ತುಮಕೂರು-‌ ಅಕ್ಷಯ ಇಂಜಿನಿಯರಿಂಗ್ ಕಾಲೇಜಿಗೆ ಎನ್.ಬಿ.ಎ.ಮಾನ್ಯತೆ-ಡಾ||ಕೆ.ವಿ.ಶ್ರೀನಿವಾಸರಾವ್

ತುಮಕೂರು: ಕಳೆದ 15 ವರ್ಷಗಳಿಂದ ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಅಕ್ಷಯ ಇನ್ಸಿಟ್ಯೂಟ್ ಅಫ್ ಟೆಕ್ನಾಲಜಿಗೆ ಎನ್.ಬಿ.ಎ(ನ್ಯಾಷನಲ್ ಬೋರ್ಡಅಫ್‌ಅಕ್ರಿಡೇಷನ್) ಮಾನ್ಯತೆ ಲಭಿಸಿದ್ದು, ಎನ್.ಬಿ.ಎ ಮಾನ್ಯತೆ ಪಡೆದ ಅತ್ಯಂತ ಕಿರಿಯ ವಯಸ್ಸಿನ ನಾನ್ ಅಟಾನಮಸ್ ಕಾಲೇಜಾಗಿದೆ ಎಂದು ಅಕ್ಷಯ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ವಿ.ಶ್ರೀನಿವಾಸ್‌ರಾವ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, 2025ನೇ ಮೇ.11,12 ಮತ್ತು 13 ರಂದುಕಾಲೇಜಿಗೆ ಭೇಟಿ ನೀಡಿದ್ದ ಎನ್.ಬಿ.ಎ ತಂಡ ಹತ್ತು ಮಾನದಂಡಗಳ ಆಧಾರದಲ್ಲಿ ಕಾಲೇಜಿನ ಬೌತಿಕ ಮತ್ತು ಬೌದ್ಧಿಕ ವಿಚಾರಗಳನ್ನು ಪರಿಶೀಲಿಸಿ, ಗುಣಮಟ್ಟದ ಶಿಕ್ಷಣ,ಸಂಶೋಧನೆ,ವಿದ್ಯಾರ್ಥಿಗಳ ಪ್ರವೇಶ ಎಲ್ಲವನ್ನು ಪರಿಗಣಿಸಿ, ಮೇ.28 ರಂದು ಬಿಡುಗಡೆ ಮಾಡಲಾದ ಎನ್.ಬಿ.ಎ ಮಾನ್ಯತಾ ಪಟ್ಟಿಯಲ್ಲಿ ಅಕ್ಷಯ ಇಂಜಿನಿಯರಿಂಗ್ ಕಾಲೇಜಿನ ಹೆಸರು ಇರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.

ನಮ್ಮ ಕಾಲೇಜಿನಲ್ಲಿ ಕಲಿತ ವಿಧ್ಯಾರ್ಥಿಯ ಸರ್ಟಿಪಿಕೇಟ್‌ಗೆ ವಿಶ್ವದಲ್ಲಿಯೇ ಮಾನ್ಯತೆ ದೊರೆಯಲಿದೆ.ಇದು ಕ್ಯಾಂಪಸ್ ಸೆಲೆಕ್ಷನ್, ಪ್ಲೇಸ್‌ಮೆಂಟ್‌ಗೆ ಹೆಚ್ಚಿನ ಅನುಕೂಲ ಕಲ್ಪಿಸಲಿದೆ ಎಂದು ಡಾ.ಕೆ.ವಿ.ಶ್ರೀನಿವಾಸ್‌ರಾವ್ ತಿಳಿಸಿದರು.

ಡಾ.ಯತೀಶ್ ಮಾತನಾಡಿ,ಕೇಂದ್ರ ಸರಕಾರ ಹೊರಡಿಸಿದ ಮಾನದಂಡದ ಪ್ರಕಾರ ವಿದೇಶಗಳಲ್ಲಿ ಎನ್.ಬಿ.ಎ ಮಾನ್ಯತೆ ಪಡೆದ ಕಾಲೇಜುಗಳಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಮಾತ್ರ ಉನ್ನತ ಶಿಕ್ಷಣ, ಸಂಶೋಧನೆ ಮತ್ತು ಉದ್ಯೋಗಕ್ಕೆ ಅವಕಾಶವಿದೆ. ಹಾಗಾಗಿ ಇನ್ನೂ ಮುಂದೆ ಅಕ್ಷಯ ಇಂಜಿನಿಯರಿಂಗ್ ಕಾಲೇಜಿನ ಸರ್ಟಿಫಿಕೇಟ್‌ಗೆ ವಿದೇಶಗಳಲ್ಲಿಯೂ ಮಾನ್ಯತೆ ದೊರೆಯಲಿದೆ.ಅಲ್ಲದೆ ನಮ್ಮ ಕ್ಯಾಂಪಸ್ ಇಂಟರ್ ವ್ಯೂ, ಪ್ಲೇಸ್‌ಪೆಂಟ್ ಸೆಲ್‌ನಲ್ಲಿಯೂ ಹೆಸರು ಮಾಡಿರುವ ಕಂಪನಿಗಳು ಭಾಗವಹಿಸಲು ಮುಂದಾಗಲಿವೆ. ಇದರಿಂದ ನಮ್ಮ ವಿದ್ಯಾರ್ಥಿಗಳಿಗೆ ಪ್ರಪಂಚದಾದ್ಯಂತ ಉದ್ಯೋಗಾವಕಾಶ ಲಭ್ಯವಾಗಲಿದೆ.ಅಲ್ಲದೆ ಬೋಧಕ ಸಿಬ್ಬಂದಿ ಸಹ ಸಂಶೋಧನೆ ಕೈಗೊಳ್ಳಲು ಸರಕಾರದ ಧನಸಹಾಯ ಸಹ ಲಭ್ಯವಾಗಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥೆ ಡಾ.ಪುಷ್ಪ.ಆರ್., ವಿಭಾಗದ ಸಂಯೋಜಕರಾದ ಪ್ರೊ.ರಾಕೇಶ್,ಎಸ್, ಪ್ರೊ.ಕೀರ್ತಿಶ್ರೀ.ಪಿ.ವಿ, ಡಾ.ಸುಹಾಸ್, ಡಾ.ಪ್ರದೀಪ್, ಅಶ್ವಿನಿ ಸಿಂಗ್, ಡಾ.ತೃಪ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

-ಕೆ.ಬಿ.ಚಂದ್ರಚೂಡ

Leave a Reply

Your email address will not be published. Required fields are marked *