ಆಲ್ದೂರು-ಆಲ್ದೂರು 66/11 ಕೆ.ವಿ ವಿದ್ಯುತ್ ಉಪಕೇಂದ್ರದ ತೃತೀಯ ತ್ರೈಮಾಸಿಕ ನಿರ್ವಹಣೆ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ 66/11 ಕೆ.ವಿ ಯಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.
ಸದರಿ ಫೀಡರ್‌ಗಳ ವ್ಯಾಪ್ತಿಗೆ ಬರುವ ಆಲ್ದೂರು ಟೌನ್, ಕೆರೆಮಕ್ಕಿ, ಗುಡ್ಡದೂರು, ಸಾರಗೋಡು,ಗುಲ್ಲನಪೇಟೆ ಮತ್ತು ಶಂಕರ್‌ಫಾಲ್ಸ್ ಫೀಡರ್ ನಿಂದ ವಿದ್ಯುತ್ ಸರಬರಾಜಾಗುವ ಆಲ್ದೂರು ಹೋಬಳಿ ಮತ್ತು ಖಾಂಡ್ಯ ಹೋಬಳಿ ಹಳ್ಳಿಗಳಿಗೆ ನವೆಂಬರ್ 29ರಂದು ವಿದ್ಯುತ್ ಸರಬರಾಜು ನಿಲುಗಡೆಯಾಗಲಿದೆ ಎಂದು ಆಲ್ದೂರು ಮೆಸ್ಕಾಂ, ಆಲ್ದೂರು ಉಪವಿಭಾಗ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
——–ಮಧು ದುರ್ಗಾ