ಕೊಟ್ಟಿಗೆಹಾರ: ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಮಳೆಯ ಜೊತೆ ಬಿಸುವ ಬಿರುಗಾಳಿಯಿಂದ ಕೆಲವೆಡೆ ಅವಾಂತರ ಸೃಷ್ಟಿಯಾಗಿದೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದ ತರುವೆ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮಸಭೆ ನಡೆಯುವಾಗ ಭಾರೀ ಗಾಳಿಗೆ ಗ್ರಾಪಂ ಅಧ್ಯಕ್ಷ ಸುಶೀಲ. ಹಾಗೂ ಸದಸ್ಯರ ಮೇಲೆ ಮರದ ರ‍್ಯಾಕ್ ಬಿದ್ದಿದೆ. ಗ್ರಾಮಸಭೆ ನಡೆಯುವಾಗ ಬೀಸಿದ ಗಾಳಿಗೆ ಗ್ರಂಥಾಲಯ ನಿರ್ಮಾಣಕ್ಕಾಗಿ ಇಟ್ಟಿದ್ದ ಮರದ ರ‍್ಯಾಕ್ ಗ್ರಾಪಂ ಅಧ್ಯಕ್ಷರು, ಸದಸ್ಯರ ಮೇಲೆ ಬಿದ್ದಿದ್ದು, ರ‍್ಯಾಕ್ ಬಿದ್ದ ಪರಿಣಾಮ ಪ್ಲಾಸ್ಟಿಕ್ ಚೇರ್ ಗಳು ಕೂಡ ಪುಡಿ-ಪುಡಿಯಾಗಿದೆ.

ಸದ್ಯ ಗ್ರಾಮ ಪಂಚಾಯತಿ ಅಧ್ಯಕ್ಷೆ ಸುಶೀಲ ಸೇರಿ ಐವರಿಗೆ ಸಣ್ಣ-ಪುಟ್ಟ ಗಾಯವಾಗಿದ್ದು,ಪ್ರಾಣಾಪಾಯದಿಂದಾ ಪಾರಾಗಿದ್ದಾರೆ. ಸ್ಥಳದಲ್ಲೇ ಆರೋಗ್ಯ ಇಲಾಖೆ ಸಿಬ್ಬಂದಿ ಚಿಕಿತ್ಸೆ ನೀಡಿದ್ದಾರೆ.