ಕೆ.ಆರ್.ಪೇಟೆ-ಎರಡನೇ-ಬಾರಿ-ಗ್ರಾಮ-ಪಂಚಾಯತಿಗೆ-ಅಧ್ಯಕ್ಷರಾಗಿ-ಅಂಬುಜಾ-ಉದಯಶಂಕರ್-ಅವಿರೋಧ-ಆಯ್ಕೆ

ಕೆ.ಆರ್.ಪೇಟೆ: ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಐಕನಹಳ್ಳಿ ಗ್ರಾಮ‌ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಅಂಬುಜಾ ಉದಯಶಂಕರ್ ಅವರು ಎರಡನೇ ಭಾರಿಗೆ ಅವಿರೋಧವಾಗಿ ಆಯ್ಕೆಯಾದರು.

ಈ ಹಿಂದಿನ ಅಧ್ಯಕ್ಷೆ ಸುಧಾದೇವರಾಜ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಿಗಧಿಯಾಗಿತ್ತು. ಅಧ್ಯಕ್ಷ ಸ್ಥಾನ ಬಯಸಿ ಅಂಬುಜ ಉದಯಶಂಕರ್ ಅವರನ್ನು ಹೊರತು ಪಡಿಸಿ ಬೇರೆ ಯಾರೂ ಸಹ ನಾಮಪತ್ರ ಸಲ್ಲಿಸದ ಕಾರಣ ಅವಿರೋಧ ಆಯ್ಕೆ ನಡೆಯಿತು.

ವಿಶೇಷ ಎಂದರೆ ಇಂದು ಅಧ್ಯಕ್ಷರಾದ ಅಂಬುಜಾ ಮತ್ತು ಉದಯಶಂಕರ್ ರವರು ಪತಿ ಮತ್ತು ಪತ್ನಿ ಇಬ್ಬರೂ ಇದೇ ಗ್ರಾಮ ಪಂಚಾಯಿತಿಗೆ ಎರಡೆರಡು ಭಾರಿ ಅಧ್ಯಕ್ಷರಾಗಿ ದಾಖಲೆ ನಿರ್ಮಿಸಿದ್ದಾರೆ. ಗಂಡ, ಹೆಂಡತಿ ಇಬ್ಬರೂ ಎರಡೆರಡು ಭಾರಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿರುವುದು ಪ್ರಾಯಶಃ ರಾಜ್ಯದಲ್ಲಿಯೇ ಪ್ರಥಮ ಎನ್ನಬಹುದಾಗಿದೆ.

ಈ ಸಂದರ್ಭದಲ್ಲಿ ಕರ್ನಾಟಕ ಸಹಕಾರ ಮಂಡಲಿಯ ನಿರ್ದೇಶಕ ಸಿ.ಎನ್ ಪುಟ್ಟಸ್ವಾಮಿಗೌಡ, ಜೆಡಿಎಸ್ ಪಕ್ಷದ ಜಿಲ್ಲಾ ಪ್ರದಾನ ಕಾರ್ಯದರ್ಶಿ ಬಿ.ಎಂ ಕಿರಣ್, ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ ಐಕನಹಳ್ಳಿ ಶಾರದಮ್ಮ ಕೃಷ್ಣೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಐನೋರಹಳ್ಳಿ ಮಲ್ಲೇಶ್, ಕಿಕ್ಕೇರಿ ಹೋಬಳಿ ಜೆ.ಡಿ.ಎಸ್ ಘಟಕದ ಅಧ್ಯಕ್ಷ ಕಾಯಿ ಮಂಜೇಗೌಡ, ತಾ.ಪಂ.ಮಾಜಿ ಅಧ್ಯಕ್ಷ ರಾಮೇಗೌಡ, ಆನೆಗೊಳ ಸೊಸೈಟಿ ನಿರ್ದೇಶಕ ಉದಯಶಂಕರ್ ಸೇರಿದಂತೆ ಮತ್ತಿತ್ತರ ಗಣ್ಯರು ನೂತನ ಅಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿ, ಸಿಕ್ಕಿರುವ ಅವಧಿಯಲ್ಲಿ ಗ್ರಾಮ ಪಂಚಾಯತಿಗೆ ಸೇರಿರುವ ಗ್ರಾಮಗಳ ಮೂಲಭೂತ ಸೌಕರ್ಯಗಳನ್ನು‌ ಪ್ರಾಮಾಣಿಕವಾಗಿ ಒದಗಿಸಿ ಗ್ರಾಮಗಳನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವಂತೆ ಸಲಹೆ ನೀಡಿದರು.

ನೂತನ ಅಧ್ಯಕ್ಷೆ ಅಂಬುಜಾ ಮಾತನಾಡಿ. ನಾಲ್ಕು ವರ್ಷದ ಅವಧಿಯಲ್ಲಿ ಎರಡು ಭಾರಿ ಅಧ್ಯಕ್ಷ ಸ್ಥಾನ ಕಲ್ಪಿಸಿಕೊಟ್ಟಿರುವ ಎಲ್ಲಾ ಸದಸ್ಯರುಗಳಿಗೆ ಹಾಗೂ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಮುಖಂಡರಿಗೆ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ಉಪಾಧ್ಯಕ್ಷ ಪ್ರಸನ್ನ ಸದಸ್ಯರಾದ ನಂಜುಂಡೇಗೌಡ, ಸುವರ್ಣ, ಈರಾಜು, ಕುಮಾರ್, ಸುಧಾ, ದೇವರಾಜು, ನಾಗಮಣೆ, ಪ್ರಸನ್ನ, ಪಲ್ಲವಿ, ಭಾಗ್ಯಮ್ಮ, ಮಂಜೇಗೌಡ, ಶಂಕರ್, ಸುಮಿತ್ರ, ಕವಿತ, ಭಾರತೀ, ಮಂಜೇಗೌಡ, ಶಂಕರ್, ನಾಗಮಣಿ, ಮುಖಂಡರಾದ ಐನೋರಹಳ್ಳಿ ಮಂಜು, ಪಿ.ಡಿ.ಓ ವಿಜಯ್ ಕುಮಾರ್ ಸೇರಿದಂತೆ ಹಲವು ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಅಭಿನಂದಿಸಿದರು.

  • ಶ್ರೀನಿವಾಸ್‌ ಆರ್‌.

Leave a Reply

Your email address will not be published. Required fields are marked *

× How can I help you?