ತುಮಕೂರು: ಎದೆ ನೋವು ಬಂದಾಗ ವಿಶ್ರಾಂತಿ ಪಡೆಯಬೇಕು ಹೃದಯದ ಬಗ್ಗೆ ಹೆಚ್ಚು ಜಾಗೃತಿ ವಹಿಸಬೇಕು,ಹೃದಯಾಘಾತ ಆದಾಗ ತಕ್ಷಣ ಪ್ರಥಮ ಚಿಕಿತ್ಸೆ ನೀಡಬೇಕು ಎಂದು ಬೆಂಗಳೂರಿನ ಜೀವ ರಕ್ಷಾ ಟ್ರಸ್ಟ್ ನ ಕೋ ಆರ್ಡಿನೇಟರ್ ಡಾ||ರಾಘವಿ.ಎಂ.ರವರು ತಿಳಿಸಿದರು.
ಅವರು ಇಂದು ನಗರದ ಹನುಮಂತಪುರದಲ್ಲಿರುವ ಶ್ರೀ ಕೊಲ್ಲಾಪುರದಮ್ಮ ಕಲ್ಯಾಣ ಮಂಟಪದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ನಡೆದ ಮಹಿಳಾ ಜ್ಞಾನವಿಕಾಸ ತಾಲ್ಲೋಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಆಗಮಿಸಿ ವಿಶೇಷ ಉಪನ್ಯಾಸವನ್ನು ನೀಡಿದರು.
ಒಂದು ನಿಮಿಷಕ್ಕೆ ೧೦೦ ಬಾರಿ ಹೃದಯವನ್ನು ಒತ್ತಬೇಕು, ಹೃದಯಾಘಾತವಾಗಲು ಇಂದಿನ ಆಹಾರ ಕ್ರಮ, ವಾಕಿಂಗ್ ಇಲ್ಲದಿರುವುದು,ಗಾಬರಿ ಆಗುವುದು,ಹಣ್ಣು ತಾಜಾ ತರಕಾರಿ ತಿನ್ನದಿರುವುದು,ಸರಿಯಾದ ನಿದ್ರೆ ಇಲ್ಲದಿರುವುದು ಅತಿಯಾದ ಕೊಲೆಸ್ಟಾçಲ್ ಇರುವ ಆಹಾರವನ್ನು ತಿನ್ನುವುದು ಇತ್ಯಾದಿಗಳಿಂದ ಹೃದಯಾಘಾತವಾಗುತ್ತದೆ,ಹೃದಯಾಘಾತವಾದ ತಕ್ಷಣ ಸಿಪಿಆರ್ ಮಾಡಬೇಕು,ಬೊಜ್ಜು ಕಡಿಮೆ ಮಾಡಿ ಮೊಳಕೆ ಕಾಳುಗಳು,ತಾಜಾ ಹಣ್ಣು ತರಕಾರಿಗಳನ್ನು ಹೆಚ್ಚಾಗಿ ಸೇವಿಸಿ ಕೊಲೆಸ್ಟ್ರಾಲ್ ಕಡಿಮೆ ಮಾಡಿ ತಿಳಿಸಿದರು.

ಅನಿಕೇತನ ಟ್ರಸ್ಟ್ ನ ಮಕ್ಕಳ ಆರೋಗ್ಯ ಮತ್ತು ಅಭಿವೃದ್ಧಿ ತಜ್ಞ ಡಾ||ಯಮುನಾ.ಬಿ.ಎನ್.ರವರು ಮಾತನಾಡಿ, ಮಹಿಳೆಯರು ಯಾವುದೇ ಸಂಕೋಚವಿಲ್ಲದೆ ತಜ್ಞ ವೈದ್ಯರಲ್ಲಿ ಆರೋಗ್ಯ ತಪಾಸಣೆ ಮಾಡಿಸಬೇಕು. ಇಂದು ಪ್ರತಿ ವರ್ಷ ೨ಕೋಟಿ ಜನರಿಗೆ ಕ್ಯಾನ್ಸರ್ ರೋಗ ಬರುತ್ತಿದೆ ಅದರಲ್ಲಿ೧ಕೋಟಿ ಜನ ಕ್ಯಾನ್ಸರ್ ನಿಂದ ಮರಣ ಹೊಂದುತ್ತಿದ್ದಾರೆ. ತಂಬಾಕು, ಬೀಡಿ ಸಿಗರೇಟು ಸೇದಬಾರದು ಗರ್ಭಕೋಶದ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಕಂಕುಳಲ್ಲಿ ಗಂಟುಗಳು ಸಹ ಬರುತ್ತಿದ್ದು ಯಾವುದೇ ಅನುಮಾನವಿದ್ದಲ್ಲಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ಎಂದು ಮಹಿಳೆಯರಲ್ಲಿ ಮನವಿ ಮಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಜಿಲ್ಲಾ ನಿರ್ದೇಶಕರಾದ ಸತೀಶ್ ಸುವರ್ಣರವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಹಿಳೆಯರಿಗೆ ಎಸ್.ಬಿ.ಐ.ಬ್ಯಾಂಕ್ ಮೂಲಕ ಸಾಲ ಕೊಡಿಸುತ್ತಿದ್ದು ಅದರಿಂದ ಗ್ರಾಮೀಣ ಪ್ರದೇಶದ ಮಹಿಳೆಯರು ಸ್ವ ಉದ್ಯೋಗ ಕೈಗೊಂಡು ಆರ್ಥಿಕವಾಗಿ ಮುಂದುವರಿಯುತ್ತಿರುವುದು ನಮ್ಮ ಸಂಸ್ಥೆಗೆ ಹೆಮ್ಮೆ,ಪ್ರತಿ ವರ್ಷ ವಿದ್ಯಾರ್ಥಿಗಳಿಗೆ ಸ್ಕಾ¯ರ್ ಶಿಪ್,ವೃದ್ಧರಿಗೆ ಮಾಸಾಶನ,ಶುದ್ಧಗಂಗಾ ಯೋಜನೆಯಿಂದ ೫ರೂಗೆ ೨೦ ಲೀ ಶುದ್ಧ ನೀರು ನೀಡುತ್ತಿದ್ದೇವೆ ಸಾವಿರಾರು ಕಾರ್ಯಕ್ರಮಗಳನ್ನು ಸಮಾಜಕ್ಕಾಗಿ ಪೂಜ್ಯ ಡಾ||ಡಿ.ವೀರೇಂದ್ರಹೆಗ್ಗಡೆರವರು ಮಾಡುತ್ತಿದ್ದಾರೆ,ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಆರ್ಥಿಕವಾಗಿ ಸಬಲೀಕರಣ ಮಾಡುವುದು ನಮ್ಮ ಗುರಿ ಎಂದು ಹೇಳಿದರು.
ವೇದಿಕೆಯಲ್ಲಿ ಪ್ರಾದೇಶಿಕ ಜ್ಞಾನವಿಕಾಸ ಕೇಂದ್ರದ ಯೋಜನಾಧಿಕಾರಿ ಸಂಧ್ಯಾ.ವಿ.ಶೆಟ್ಟಿ,ತಾಲ್ಲೋಕು ಯೋಜನಾಧಿಕಾರಿ ಪಿ.ಬಿ.ಸಂದೇಶ್ ತಿಮ್ಮಯ್ಯನಾಯಕ್, ಡಾ||ನಯನ ,ಡಾ||ಶ್ರಾವ್ಯ ಮುಂತಾದವರು ಉಪಸ್ಥಿತರಿದ್ದರು.
– ಕೆ.ಬಿ.ಚಂದ್ರಚೂಡ್ ತುಮಕೂರು