ಅನಂತಪುರ:ಅನಂತಪುರ ಜಿಲ್ಲಾಧಿಕಾರಿ ಡಾ.ವಿನೋದ್ ಕುಮಾರ್ ರವರ ಮಾರ್ಗದರ್ಶನದಲ್ಲಿ ಉದಯಶಂಕರ್, ತಹಶೀಲ್ದಾರ್ ಹರಿಕುಮಾರ್ ರವರ ಸಹಕಾರದೊಂದಿಗೆ ಶ್ರೀ ಜಪಾನಂದ ಸ್ವಾಮೀಜಿಗಳಿoದ ಪ್ರವಾಹ ಸಂತ್ರಸ್ತರಿಗೆ ಪರಿಹಾರ ಸಾಮಗ್ರಿಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಜಗದೀಶ್ ಐ.ಪಿ.ಎಸ್. ಅನಂತಪುರ ನಗರದ ಪಟ್ಟಣ ಪಂಚಾಯ್ತಿ ಕಚೇರಿಯಲ್ಲಿ ನೂರಾರು ಜನ ಸಂತ್ರಸ್ತರು ನೆರೆದಿದ್ದು ಅವರಿಗೆ ಪರಿಹಾರ ಸಾಮಗ್ರಿಗಳನ್ನು ವಿತರಿಸಲಾಯಿತು.
ಈ ಕಾರ್ಯಕ್ರಮದ ಆರಂಭದಲ್ಲಿ ಪೂಜ್ಯ ಸ್ವಾಮೀಜಿಯವರಿಗೆ ನಗರದ ಪರವಾಗಿ ಹಾಗೂ ಸ್ಥಳೀಯ ಸಂತ್ರಸ್ತರ ಪರವಾಗಿ ಭಕ್ತಿ ಪೂರ್ವಕ ಗೌರವವನ್ನು ಸಲ್ಲಿಸಿ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು.
ಇನ್ಫೋಸಿಸ್ ಸಮರ್ಪಣ ತಂಡ ಹಾಗೂ ಶ್ರೀರಾಮಕೃಷ್ಣ ಸೇವಾಶ್ರಮ ತಂಡದ ಸಹಕಾರ ದೊoದಿಗೆ ಎಲ್ಲರಿಗೂ ಪರಿಹಾರ ಸಾಮಗ್ರಿಗಳನ್ನು ಸುಮಾರು 100ಶಾಲಾ ಮಕ್ಕಳಿಗೆ ನೂತನ ಬ್ಯಾಗ್ ಹಾಗೂ ಪರಿಕರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದ ರೂವಾರಿಗಳಾದ ಪೂಜ್ಯ ಸ್ವಾಮಿ ಜಪಾನಂದಜೀ ರವರು ಸಂಸ್ಥೆಯ ಪರವಾಗಿ ಅನಂತಪುರದ ಶಾಸಕರಾದ ದಗ್ಗುಪಾಟಿಪ್ರಸಾದ್ ಹಾಗೂ ಶ್ರೀಮತಿ ಪರಿಟಾಲ ಸುನೀತಮ್ಮ ಮತ್ತು ಲೋಕಸಭಾ ಸದಸ್ಯರಾದ ಅಂಬಿಕಾ ಲಕ್ಷ್ಮೀನಾರಾಯಣವಾಲ್ಮೀಕಿ ರವರ ಸಹಕಾರವನ್ನು ಶ್ಲಾಘಿಸಿ ಧನ್ಯವಾದವನ್ನು ತಿಳಿಸಿದರು.