ಕೆ ಆರ್ ಪೇಟೆ – ರಾಜ್ಯದಲ್ಲೆ ಹೆಸರುವಾಸಿಯಾಗಿರುವ ಕರ್ನಾಟಕ ರತ್ನ ಡಾ ರಾಜ್ ಕುಮಾರ್ ಸಾಂಸ್ಕೃತಿಕ ಕಲಾ ಪರಿಷತ್ ಮಂಡ್ಯ ಜಿಲ್ಲಾ ವತಿಯಿಂದ ಡಾ ಬಿ ಆರ್ ಅಂಬೇಡ್ಕರ್ ರವರ 134 ನೇ ಜಯಂತಿ ಹಾಗೂ ನಟ ಸಾರ್ವಭೌಮ ಡಾ ರಾಜಕುಮಾರ್ ರವರ ಜನ್ಮ ದಿನವನ್ನು ಆಚರಿಸಲಾಯಿತು.
ಪಟ್ಟಣದ ದಲಿತ ಶಿಕ್ಷಣ ಅಭಿವೃದ್ಧಿ ಸಂಸ್ಥೆಯ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ದಲಿತ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸ್ತಿ ರಂಗಪ್ಪ, ಮಹಾನ್ ಮಾನವತವಾದಿ ಭಾರತರತ್ನ,ಸಂವಿಧಾನ ಶಿಲ್ಪಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ನಮ್ಮ ದೇಶಕ್ಕೆ ಶ್ರೇಷ್ಠ ಸಂವಿಧಾನದ ಜೊತೆಗೆ ನವ ಭಾರತ ನಿರ್ಮಾಣಕ್ಕೆ ಶ್ರಮಿಸಿದ್ದಾರೆ.ಅವರ ತತ್ವಾದರ್ಶ,ಚಿಂತನೆ, ಹೋರಾಟದ ಹಾದಿಯನ್ನು ಇಂದಿನ ಯುವಪೀಳಿಗೆ ಅರಿಯುವಂತಾಗಬೇಕು ಎಂದು ಹೇಳಿದರು.

ಕಲಾವಿದ ಹೆಚ್ ಮಂಜುನಾಥ್ ಮಾತನಾಡಿ, ಡಾ.ಅಂಬೇಡ್ಕರ್ ರವರು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಮಾನತೆ ಸಿಗಬೇಕು ಎಂದು ಹೋರಾಟ ಮಾಡಿದ್ದಾರೆ. ದೀನ ದಲಿತರ, ಶೋಷಿತ ವರ್ಗದವರ ಏಳಿಗೆಗಾಗಿ ಹಗಲಿರುಳು ದುಡಿದಿದ್ದಾರೆ. ಬಾಬಾ ಸಾಹೇಬ್ ಅವರನ್ನು ಈ ದಿನ ಗೌರವದಿಂದ ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ನಾವು ಮುಂಜಾನೆ ಎದ್ದು ಬಗವಂತನಿಗೊಮ್ಮೆ ನಮಿಸಿ ನಂತರ ನಮಗೆ ಉತ್ತಮವಾಗಿ ಜೀವನ ನೆಡೆಸಲು ಅವಕಾಶ ಮಾಡಿಕೊಟ್ಟಿರುವ ಅಂಬೇಡ್ಕರರಿಗೆ ಸ್ಮರಣೆ ಮಾಡಬೇಕು ಎಂದರು ಹಾಗೇಯೆ ಇಂದು ರಾಜಕುಮಾರ್ ರವರ ಜನ್ಮದಿನೋತ್ಸವದಂದು ಕನ್ನಡಕ್ಕೆ ಡಾ.ರಾಜ್‍ಕುಮಾರ್ ರವರ ಕೊಡುಗೆ ಅಪಾರವಾಗಿದೆ.

ಕನ್ನಡಕ್ಕಾಗಿ,ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ಹೆಚ್ಚು ಹೋರಾಟ ಮಾಡಿದವರು ಡಾ.ರಾಜ್‍ಕುಮಾರ್.ಗೋಕಾಕ್ ಚಳುವಳಿಯಂತಹ ಚಳುವಳಿಯಲ್ಲಿ ಭಾಗವಹಿಸಿ ಕನ್ನಡಕ್ಕಾಗಿ ಹೆಚ್ಚು ಶ್ರಮಪಟ್ಟವರುರಾಜ್ ಕುಮಾರ್ ಜೀವನ ಸರಳತೆಯಿಂದ ಕೂಡಿತ್ತು. ಅವರು ತೆರೆಯ ಮೇಲೆ ತಾವು ನಟಿಸಿದ ಪಾತ್ರಗಳ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಕೊಂಡು ಜೀವಿಸುತ್ತಿದ್ದರು. ಇಂದಿಗೂ ಸಹ ಜನರ ಮನದಲ್ಲಿ ಅಚ್ಚಳಿಯದೆ ಉಳಿದಿದೆ ಎಂದರೆ ಅದು ಡಾ. ರಾಜ್ ಕುಮಾರ್ ಅವರು ಮಕ್ಕಳನ್ನು ಹಾಗೂ ಹಿರಿಯರನ್ನು ತುಂಬಾ ಪ್ರೀತಿಯಿಂದ ಕಾಣುತ್ತಿದ್ದರು ಎಂದು ಹೇಳಿದರು.
ಹಿರಿಯ ಮುಖಂಡರಾದ ಸಿಂದುಘಟ್ಟ ಸೋಮಸುಂದರ್ ಮಾತನಾಡಿ ಇಂದು ನಾವೆಲ್ಲರೂ ನಾವುೂ ಸ್ವತಂತ್ರವಾಗಿ ಇದ್ದೇವೆ ಎಂದರೆ ಅಂಬೇಡ್ಕರ್ ನೀಡಿದ ಪವಿತ್ರವಾದ ಸಂವಿಧಾನವೆ ಕಾರಣವಾಗಿದೆ ಎಂದ ಅವರು, ಕರ್ನಾಟಕದಲ್ಲಿಯೇ ಹೆಚ್ಚು ಬಿರುದನ್ನು ಪಡೆದಿರುವವರು ಏಕೈಕ ನಟ ಎಂದರೆ ಡಾ.ರಾಜ್ ಕುಮಾರ್ ಮಾತ್ರ. ತಮ್ಮ ನಟನೆ, ಗಾಯನ ಮತ್ತು ಚಿತ್ರ ನಿರ್ಮಾಣದ ಮೂಲಕ ವರನಟ, ನಟಸಾರ್ವಭೌಮ, ಪದ್ಮಭೂಷಣ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ, ಹಿನ್ನೆಲೆ ಗಾಯನಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಮತ್ತು ಬಿರುದುಗಳು ಲಭಿಸಿವೆ. ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಹಾಗೂ ಹಂಪಿ ವಿಶ್ವ ವಿದ್ಯಾಲಯದಿಂದ ನಾಡೋಜ ಪದವಿಯನ್ನು ನಟ ಡಾ.ರಾಜ್ ಕುಮಾರ್ ಪಡೆದಿದ್ದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರತ್ನ ಡಾಕ್ಟರ್ ರಾಜಕುಮಾರ್ ಸಾಂಸ್ಕೃತಿಕ ಕಲಾ ಪರಿಷತ್ ನ ಅಧ್ಯಕ್ಷರಾದ ಮಂಜೇಗೌಡ ವಹಿಸಿದ್ದರು .

ಇದೇ ಸಂದರ್ಭದಲ್ಲಿ ಪುಟ್ಟರಾಜು ಹೊಸಹೊಳಲು, ರೈತಪರಹೋರಾಟಗಾರ ರಾಜುಗೌಡ,ನಿವೃತ್ತ ಗ್ರಾ,ಪಂ ಅಭಿವೃದ್ಧಿ ಅಧಿಕಾರ ಗಂಟಯ್ಯ,ಸ್ಟುಡಿಯೋ ಮಂಜು,ಊಚನಹಳ್ಳಿ ನಟರಾಜು,ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಡಾ ಬಿಆರ್ ಅಂಬೇಡ್ಕರ್ ವಿಭೂಷಣ ಪ್ರಶಸ್ತಿಯನ್ನು ಪುಟ್ಟಬೋರಯ್ಯ, ರಾಜಕುಮಾರ್ ವಿಭೂಷಣ ಪ್ರಶಸ್ತಿಯನ್ನು ರಘು, ಶ್ರೀನಿವಾಸ್, ಲೋಕೇಶ್, ರವರಿಗೆ ಪ್ರಧಾನ ಮಾಡಲಾಯಿತು, ಪರಿಷತ್ತಿನ ಉಪಾಧ್ಯಕ್ಷ ಸಿಜೆ ಸ್ವಾಮಿ, ಚಿಕ್ಕಚಲುವಯ್ಯ, ಚಂದ್ರಪ್ಪ, ಚಲುವರಾಜು,ಯೋಗಣ್ಣ, ಜಯರಾಮು,ಶ್ರೀಧರಮೂರ್ತಿ, ಮೋಹನ್,ಶ್ರೀಧರ್ ,ಲಕ್ಷ್ಮಮ್ಮ,ಲತಾ ,ತಾಯಮ್ಮ,ನಾಗರತ್ನ,ರಾಧಮ್ಮ,ಅಮೃತಮ್ಮ,ಅಲಗಮ್ಮ,ದೇವಿರಮ್ಮ, ಉಪಸ್ಥಿತರಿದ್ದರು.
ವರದಿ: ಶ್ರೀನಿವಾಸ್. ಆರ್