ಚಿಕ್ಕಮಗಳೂರು-ಈ ವರದಿಯನ್ನು ಓದದೇ ಇರಬೇಡಿ-ಅಭಿಜ್ಞ ಎಂಬ ಪುಟ್ಟ ಕಂದಮ್ಮನ ಜೀವ ಉಳಿಸಲು ದಯಮಾಡಿ ನೇರವಾಗಿ.

ಚಿಕ್ಕಮಗಳೂರು-ಇದೊಂದು ದುರಂತದ ವರದಿ.

ಈ ವರದಿ ಓದಿದ ತಕ್ಷಣ ನಿಮ್ಮ ಕೈಲಾದ ಆರ್ಥಿಕ ಸಹಾಯವನ್ನು ಈ ಮಗುವಿಗೆ ಮಾಡದೇ ಇರಬೇಡಿ.ಜೊತೆಗೆ ನಿಮಗೆ ತಿಳಿದಿರುವ ದಾನಿಗಳಿಗೆ ಈ ವರದಿಯನ್ನು ಕಳುಹಿಸಿ.

ಇನ್ನು ಪ್ರಪಂಚವನ್ನೇ ನೋಡದ ಆರೇ ಆರು ವರ್ಷದ ಪುಟ್ಟ ಕಂದಮ್ಮ ಅಭಿಜ್ಞಾಳಿಗೆ ಮಾರಕ ಮೂತ್ರಪಿಂಡದ ಕ್ಯಾನ್ಸರ್ ಕಾಡುತ್ತಿದೆ.

ನಗರದ ಹಿರೇಮಗಳೂರಿನ ಹರ್ಷಲತ,ದೀಪಕ್ ದಂಪತಿಗಳ ಪುತ್ರಿಯಾದ ಅಭಿಜ್ಞ ಒಂದಷ್ಟು ದಿನಗಳಿಂದ ಈ ಘನಘೋರ ಕಾಯಿಲೆಯಿಂದ ಬಳಲುತ್ತಿದ್ದು,ಬಡ ಪೋಷಕರು ತಮ್ಮ ಕೈಲಿದ್ದ ಹಣವನ್ನೆಲ್ಲ ನೀರಿನಂತೆ ಮಗುವಿನ ಚಿಕಿತ್ಸೆಗೆ ಖರ್ಚು ಮಾಡಿ ಕೈ ಖಾಲಿ ಮಾಡಿಕೊಂಡು ನಿಮ್ಮಿಂದ ಆರ್ಥಿಕ ಸಹಾಯವನ್ನು ನಿರೀಕ್ಷೆ ಮಾಡುತ್ತಿದ್ದಾರೆ.

ಮೂತ್ರಪಿಂಡದ ಕ್ಯಾನ್ಸರ್ ಆಕೆಯ ಕಿಡ್ನಿಯನ್ನೇ ನಿಷ್ಕ್ರೀಯ ಗೊಳಿಸುವ ಸಾಧ್ಯತೆಗಳಿದ್ದು ಅದನ್ನು ತಡೆಗಟ್ಟಲು ಹೆಚ್ಚು ವೆಚ್ಚದ ಚಿಕಿತ್ಸೆಯ ಅಗತ್ಯವಿದೆ.ಸದ್ಯ ಬೆಂಗಳೂರಿನ ಶಂಕರ್ ಆಸ್ಪತ್ರೆಯಲ್ಲಿ ಅಭಿಜ್ಞಾಳಿಗೆ ಚಿಕಿತ್ಸೆ ನಡೆಯುತ್ತಿದ್ದು ತಾವುಗಳು ಈ ಕೆಳಗೆ ಕೊಟ್ಟಿರುವ ಬ್ಯಾಂಕ್ ಖಾತೆಗೆ ಅಷ್ಟು ಇಷ್ಟು ಅಂತಲ್ಲ ಕೈಲಾದಷ್ಟು ಸಹಾಯವನ್ನು ಮಾಡಬಹುದು.

ನಾವು ಇಂದು ಮಾಡಿದ ಸಣ್ಣಪುಟ್ಟ ಪುಣ್ಯಗಳೇ ಏಳೇಳು ಜನುಮಕ್ಕೂ ನಮ್ಮ ವಂಶವನ್ನು ಕಾಯುತ್ತೆ.

ದಯಮಾಡಿ ಮರೆಯದೆ ಸಹಾಯಮಾಡಿ.

ಸಹಾಯ ಮಾಡಲು ಬಯಸುವ ಸಹೃದಯಿಗಳು ಕೆಳಗೆ ನೀಡಿರುವ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿ ನೆರವಾಗಬಹುದು.

ಹೆಸರು:ಪಿ. ದೀಪಕ್
ಬ್ಯಾಂಕ್ ಹೆಸರು:ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ
ಖಾತೆ ಸಂಖ್ಯೆ: 22160110059012
ಶಾಖೆ:ಚಿಕ್ಕಮಗಳೂರು.
ಮೊಬೈಲ್ ಸಂಖ್ಯೆ: 94492 13909

———————————-ಪ್ರಕಾಶ್ ಕೋಟಿಗನಹಳ್ಳಿ

Leave a Reply

Your email address will not be published. Required fields are marked *

× How can I help you?