ಚಿಕ್ಕಮಗಳೂರು-ಮಂಜೂರಾದ-ವಸತಿ-ಶಾಲೆಯನ್ನು-ಬೇರೆಡೆ- ಸ್ಥಳಾಂತರಿಸದಿರಲು-ಮನವಿ

ಚಿಕ್ಕಮಗಳೂರು– ಮಳಲೂರು ಗ್ರಾಮದಲ್ಲಿ ಡಾ|| ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗೆ ಮಂಜೂರಾಗಿರುವ ಭೂ ಪ್ರದೇಶವನ್ನು ಬೇರೆಡೆ ಸ್ಥಳಾಂತರಿಸಬಾರದು ಎಂದು ಅಂಬಳೆ ಹೋಬಳಿ ಗ್ರಾಮ ಸ್ಥರು ಹಾಗೂ ಪ್ರಗತಿಪರ ಮುಖಂಡರು ಶುಕ್ರವಾರ ಅಪರ ಜಿಲ್ಲಾಧಿಕಾರಿ ನಾರಾಯಣ ಕನಕರಡ್ಡಿ ಅವರಿಗೆ ಮನವಿ ಸಲ್ಲಿಸಿದರು.


ಈ ಕುರಿತು ಮಾತನಾಡಿದ ಗ್ರಾಮಸ್ಥ ಭೀಮಯ್ಯ ತಾಲ್ಲೂಕಿನ ಅಂಬಳೆ ಹೋಬಳಿಯ ಮಳಲೂರು ಗ್ರಾಮದಲ್ಲಿ ಅಂಭೇಡ್ಕರ್ ವಸತಿ ಶಾಲೆ ಮಂಜೂರಾಗಿದ್ದು ಈ ಶಾಲೆಯಲ್ಲಿ ಎಸ್ಸಿ ಶೇ.75೫ ಮತ್ತು ಇತರೆ ಶೇ. 25ರಷ್ಟು ಮಕ್ಕಳು ವ್ಯಾಸಂಗ ಮಾಡುತ್ತಿದ್ದು ವಸತಿ, ಶಿಕ್ಷಣಕ್ಕೆ ಸರ್ಕಾರ ೫ ಎಕರೆ ವಿಸ್ತೀರ್ಣವನ್ನು ಮಂಜೂರು ಮಾಡಲಾಗಿದೆ ಎಂದರು.


ವಸತಿ ಶಾಲೆಗೆ ಮಂಜೂರು ಮಾಡಿರುವ ಭೂ ವಿಸ್ತೀರ್ಣಕ್ಕೆ ಇಲಾಖೆಯಿಂದ ಸರ್ವೆ ನಡೆಸಿ, ನಕ್ಷೆ ತಯಾರಿಸಿ, ಅನುಮೋದನೆಗೊಂಡಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾದ ವಸತಿ, ಶಾಲಾ ಕಟ್ಟ ಡಗಳನ್ನು ನಿರ್ಮಿಸಲು ಯೋಗ್ಯವಾಗಿದೆ ಎಂದು ತಿಳಿಸಿದರು.


ಪಾಲಕರು, ವಿದ್ಯಾರ್ಥಿಗಳು ಹಾಗೂ ಶಾಲಾ ಶಿಕ್ಷಕರು ಸಂಚರಿಸಲು ರಸ್ತೆ ಇರುವುದರಿಂದ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದ್ದು ಭೂಮಿ ಮಂಜೂರು ಮಾಡಿರುವುದು ಶ್ಲಾಘನೀಯ. ಆದರೆ ಮಳಲೂರು ಗ್ರಾಮದ ಸರ್ವೆ ನಂ.79 ರ 5 ಎಕರೆ ವಿಸ್ತೀರ್ಣದ ಭೂ ಪ್ರದೇಶವನ್ನು ಬೇರೆಡೆ ಸ್ಥಳಾಂತರಿಸಬಾರದು ಎಂದು ಒತ್ತಾಯಿಸಿದರು.‌


ಈ ಸಂದರ್ಭದಲ್ಲಿ ಮುಖಂಡರಾದ ಹುಣಸೇಮಕ್ಕಿ ಲಕ್ಷ್ಮಣ್‌ , ಹೊನ್ನೇಶ್, ಗ್ರಾಮಸ್ಥರಾದ ಭಾಸ್ಕರ್, ರಾಕೇಶ್, ಮಂಜುನಾಥ್, ರಾಜಣ್ಣ, ಉದಯ್ ಮತ್ತಿತರರಿದ್ದರು.

-‌ ಸುರೇಶ್‌ ಎನ್.

Leave a Reply

Your email address will not be published. Required fields are marked *

× How can I help you?