ಚಿಕ್ಕಮಗಳೂರು-ನಲ್ಲೂರು-ಮಠದ-ಜಾಗ-ಗಲಭೆಕೋರರ-ವಿರುದ್ಧ- ಕ್ರಮಕ್ಕೆ-ಮನವಿ

ಚಿಕ್ಕಮಗಳೂರು- ನಲ್ಲೂರು ಮಠದ ಜಾಗದ ಗಲಭೆಕೋರರನ್ನು ಕೂಡಲೇ ಬಂಧಿಸಬೇಕು ಹಾಗೂ ಹಿಂದೂಗಳ ಮಳಿಗೆ ಪುನರಾರಂಭಿಸಲು ಕ್ರಮವಹಿಸಬೇಕು ಎಂದು ತಾಲ್ಲೂಕು ಅಖಿಲ ಭಾರತ ವೀರಶೈವ ಮಹಾಸಭಾದ ಮುಖಂಡರುಗಳು ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಅವರಿಗೆ ಮನವಿ ಸಲ್ಲಿಸಿದರು.


ಈ ಕುರಿತು ಮಾತನಾಡಿದ ಮಹಾಸಭಾ ಅಧ್ಯಕ್ಷ ಕೆ.ಸಿ.ನಿಶಾಂತ್ ತಾಲ್ಲೂಕು ಕಚೇರಿ ಮುಂಭಾಗದಲ್ಲಿರುವ ನಲ್ಲೂರು ಮಠದ ಜಾಗದಲ್ಲಿ ನಡೆದ ಅಸಂವಿಧಾನಿಕ ಹಾಗೂ ಗೂಂಡಾಗಿರಿ ಘಟನೆ ಖಂಡನೀಯ. ಹೀಗಾಗಿ ಮಠದ ಸ್ಥಳದಲ್ಲಿ ಪಾವಿತ್ರತೆ ಕಾಪಾಡಬೇಕು ಎಂದು ಒತ್ತಾಯಿಸಿದರು.
ನೂರಾರು ವರ್ಷಗಳಿಂದ ಈ ಜಾಗವು ನಲ್ಲೂರು ಮಠದ ಸುಪ್ತದಿಯಲ್ಲಿದೆ. ಜಾಗದ ಮೂಲ ದಾಲಾತಿಗಳಿವೆ. ಈ ನಡುವೆಯು ಅನವಶ್ಯಕವಾಗಿ ನ್ಯಾಯಾಲಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಕೋರ್ಟ್ ತೀರ್ಪಿನ ಮುನ್ನವೇ ಈ ದಾಳಿಯಾಗಿರುವುದು ಗಮನಿಸಿದರೆ ವೀರಶೈವ ಸಮಾಜವನ್ನು ಹೆದರಿಸಿ ಅತಿ ಕ್ರಮಿಸಿಕೊಳ್ಳುವ ಹುನ್ನಾರವಿದೆ ಎಂದು ಆರೋಪಿಸಿದರು.


ಗಲಭೆಕೋರರಿಂದ ಮಳಿಗೆಗಳಲ್ಲಿ ಜಖಂ ಆಗಿರುವಂಥ ಹೋಟೆಲ್ ಹಾಗೂ ಇನ್ನಿತರೆ ವ್ಯಾಪಾರ ವಸ್ತು ಗಳನ್ನು ಪುನರ್ ನಿರ್ಮಿಸಿಕೊಡಬೇಕು, ಪಕ್ಕದ ಮಸೀದಿಗಳಲ್ಲಿ ಅಕ್ರಮ ಕೆಲಸಗಳು ನಡೆಯುತ್ತಿರುವ ಬಗ್ಗೆ ದೂರುಗಳಿವೆ. ಆ ಸ್ಥಳಕ್ಕೆ ಅನ್ಯದೇಶದ ವಲಸಿಗರು ಬರುವುದು, ಮಾದಕ ವಸ್ತುಗಳ ಸೇವನೆ ನಡೆಯುತ್ತಿರು ವ ಕಾರಣ ಆ ಸ್ಥಳದಲ್ಲಿ ಪಾವಿತ್ರತೆ ಉಳಿಸಬೇಕು ಎಂದು ಹೇಳಿದರು.


ಒಟ್ಟಿನಲ್ಲಿ ನಲ್ಲೂರು ಮಠದ ಜಾಗದ ವಿಷಯದಲ್ಲಿ ಗೂಂಡಾಗಿರಿ ಮಾಡಿದಂಥ ವ್ಯಕ್ತಿಗಳನ್ನು ಶೀಘ್ರವೇ ಬಂಧಿಸಬೇಕು. ಮಳಿಗೆ ಹಾಗೂ ಹೋಟೆಲ್‌ಗಳನ್ನು ಆದಷ್ಟುಬೇಗ ನವೀಕರಣಗೊಳಿಸಿಕೊಡಬೇಕು ಎಂದು ಒತ್ತಾಯಿಸಿದರು.


ಈ ಸಂದರ್ಭದಲ್ಲಿ ಮಹಾಸಭಾದ ಕೋಶಾಧ್ಯಕ್ಷ ಹರೀಶ್, ಪ್ರಧಾನ ಕಾರ್ಯದರ್ಶಿ ದರ್ಶನ್, ಕಾರ್ಯ ರ್ಶಿ ಧನಂಜಯ್, ನಿರ್ದೇಶಕರುಗಳಾದ ಜೈಪ್ರಕಾಶ್, ಕುಮಾರ್, ಪ್ರಮೀಳಾ ಹಾಜರಿದ್ದರು.

  • ಸುರೇಶ್‌ ಎನ್.

Leave a Reply

Your email address will not be published. Required fields are marked *

× How can I help you?