ಆಸ್ತಿ ಕಲಹ-ಅಪ್ಪನನ್ನೇ ಕೊಂದ ಮಗ

ಕೊರಟಗೆರೆ:-ಆಸ್ತಿಯ ವಿಷಯವಾಗಿ ತಂದೆಯನ್ನೇ ಕ್ರೂರವಾಗಿ ಮಗನೆ ಕೊಂದಿರುವ ಘಟನೆ ತಾಲೂಕಿನ ಕೋಲಾಳ ಪೊಲೀಸ್ ಠಾಣಾ ವ್ಯಾಪ್ತಿಯ ಅಲಪನಹಳ್ಳಿ ಯಲ್ಲಿ ನಡೆದಿದೆ.ಕೊ,ಲೆಯಾದ ದುರ್ದೈವಿ ವೆಂಕಟಪ್ಪ ತನ್ನ ಸಂಪೂರ್ಣ ಆಸ್ತಿಯನ್ನು ಹಾಗು 25 ಲಕ್ಷ ರೂಪಾಯಿ ಹಣವನ್ನು ಮಗಳಿಗೆ ನೀಡಿದ್ದ.ಇದರಿಂದ ಕೋಪಗೊಂಡಿದ್ದ ಮಗ ಸಿದ್ದಪ್ಪ ಹಲವರ ಬಳಿ ತಂದೆಯನ್ನು ಕೊ,ಲೆ ಮಾಡುವುದಾಗಿ ಹೇಳಿಕೊಂಡು ತಿರುಗಿದ್ದ.

ಪಂಚಾಯತಿಯು ನಡೆದಿತ್ತು..

ಇದೆ ವಿಷಯವಾಗಿ ಗ್ರಾಮಸ್ಥರ ಸಮ್ಮುಖದಲ್ಲಿ ನ್ಯಾಯ ಪಂಚಾಯತಿಗಳು ನಡೆದಿದ್ದವು.ಆ ಸಮಯದಲ್ಲೂ ವೆಂಕಟಪ್ಪ ಆಸ್ತಿ ಹಾಗು ಹಣವನ್ನು ಆರೋಪಿ ಸಿದ್ದಪ್ಪನಿಗೆ ನೀಡಲು ಒಪ್ಪದೇ ಮಗಳು ವರಾಲಮ್ಮನಿಗೆ ಕೊಡುವುದಾಗಿ ಹಠ ಹಿಡಿದಿದ್ದ.ಅದರಂತೆಯೇ ಹಣವನ್ನು ಹಾಗು ಆಸ್ತಿಯನ್ನು ಮಗಳ ಹೆಸರಿಗೆ ಕಳೆದ ಎರಡು ತಿಂಗಳ ಹಿಂದೆ ವರ್ಗಾಯಿಸಿದ್ದ.

ಇನ್ನು ಬಿಡುವ ಮಾತೆ ಇಲ್ಲ…

ಯಾವಾಗ ಆಸ್ತಿ ಹಾಗು ಹಣ ತನ್ನ ಕೈತಪ್ಪಿಹೋಯಿತು ಎಂಬುದು ಗೊತ್ತಾಯಿತೋ ಆರೋಪಿ ಇನ್ನು ಅಪ್ಪನನ್ನು ಕೊಂದೇ ತೀರಬೇಕೆಂದು ನಿರ್ದರಿಸಿಬಿಟ್ಟಿದ್ದ.

ಬೈಕಿಗೆ ಮಚ್ಚು ಸಿಕ್ಕಿಸಿಕೊಂಡು ತಂದೆಯನ್ನು ಕೊ,ಲೆ ಮಾಡುತ್ತೇನೆ ಎಂದು ಹೇಳಿಕೊಂಡು ತಿರುಗುತ್ತಿದ್ದ ಸಿದ್ದಪ್ಪ ಹಾಗೆಯೇ ಮಾಡಿಯೂ ಬಿಟ್ಟಿದ್ದಾನೆ.ಕೈಗೆ ಸಿಕ್ಕ ವೆಂಕಟಪ್ಪನನ್ನು ಜನ್ಮ ಕೊಟ್ಟ ತಂದೆ ಎಂಬ ಕರುಣೆಯನ್ನು ತೋರಿಸದೆ ಕೊಚ್ಚಿ ಕೊ,ಲೆ ಮಾಡಿ ಪರಾರಿ ಆಗಿದ್ದಾನೆ.

ಸ್ಥಳಕ್ಕೆ ತುಮಕೂರು ಅಡಿಷನಲ್ ಎಸ್ ಪಿ ಮರಿಯಪ್ಪ , ಡಿ ವೈ ಎಸ್ ಪಿ ರಾಮಚಂದ್ರಪ್ಪ , ಸಿಪಿಐ ಹನುಮಂತರಾಯಪ್ಪ ,ಪಿಎಸ್ಐ ರೇಣುಕಾಯಾದವ್,ಯೋಗೇಶ್ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.ಪ್ರಕರಣ ದಾಖಲಿಸಿಕೊಂಡಿರುವ ಕೊಳಾಲ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.

× How can I help you?