ತುಮಕೂರು-ವಿಶ್ವವಿದ್ಯಾನಿಲಯದಿಂದ ಆರತಿ ಪಟ್ರಮೆಗೆ ಪಿಎಚ್.ಡಿ ಪದವಿ


ತುಮಕೂರು: ವಿದ್ಯಾನಿಧಿ ಪದವಿ ಪೂರ್ವ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕಿ, ಯಕ್ಷಗಾನ ಕಲಾವಿದೆ ಆರತಿ ಪಟ್ರಮೆಯವರಿಗೆ ತುಮಕೂರು ವಿಶ್ವವಿದ್ಯಾನಿಲಯವು ಪಿಎಚ್.ಡಿ. ಪದವಿ ನೀಡಿದೆ.

ಅವರು ವಿವಿಯ ಇಂಗ್ಲಿಷ್ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ಪ್ರಾಧ್ಯಾಪಕ ಡಾ.ಎನ್.ಎಸ್.ಗುಂಡೂರ್ ಅವರ ಮಾರ್ಗದರ್ಶನದಲ್ಲಿ ‘ಯಕ್ಷಗಾನ ನೆಗೋಸಿಯೇಶನ್ಸ್: ಆನ್ ಇನ್‌ಕ್ವೆರಿ ಇಂಟು ಅಡಾಪ್ಟೇಶನ್ಸ್ ಆಫ್ ಶೇಕ್ಸ್ಪಿಯರಿಯನ್ ಪ್ಲೇಸ್’ ಎಂಬ ಮಹಾಪ್ರಬಂಧವನ್ನು ಸಿದ್ಧಪಡಿಸಿ ಮಂಡಿಸಿದ್ದರು.

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರಾದ ಆರತಿ ನಿವೃತ್ತ ಮುಖ್ಯಶಿಕ್ಷಕ ಕೆ. ಭೀಮಭಟ್-ಲೀಲಾಭಟ್ ದಂಪತಿ ಪುತ್ರಿ. ತುಮಕೂರಿನಲ್ಲಿ ‘ಯಕ್ಷದೀವಿಗೆ’ ಸಂಸ್ಥೆಯನ್ನು ಸ್ಥಾಪಿಸಿ ಕಳೆದ ಹತ್ತು ವರ್ಷಗಳಿಂದ ಯಕ್ಷಗಾನ ತರಗತಿಗಳನ್ನು ನಡೆಸುತ್ತಿದ್ದಾರೆ.

  • ಕೆ.ಬಿ.ಚಂದ್ರಚೂಡ

Leave a Reply

Your email address will not be published. Required fields are marked *