ಕೊಟ್ಟಿಗೆಹಾರ: ಬರುವ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವನೆಗಳನ್ನು ಗುರಿಯಾಗಿಸಿಕೊಂಡು ನನ್ನ ವಿರುದ್ಧ ನಿರಂತರವಾಗಿ ಪಿತೂರಿಮಾಡಲಾಗುತ್ತಿದೆ ಎಂದು ಬಿ. ಹೊಸಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಆಶ್ರಿತ್ ಗೌಡ ಪತ್ರಿಕಾ ಹೇಳಿಕೆ ನೀಡಿದರು.
ಅವರು ಮಾತನಾಡಿ ನಾನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ಕಳೆದ ಹತ್ತು ವರ್ಷದಿಂದ ನಿಷ್ಠೆಯಿಂದ ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇನೆ ಅದರ ಪಲವಾಗಿ ಕಳೆದ ಚುನಾವಣೆಯಲ್ಲಿ ಅತಿಹೆಚ್ಚು ಮತಗಳನ್ನು ಪಡೆದು ಗೆಲುವು ಸಾದಿಸಿ ಇಂದು ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಇದುವರೆಗೂ ಗ್ರಾಮದ ಅನೇಕ ರಸ್ತೆಗಳನ್ನು ಅಭಿವೃದ್ದಿಪಡಿಸಿದ್ದೇನೆ. ಸುಸರ್ಜಿತವಾದ ಕಾಂಕ್ರಿಟ್ ಚರಂಡಿಗಳನ್ನ ಮಾಡಲಾಗಿದೆ ಉತ್ತಮ ಲೈಬ್ರೇರಿಯ ನಿರ್ಮಾಣವಾಗಿದೆ.
ನೂತನ ಶಾಲಾ ಶೌಚಾಲಯಗಳನ್ನು ಮಾಡಲಾಗಿದೆ ಹೈಮಾಸ್ಕ್ ಲೈಟ್ ಗಳನ್ನ ಹಾಕಿಸಿದ್ದೀನಿ ಕೆಲವೇ ದಿನಗಳಲ್ಲಿ ನೂತನ ಪಂಚಾಯತ್ ಭವನ ನಿರ್ಮಾಣ ಕಾಮಗಾರಿಯನ್ನ ಕೈಗೆತುಕೊಳುತ್ತಿದ್ದೇನೆ ನನ್ನ ಪಂಚಾಯ್ತಿಯ ತೆರಿಗೆ ರೂಪದ ವಾರ್ಷಿಕ ಒಟ್ಟು ಆದಾಯ ಕೇವಲ ಎರಡೂವರೆ ಲಕ್ಷಗಳು ಈ ಹಣದಲ್ಲಿ ಎಷ್ಟು ಭ್ರಷ್ಟಾಚಾರ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.
ಜನಸಾಮಾನ್ಯರ ಕುಂದುಕೊರತೆಗಳನ್ನ ಬಗೆಹರಿಸಬೇಕಿದ್ದ ಚುನಾಯಿತ ಸದ್ಯಸರು ಗ್ರಾಮ ಪಂಚಾಯತಿ ಮುಂದೆ ಧರಣಿ ಕೂತಿದ್ದು ಆಡಳಿತದಲ್ಲಿ ಅವರ ಅಸಾಮಾರ್ತಾತೆ ಯನ್ನ ತೋರಿಸುತ್ತದೆ ಎಂದರು. ನನ್ನವಿರುದ್ಧ ಅದರರಾಹಿತವಾಗಿ ಆರೋಪಮಾಡಲಾಗುತ್ತಿದೆ ಬಿ. ಹೊಸಹಳ್ಳಿ ಗ್ರಾಮ ಪಂಚಾಯತಿಯು ನರೇಗಾ ಯೋಜನೆಯನ್ನು ಉತ್ತಮವಾಗಿ ಸದುಪಯೋಗ ಪಡೆದುಕೊಂಡು ತಾಲೂಕಿನಲ್ಲೇ ಮೊದಲ ಸ್ಥಾನದಲ್ಲಿದೆ.
ರಾಜ್ಯ ಸರಕಾರ ಕೊಡುವ 2024ನೇ ಸಾಲಿನ ಗಾಂಧಿಗ್ರಾಮ ಪುರಸ್ಕಾರಕ್ಕೆ ನನ್ನ ಪಂಚಾಯತಿ ಆಯ್ಕೆಯಾಗಿದ್ದು ಎಲ್ಲರಿಗೂ ಹರ್ಷ ತಂದಿದೆ ಬಹುಮಾನದ ರೂಪದಲ್ಲಿ ಬಂದ ಐದು ಲಕ್ಷ ರೂಪಾಯಿಗಳನ್ನ ಸರಕಾರದ ಮಾನದಂಡದ ಆದರದ ಮೇಲೆ ಅಭಿವೃದ್ದಿ ಕಾರ್ಯಕ್ಕೆ ಬಳಸಿಕೊಳ್ಳಲಾಗುವುದು ಎಂದರು.