ಹೊಳೆನರಸೀಪುರ: ತಾಲೂಕಿನ ಹಳ್ಳಿ ಮೈಸೂರು ಹೋಬಳಿಯ ಕೋಗಿಲ ಹಳ್ಳಿ ಗ್ರಾಮದಲ್ಲಿ ಬೀರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರೆವೇರಿತು.
ಸಂಸದ ಶ್ರೇಯಸ್ ಪಟೇಲ್ ಹಾಗೂ ಕೆ ಆರ್ ನಗರ ಶಾಸಕ ರವಿ ಶಂಕರ್ ಅವರು ತೇರನ್ನು ಎಳೆಯುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು.
ದೇವಸ್ಥಾನದಲ್ಲಿ ಬೆಳಗ್ಗೆ ಬೀರೇಶ್ವರ ಸ್ವಾಮಿಗೆ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆದವು.ಇನ್ನೂ ಈ ವರ್ಷವೂ ನೇರಳೆ, ಶೀಗವಾಳು ಗ್ರಾಮಸ್ಥರು ಸೇರಿದಂತೆ ಅನೇಕ ಭಕ್ತರು ಪಾಲ್ಗೊಂಡಿದ್ದರು.ಬೀರೇಶ್ವರ ಸೇವಾ ಸಮಿತಿಯ ಅಧ್ಯಕ್ಷರಾದ ದೊಡ್ಡ ಸ್ವಾಮೇ ಗೌಡರ ನೇತೃತ್ವದಲ್ಲಿ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಆಯೋಜಿಸಿದ್ದು ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಮಾಡಲಾಯಿತು.
ಕಾರ್ಯಕ್ರಮ ಉದ್ದೇಶಿಸಿ ಸಂಸದ ಶ್ರೇಯಸ್ ಪಟೇಲ್ ಮಾತನಾಡಿ, ದೇವಾಲಯದ ಅಭಿವೃದ್ಧಿ ಹಾಗೂ ಜೀರ್ಣ ಉದ್ಧಾರಕ್ಕಾಗಿ ಆರ್ಥಿಕವಾಗಿ ಸಹಕರಿಸುವುದಾಗಿ ತಿಳಿಸಿದರು. ಇನ್ನೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷರಾದ ದೊಡ್ಡಸ್ವಾಮೆಗೌಡ, ಉಪಾಧ್ಯಕ್ಷರಾದ ಚಿಕ್ಕೇಗೌಡ, ಕಾರ್ಯದರ್ಶಿ ಸಣ್ಣಸ್ವಾಮಿ ಎಸ್.ಡಿ, ಖಜಾಂಕ್ಷಿ ಹೆಚ್.ಎಸ್. ಕುಮಾರ, ನಿರ್ದೇಶಕಾದ ರಂಗೇಗೌಡ, ಪಿಡಿಒ ಮಹದೇವ್,ಪುಟ್ಟೇಗೌಡರು, ಜವರೇಗೌಡ,ನಿಂಗೇಗೌಡ, ಕೃಷ್ಣೆಗೌಡ, ಚಿಕ್ಕೇಗೌಡ,ಮಂಜುನಾಥ್,ಪುಟ್ಟಸ್ವಾಮಿ,ನೇರಳೆ ಮೋಹನ್,ಧರಣಿ, ಬೇಡಿಗನಹಳ್ಳಿ ಕೊಪ್ಪಲು ಮಂಜು, ಮಡಿವಾಳ ಮಡಿವಾಳ ಮುಖಂಡ ಸಣ್ಣ ಸ್ವಾಮಿ ಸೇರಿದಂತೆ ಇತರರು ಹಾಜರಿದ್ದರು.