ಕೊಟ್ಟಿಗೆಹಾರ-ಮೂಡಿಗೆರೆ ತಾಲೂಕಿನ ಅರಮನೆ ತಲಗೂರು ಗ್ರಾಮದಲ್ಲಿ ವಿಜೃಂಭಣೆಯ ಸುಗ್ಗಿ ಹಬ್ಬ ನಡೆಯಿತು.
ಅಜ್ಜಮ್ಮ ಹಾಗೂ ನಾಗಲಮ್ಮ ದೇವರುಗಳ ಜಾತ್ರಾ ಮಹೋತ್ಸವ ಒಂದು ವಾರದಿಂದ ನಡೆಯುತ್ತಿದೆ. ಭಾನುವಾರ ರಾತ್ರಿಯಿಂದ ಪ್ರಾರಂಭವಾದ ರಾತ್ರಿ ಸುಗ್ಗಿ ಹಾಗೂ ಸೋಮವಾರ ಹಗಲು ಸುಗ್ಗಿ ನಡೆಯಿತು. ಸುತ್ತಮುತ್ತಲ ನೂರಾರು ಗ್ರಾಮಸ್ಥರು ಜಾತ್ರಾ ಮಹೋತ್ಸವಕ್ಕೆ ಸಾಕ್ಷಿಯಾದರು.
ಭಾನುವಾರ ರಾತ್ರಿ ನಿಸಾನಿ ಶಬ್ದಕ್ಕೆ ದೇವರ ಅಡ್ಡಿಯೊಂದಿಗೆ ಯುವಕರು ಹೆಜ್ಜೆ ಹಾಕುವುದು ಕಂಡುಬಂತು. ಸೋಮವಾರ ಬೆಳಗ್ಗೆ ಕೆಂಡೋತ್ಸವ ನಡೆಯಿತು.
ಈ ಜಾತ್ರಾ ಮಹೋತ್ಸವಕ್ಕೆ ಅರಮನೆ ತಲಗೂರು, ಮಾಳಿಂಗ ನಾಡು, ಹೆಮ್ಮಕ್ಕಿ, ಬಿಳಗಲಿ,ನೆರಂಕಿ, ಬಲಿಗೆ, ಸುಂಕ ಸಾಲೆ, ಕೆಳಗೂರು ಮೊದಲಾದ ಗ್ರಾಮಗಳಿಂದ ನೂರಾರು ಭಕ್ತರು ಆಗಮಿಸಿದ್ದರು.
ಈ ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರಾದ. ಲೋಕಪ್ಪ ಗೌಡ. ಕೃಷ್ಣೇಗೌಡ. ಅಭಿಜಿತ್. ಮಂಜಪ್ಪ ಶೆಟ್ಟಿ. ಶಂಕರ್ ಶೆಟ್ಟಿ. ಲಕ್ಷ್ಮಣ್ ಗೌಡ್ರು. ಶಂಕರಗೌಡ. ರವಿಚಂದ್ರ. ಸುಧಾಕರ.ರಾಮಚಂದ್ರ. ರತ್ನಾಕರ್. ಅಶ್ವಥ್. ಸುದರ್ಶನ್. ಮೊದಲಾದವರು ಇದ್ದರು