಿ ಎಸ್ ಐ ರೇಣುಕಾರವರು ಮನವಿ ಮಾಡಿಕೊಂಡಿದ್ದಾರೆ.

ಸೋಮವಾರ ಪಟ್ಟಣದಲ್ಲಿ ಸಾರ್ವಜನಿಕ ವಾಹನಗಳ ದಾಖಲಾತಿ ಗಳನ್ನು ಪರಿಶೀಲನೆ ನಡೆಸಿದ ವೇಳೆ ಅವರು ಮಾತನಾಡಿ,ವಾಹನಗಳ ತಪಾಸಣೆಯ ಸಮಯದಲ್ಲಿ ಅಪ್ರಾಪ್ತರು ವಾಹನಗಳನ್ನು ಓಡಿಸುವುದು ಕಂಡುಬರುತ್ತಿದ್ದು ಪೋಷಕರು ಈ ವಿಷಯದಲ್ಲಿ ಬಹು ಎಚ್ಚರಿಕೆಯಿಂದ ಇರಬೇಕು. ಒಂದೊಮ್ಮೆ ಅಪಘಾತಗಳು ಸಂಭವಿಸಿದರೆ ವಾಹನಗಳ ಮಾಲೀಕರೇ ಜವಾಬ್ದಾರರಾಗುತ್ತಾರೆ. ವಾಹನಗಳು ಜಪ್ತಾಗುವುದರ ಜೊತೆಗೆ ತೀವ್ರ ದಂಡ ಹಾಗು ಜೈಲು ಶಿಕ್ಷೆಗಳು ಎರಡು ಆಗುವ ಅವಕಾಶಗಳಿವೆ.ಹಾಗಾಗಿ ಅಪ್ರಾಪ್ತ ಹಾಗು ವಾಹನ ಚಲಾವಣೆ ಪತ್ರ ಇಲ್ಲದವರ ಕೈಗೆ ವಾಹನ ಕೊಡಬಾರದು ಎಂದು ನಾಗರೀಕರಿಗೆ ಎಚ್ಚರಿಕೆ ನೀಡಿದರು.

ಕಾರು,ಬೈಕು ಹಾಗು ಇತರೆ ವಾಹನಗಳ ದಾಖಲಾತಿ ಪರಿಶೀಲನೆ ನಡೆಸಿ ದಂಡವನ್ನು ವಿಧಿಸಲಾಯಿತು.

ಅಡ್ಡಾದಿಡ್ಡಿ ಪಾರ್ಕಿಂಗ್ ವೀರರಿಗೆ ಬಿಸಿ..

ಬಣಕಲ್ ಸಾವರ್ಕರ್ ಯುವ ಪ್ರತಿಷ್ಟಾನ ಕಳೆದವಾರ ಸಂತೆಗೆ ಹೋಗುವ ರಸ್ತೆಯಲ್ಲಿ ವಾರದ ಸಂತೆಯಂದು ಎಲ್ಲೆಂದರಲ್ಲಿ ವಾಹನಗಳ ನಿಲುಗಡೆ ಮಾಡಿರುತ್ತಾರೆ ಸಾರ್ವಜನಿಕರಿಗೆ ತೀವ್ರ ತೊಂದರೆಗಳಾಗುತ್ತಿದ್ದು ಕ್ರಮ ಕೈಗೊಳ್ಳುವಂತೆ ಪಿ ಎಸ್ ಐ ರೇಣುಕಾರಾವರಿಗೆ ಮನವಿ ಸಲ್ಲಿಸಿತ್ತು.

ಸೋಮವಾರ ವಾರದ ಸಂತೆಯ ದಿನವಾದ್ದರಿಂದ ತಮ್ಮ ಸಿಬ್ಬಂದಿಗಳೊಂದಿಗೆ ಫೀಲ್ಡಿಗೆ ಇಳಿದಿದ್ದ ಪಿ ಎಸ್ ಐ ಬೇಕಾಬಿಟ್ಟಿ ವಾಹನಗಳ ನಿಲ್ಲಿಸಿದ್ದವರಿಗೆ ಬಿಸಿ ಮುಟ್ಟಿಸಿದರು.

ಈ ವಾರ ಎಚ್ಚರಿಕೆಯನ್ನು ನೀಡುತ್ತಿದ್ದು ಮುಂದೆ ದಂಡ ವಿಧಿಸಲಾಗುವುದು ಎಂದು ಅಡ್ಡಾದಿಡ್ಡಿ ಪಾರ್ಕಿಂಗ್ ವೀರರಿಗೆ ವಾರ್ನ್ ಮಾಡಿದರು.

ಪಿ ಎಸ್ ಐ ರೇಣುಕಾರವರು ಬಣಕಲ್ ಠಾಣೆಯ ಜವಾಬ್ದಾರಿ ತೆಗೆದುಕೊಂಡ ಮೇಲೆ ಠಾಣೆಯ ವ್ಯಾಪ್ತಿಯಲ್ಲಿ ಅಪರಾಧಿಕ ಚಟುವಟಿಕೆಗಳು ತಹಬಂದಿಗೆ ಬಂದಿದ್ದು ಸಂಘಟನೆಗಳು ನೀಡುವ ದೂರುಗಳನ್ನು ಗಂಭೀರವಾಗಲಿ ತೆಗೆದುಕೊಂಡು ಕ್ರಮಕ್ಕೆ ಮುಂದಾಗುವುದು ಅತೀವ ಮೆಚ್ಚುಗೆಗೆ ಪಾತ್ರವಾಗುತ್ತಿದೆ.

———————–-ಸೂರಿ ಬಣಕಲ್

Leave a Reply

Your email address will not be published. Required fields are marked *

× How can I help you?