ಹಾಸನ:ನಿರಂತರ ಪರಿಶ್ರಮ,ಶ್ರದ್ಧೆಯಿಂದ ಅಧ್ಯಯನ ಮಾಡಿದರೆ ಸಾಧನೆಯ ಮಾರ್ಗ ಕಠಿಣವಾಗಲಾರದು ಎಂದು ಅಕ್ಷರ ಅಕಾಡೆಮಿ ಮುಖ್ಯಸ್ಥ ಬಿ.ಕೆ. ಟೈಮ್ಸ್ ಗಂಗಾಧರ್ ಹೇಳಿದರು.
ನಗರದ ಅಕ್ಷರ ಅಕಾಡೆಮಿಯಲ್ಲಿ ಭಾನುವಾರ ಸಂಸ್ಥೆಯಿoದ ತರಬೇತಿ ಪಡೆದು ಈ ಬಾರಿಯ ಪೊಲೀಸ್ ಇಲಾಖೆಯ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಿ ಪೋಲಿಸ್ಇಲಾಖೆ ಸೇರಿದ 13 ಜನ ಯುವ ಸ್ಪರ್ಧಿಗಳಿಗೆ ಹಮ್ಮಿಕೊಂಡಿದ್ದ ಅಭಿನoದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಳೆದ ಕೆಲವು ವರ್ಷಗಳ ಹಿಂದೆ ಜಿಲ್ಲೆಯ ಹಾಗೂ ಸುತ್ತಮುತ್ತಲಿನ ಜಿಲ್ಲೆಯ ಯುವಕರಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಅನುಕೂಲವನ್ನುಂಟು ಮಾಡುವ ಸಲುವಾಗಿ ಆರಂಭಿಸಿದ ಅಕ್ಷರ ಅಕಾಡೆಮಿಗೆ ಈ ಭಾರಿ ಹೆಚ್ಚು ಸಂತಸ ಪಡುವಂತಾಗಿದೆ. ನಮ್ಮ ಸಂಸ್ಥೆಯ ೧೩ 13ವಿದ್ಯಾರ್ಥಿಗಳು ಈ ಬಾರಿ ಪೊಲೀಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಅವರುಗಳ ಸಾಧನೆ ಮಾಡುವುದರ ಜೊತೆಗೆ ಸಂಸ್ಥೆಗೆ ಒಳ್ಳೆಯ ಹೆಸರು ತಂದಿದ್ದಾರೆ.
ಯಾವುದೇ ವ್ಯಕ್ತಿ ನಿರಂತರವಾಗಿ ಕಷ್ಠಪಟ್ಟು ಅಧ್ಯಯನ ಮಾಡಿದರೆ ಸಾಧನೆ ಮಾಡುವುದು ಕಷ್ಟವಲ್ಲ ಎಂಬುವುದನ್ನು ನಿರೂಪಿಸಿದ್ದಾರೆ.ಸಮಾಜದಲ್ಲಿ ದಿನೇ ದಿನೇ ಸ್ಪರ್ಧೆ ಹೆಚ್ಚುತ್ತಿದೆ ಎಂದೇ ಎಲ್ಲರೂ ಹೇಳುತ್ತಾರೆ.ಆದರೆ ಸ್ಪರ್ಧೆ ಇಲ್ಲವೆಂಬುವುದು ನನ್ನ ಅನಿಸಿಕೆ, ಲಿಫ್ಟ್ ನಲ್ಲಿ ಹೋಗಲು ನೂಕು ನುಗ್ಗಲು ಇರುತ್ತೆ.ಆದ್ರೆ ಮೆಟ್ಟಿಲು ಹತ್ತುವವರ ಸಂಖ್ಯೆ ಒಂದೋ ಎರಡು.ಹಾಗಿದ್ದಲ್ಲಿ ಸ್ಪರ್ಧೆ ಎಲ್ಲಿ? ದೊಡ್ಡ ಗುರಿ ಇಟ್ಟುಕೊಂಡು ಆ ಗುರಿಯನ್ನೇ ಉಸಿರಾಗಿಸಿಕೊಂಡು ಪ್ರಾಮಾಣಿಕವಾಗಿ ಶ್ರಮಪಡುವವನಿಗೆ ಸ್ಪರ್ಧಿಗಳೇ ಇರುವುದಿಲ್ಲ ದುರಾದೃಷ್ಟವಶಾತ್ ಸುಲಭದ ಮಾರ್ಗದತ್ತಲೇ ಯುವಕರ ದೃಷ್ಟಿ ಎಂದು ವಿಷಾದ ವ್ಯಕ್ತ ಪಡಿಸಿದರು.
ಅತೀ ಕಡಿಮೆ ಮೊತ್ತದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಗುಣಮಟ್ಟದ ತರಬೇತಿ ನೀಡುತ್ತಿರುವ ಹಾಸನದ ಏಕೈಕ ಸಂಸ್ಥೆ ಅಕ್ಷರ ಅಕಾಡೆಮಿ.ಈ ಅವಕಾಶವನ್ನು ಯುವಕರು ಹೆಚ್ಚು ಹೆಚ್ಚು ಬಳಸಿಕೊಳ್ಳಬೇಕು.ಐವತ್ತಕ್ಕೂ ಕಡಿಮೆ ಸಂಖ್ಯೆಯಲ್ಲಿ ತರಬೇತಿ ಪಡೆದ ಸ್ಪರ್ಧಾಳುಗಳಲ್ಲಿ 13 ಜನ ಸರ್ಕಾರಿ ಉದ್ಯೋಗಕ್ಕೆ ಆಯ್ಕೆ ಆಗಿರುವುದು ಅಕ್ಷರ ಅಕಾಡೆಮಿಯ ಅತಿ ದೊಡ್ಡ ಯಶಸ್ಸಾಗಿದ್ದು, ನಮ್ಮ ಮುಂದಿನ ಪಯಣ ಮತ್ತಷ್ಟು ಹೆಮ್ಮೆಯದ್ದು ಎಂದು ನುಡಿದರು.
ಪಡುವಲಹಿಪ್ಪೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಧ್ಯಾಪಕ ಡಾ.ಶಿವಕುಮಾರ್ ಮಾತನಾಡಿ, ಧಾರವಾಡದಂಥ ನಗರಗಳ ಮುಖ್ಯ ರಸ್ತೆಗಳಲ್ಲಿ ಹೆಜ್ಜೆಹೆಜ್ಜೆಗೂ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರಗಳಿವೆ.ಬಾರ್ ಗಳ ಸಂಖ್ಯೆ ಕಡಿಮೆ.ಹಾಸನದಲ್ಲಿ ರಸ್ತೆಯುದ್ಧಕ್ಕೂ ಬಾರುಗಳಿವೆ.ಆದರೆ ತರಬೇತಿ ಸಂಸ್ಥೆ ಒಂದೇ.ನಮ್ಮಲ್ಲಿ ಜ್ಞಾನದ ಹಸಿವಿಲ್ಲ. ಇದು ಬಹಳ ನೋವಿನ ಸಂಗತಿ. ಪೊಲೀಸ್ಇಲಾಖೆಗೆ ಆಯ್ಕೆಯಾದ ಯುವಕರು ಇನ್ನಷ್ಟು ಉನ್ನತ ಹುದ್ದೆಗಳನ್ನು ಹೊಂದಲಿ ಎಂದು ಹಾರೈಸಿದರು.
ಕೊಣನೂರು ಬಿ.ಎಂ. ಶೆಟ್ಟಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಮಹೇಶ್ ಮಾತನಾಡಿ, ಒಂದು ಸರ್ಕಾರಿ ಉದ್ಯೋಗಕ್ಕೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ಅರ್ಜಿಗಳು ಹೋಗುತ್ತವೆ.ಆದರೆ ದೃಢ ನಿರ್ಧಾರ ಮಾಡಿ ಶ್ರಮ ಪಡುವವರು ಮೂರಂಕಿ ಸಂಖ್ಯೆಯಲ್ಲಿರುತ್ತಾರೆ.ಉಳಿದ ಲಕ್ಷ ಲಕ್ಷ ಯುವಕರು ಉದ್ಯೋಗವೂ ಇಲ್ಲದೇ,ವಿಶ್ವಾಸವೂ ಇಲ್ಲದೇ, ಉತ್ಸಾಹವೂ ಇಲ್ಲದೇ ಕೌಶಲ್ಯವೂ ಇಲ್ಲದೇ ಸಮಾಜಕ್ಕೆ, ಕುಟುಂಬಕ್ಕೆ ಹೊರೆಯಾಗಿಯೋ, ಅಪಾಯಕಾರಿಯೋ
ಬದುಕುತ್ತಿರುತ್ತಾರೆ. ಶಿಕ್ಷಣದ ಜೊತೆಜೊತೆಗೆ ಕೌಶಲ್ಯ ಪೂರಿತ ತರಬೇತಿ ನೀಡುವುದು ವ್ಯವಸ್ಥೆಯ ಕರ್ತವ್ಯವಾಗಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆಗೆ ಆಯ್ಕೆಯಾದ 13 ಸ್ಪರ್ಧಾಳುಗಳ ಜೊತೆಗೆ ಅವರಿಗೆ ತರಬೇತಿ ನೀಡಿದ ಸಂಸ್ಥೆಯ ಉಪನ್ಯಾಸಕರಾದ ಕಾರ್ತಿಕ್, ಶ್ರೀನಾಥ್, ಹರೀಶ್ ಅವರುಗಳನ್ನೂ ಸನ್ಮಾನಿಸಲಾಯಿತು.
————————————–ಪ್ರಕಾಶ್ ಕೋಟಿಗನಹಳ್ಳಿ