ಹಾಸನ– ಒಳಾಂಗಣ ಹಾಗೂ ಹೊರಂಗಣ ತರಬೇತಿಯಲ್ಲಿ ಪ್ರಶಿಕ್ಷಣಾರ್ಥಿಗಳು ತಮ್ಮ ಕೌಶಲ್ಯವನ್ನು ವೃದ್ಧಿಸಿಕೊಂಡು, ದೈಹಿಕ ಹಾಗೂ ಮಾನಸಿಕವಾಗಿ ಸಧೃಢವಾಗಬೇಕೆಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಕುಮಾರ್ ಕರೆ ನೀಡಿದರು.
ಕರ್ನಾಟಕ ರಾಜ್ಯ ಪೊಲೀಸ್ ತರಬೇತಿ ಶಾಲೆ, ಶಾಂತಿಗ್ರಾಮ, ಹಾಸನ,ದಲ್ಲಿ ನಡೆದ 3 ನೇ ತಂಡದ ಎಪಿಸಿಗಳ ಬುನಾದಿ ತರಭೇತಿಯ ಉದ್ಘಾಟನ ಸಮಾರಂಭ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರತಿ 3 – 4 ತಿಂಗಳಿಗೊಮ್ಮೆ ಎಲ್ಲಾ ಪೊಲೀಸ್ ತರಬೇತಿ ಶಾಲೆಗಳಿಗೆ ಭೇಟಿ ನೀಡಿ,ಪರಿಶೀಲನೆ ನಡೆಸುತ್ತಿದ್ದು, ಪ್ರತಿ ಪೊಲೀಸ್ ತರಭೇತಿಯು ಕೌಶಲ್ಯಭರಿತವಾಗಿ ನಡೆಯುತ್ತಿದೆಯೋ ಇಲ್ಲವೋ, ತರಭೇತಿ ಪಡೆಯುತ್ತಿರುವವರು ಯಾವ ರೀತಿ ತರಭೇತಿಯಲ್ಲಿ ಪರಿಣತಿಯನ್ನು ಹೊಂದುತ್ತಿದ್ದಾರೆ ಎಂಬುದು ಮುಖ್ಯವಾಗಿ ಗಮನದಲ್ಲಿಟ್ಟುಕೊಂಡು ನಿಗಾವಹಿಸುತ್ತಿದ್ದೇವೆ.
ಪಿಎಸ್ ಐ, ಡಿ ಎಸ್ ಪಿ, ಎಸೈ, ಸಿಪಿಸಿ ಸೇರಿದಂತೆ ಪೊಲೀಸ್ ತರಭೇತಿಯಲ್ಲಿ ಬಹಳ ದೊಡ್ಡ ಬದಲಾವಣೆ ತಂದಿದ್ದು, ಈ ಸಂಬಂಧ ತರಭೇತಿಗೆ ಸಲಹೆ ಸೂಚನೆ ನೀಡಿದ್ದು, ಅದರಂತೆ ತರಭೇತಿ ನೀಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಪ್ರತಿಯೊಬ್ಬರು ತರಬೇತಿ ಮುಗಿಯುವುದರೊಳಗೆ, ವೃತ್ತಿಪರ ಕೌಶಲ್ಯ ಪರಿಣತಿಯನ್ನು ಪಡೆದಿರಬೇಕು ಎಂದು ಸೂಚಿಸಿದರು.
ಕರ್ನಾಟಕ ರಾಜ್ಯ ಪೊಲೀಸ್ ತರಬೇತಿ ಶಾಲೆ, ಶಾಂತಿಗ್ರಾಮ ಪ್ರಾಂಶುಪಾಲ ನಾಗರಾಜು ಮಾತನಾಡಿ, ತರಭೇತಿಯಲ್ಲಿರುವ ಪ್ರಶಿಕ್ಷಣಾರ್ಥಿಗಳು, ತರಭೇತಿದಾರರ ಹಾಗೂ ಇದುವರೆಗೂ ತರಭೇತಿಯಲ್ಲಿ ನಡೆದ ಕಾರ್ಯವೈಖರಿ ಹಾಗೂ ಕಾರ್ಯಕ್ರಮದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ತರಬೇತಿ ಶಾಲೆ ಹೊಸದಾಗಿ ನಿರ್ಮಿಸಲಾಗಿರುವ ಮಾದರಿ ಠಾಣೆಯನ್ನು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಕುಮಾರ್ ಉದ್ಘಾಟಿಸಿ, ತರಭೇತಿಯಲ್ಲೇ ಠಾಣಾ ಕೆಲಸ ನಿರ್ವಹಣೆ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದರು, ನಂತರ ತರಬೇತಿ ಶಾಲಾ ಆವರಣದಲ್ಲಿ ಗಿಡ ನೆಡುವ ಮೂಲಕ ಪರಿಸರ ಜಾಗೃತಿ ಮೂಡಿಸಿದರು.

ಕಾರ್ಯಕ್ರಮದಲ್ಲಿ ಎಸ್ಪಿ ಮಹಮ್ಮದ್ ಸುಚೇತ, ಡಿವೈ ಎಸ್ಪಿ ತಮಯ್ಯ, ಹೆಚ್ಚವರಿ ಡಿ ವೈ ಎಸ್ಪಿ ವೆಂಕಟೇಶ ನಾಯ್ಢು, ತರಭೇತಿ ಶಾಲೆ ಒಳಾಂಗಣ ಹಾಗೂ ಹೊರಂಗಣ ತರಭೇತಿದಾರರು, ಪ್ರಶಿಕ್ಷಣಾರ್ಥಿಗಳು ಮುಂತಾದವರು ಹಾಜರಿದ್ದರು.
- ಮಾಲಾ ಬಿ.ಎಸ್