ಕೊರಟಗೆರೆ:– ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿ ಅಗ್ರಹಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರಂತರ ನಡೆಯುತ್ತಿರುವ ಕ್ರಷರ್ಗಳ ಸ್ಪೋಟಕ ಶಬ್ದದಿಂದ ಸುಮಾರು 9:00 ಗಂಟೆ ಸಮಯದಲ್ಲಿ ಕಾಡಿನಿಂದ ಗ್ರಾಮಕ್ಕೆ ಬಂದ ಕರಡಿ ಕಂಡು ಗ್ರಾಮಸ್ಥರು ಆತಂಕ ಕೊಳಗಾಗಿದ್ದಾರೆ.
ಕೊರಟಗೆರೆ ತಾಲೂಕಿನಲ್ಲಿ ಗಣಿಗಾರಿಕೆ ಸದ್ದು ಹೆಚ್ಚಾಗಿದ್ದು, ಜಟ್ಟಿ ಅಗ್ರಹಾರ ಗ್ರಾಮಕ್ಕೆ ರಾತ್ರಿ 10 ಗಂಟೆಗೆ ಕರಡಿ ಆಹಾರ ಅರಸಿ ಊರಿಗೆ ಧಾವಿಸಿ ಅಗ್ರಹಾರ ಗ್ರಾಮದ ಹಲವು ಮನೆಗಳ ಸಮೀಪ ಸಿ ಸಿ ಕ್ಯಾಮೆರಾದಲ್ಲಿ ಕರಡಿ ಓಡಾಡುತ್ತಿರುವುದು ಸೆರೇಯಾಗಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿರುವುದಲ್ಲದೆ ಗಣಿಗಾರಿಕೆಯಿಂದ ಬೆಟ್ಟ ಗುಡ್ಡದಲ್ಲಿದ್ದ ವನ್ಯಮೃಗಗಳು ನಾಡಿನತ್ತ ದಾವಿಸುತ್ತಿರುವುದು ಗಣಿಗಾರಿಕೆ ಎಫೆಕ್ಟ್ ಎಂದು ಗಣಿಗಾರಿಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಅರಣ್ಯ ಪ್ರದೇಶದ ಒಳಗೆ ನಿರಂತರ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಇಂದ ವನ್ಯಜೀವಿಗಳ ಮೇಲೆ ಪ್ರಕೃತಿಯ ಮೇಲೆ ದುಷ್ಪರಿಣಾಮ ಬೀರಿದೆ, ಅಗ್ರಹಾರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಕವರ್ಗಲ್ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿದೆ ಈ ಹಿಂದೆ ಕರಡಿ ದಾಮ ಪ್ರದೇಶಕ್ಕೆ ಒಳಪಟ್ಟಿದ್ದು ನ್ಯಾಷನಲ್ ಎಕೋ ಸೆನ್ಸಿಟಿವ್ ಜೋನ್ ಎಂದು ಅರಣ್ಯ ಇಲಾಖೆ ಘೋಷಿಸಿತ್ತು ಹತ್ತು ಕಿಲೋಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಗಣಿಗಾರಿಕೆ ಚಟುವಟಿಕೆ ನಡೆಸಲು ಸಾಧ್ಯವಿರಲಿಲ್ಲ.

ಆದ್ರೆ ಪಟ್ಟಭದ್ರ ಹಿತಾಸಕ್ತಿಗಳ, ಶಕ್ತಿ ಪ್ರದರ್ಶನದಿಂದ ಆ ಕಾನೂನು ಹಿಂಪಡೆದ್ದಾರೆ ಎಂದು ಸಾರ್ವಜನಿಕರ ಆರೋಪವಾಗಿದೆ.
ಸರ್ಕಾರಿ ಗೋಮಾಳ ಹಾಗೂ ಅರಣ್ಯ ಪ್ರದೇಶದಲ್ಲಿ ರಸ್ತೆ ನಿರ್ಮಿಸಿಕೊಂಡು ಗಣಿಗಾರಿಕೆ ಮಾಡುತ್ತಿದ್ದರು ಕಂಡರು ಕಾಣದಂತಿರುವ ಜಿಲ್ಲಾಡಳಿತ,ಈಗಾಗಲೇ ಅರಣ್ಯ ಇಲಾಖೆಯ ನಿಯಮಗಳನ್ನ ಉಲ್ಲಂಘಿಸಿ ಗಣಿಗಾರಿಕೆ ನಡೆಸುತ್ತಿರುವುದು ಕಂಡುಬಂದಿದ್ದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಪತ್ರ ಬರೆದರು ಕ್ರಮ ಕೈಗೊಳ್ಳದ ಅಧಿಕಾರಿಗಳು,ಕಲ್ಲು ಗಣಿಗಾರಿಕೆ ಗುತ್ತಿಗೆಗೆ ಮಂಜೂರಾದ ಜಾಗದ ಜೊತೆಗೆ ಸರ್ಕಾರಿ ಗೋಮಾಳ ಒತ್ತುವರಿ ಮಾಡಿಕೊಂಡು ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದರು ಕ್ರಮ ಕೈಗೊಳ್ಳದೆ ಇರುವುದಕ್ಕೆ ಕಾರಣವಾದರೂ ಏನು ಎಂಬುದು ಸಾರ್ವಜನಿಕರ ಇಲಾಖೆಗಳ ವಿರುದ್ಧ ಹಿಡಿ ಶಾಪಹಾಕುತ್ತಿದ್ದಾರೆ.

ಈ ಹಿಂದೆ ಸಾಮಾಜಿಕ ಹೋರಾಟಗಾರ ಜೆಟ್ಟಿ ಅಗ್ರಹಾರ ನಾಗರಾಜು ಸೇರಿದಂತೆ ಹಲವು ಸಾರ್ವಜನಿಕರು ಸಾರ್ವಜನಿಕ ಹಿತಾಸಕ್ತಿ ಅನುಸಾರವಾಗಿ ಮುಖ್ಯ ಮಂತ್ರಿಗಳಿಗೆ, ಗೃಹ ಸಚಿವರಿಗೆ ಮನವಿ ಮಾಡಿದ್ದರು ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಕಛೇರಿ ಇಂದ ಬಂದ ಪತ್ರಕ್ಕೂ ಕ್ಯಾರೆ ಅನ್ನದ ಜಿಲ್ಲಾಡಳಿತ, ಸರ್ಕಾರಿ ದಾಖಲೆಯ ಪ್ರಕಾರ ಅರಣ್ಯ ಸರ್ಕಾರಿ ಗೋಮಾಳ ಜಂಟಿ ಎಂದು ನಮೂದಾಗಿದ್ದರು, ಮಂಜೂರಾತಿಗೆ ವರದಿ ಎನ್ ಓ ಸಿ ನೀಡಿದ ತಾಲ್ಲೂಕ್ ಆಡಳಿತ, ಬಫರ್ ಜೋನ್ ಕೃಷಿಯೇತರ ಜಮೀನು ಅರಣ್ಯ ಪ್ರದೇಶ ಇದ್ದರೂ ಹೇಗೆ ಗಣಿಗಾರಿಕೆಗೆ ಎನ್ ಓ ಸಿ ನೀಡಿದ್ದಾರೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಇಷ್ಟೆಲ್ಲದರ ನಡುವೆಯೂ ಇಲಾಖೆಗಳು ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಗಣಿಗಾರಿಕೆ ನಡೆಸುತ್ತಿದ್ದರು ಪರಿಸರ ಇಲಾಖೆ ಯಾಗಲಿ ಗಣಿಗಾರಿಕೆ ಇಲಾಖೆ ಯಾಗಲಿ ತಾಲ್ಲೂಕು ಆಡಳಿತ ಜಿಲ್ಲಾಡಳಿತ ಆರ್ ಟಿ ಓ ಸೇರಿದಂತೆ ಯಾವುದೇ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಇರುವುದಕ್ಕೆ ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಇನ್ನಾದರೂ ಸಂಬಂಧಪಟ್ಟಂತ ಇಲಾಖೆ ಇದರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತದೆಯೇ ಕಾದು ನೋಡಬೇಕಿದೆ.
- ಶ್ರೀನಿವಾಸ್ , ಕೊರಟಗೆರೆ