ತುಮಕೂರು : ವಿಕಲಚೇತನರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ತಾಲ್ಲೂಕು ಒಕೂಟ ಹಾಗೂ ಜಿಲ್ಲಾ ಒಕೂಟಗಳ ವತಿಯಿಂದ ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗದಲ್ಲಿ ವಿವಿಧ ಬೇಡಿಕೆಗಳಾದ ಮಾಶಾಸನ ಏರಿಕೆ, 1೦೦ ಕಿಲೋಮೀಟರ್ ದೂರವಿರುವ ರಿಯಾಯಿತಿ ಬಸ್ ಪಾಸ್ಸನ್ನು ೩೦೦ಕಿಲೋಮೀಟರಿಗೆ ಹೆಚ್ಚಳ ಮಾಡುವುದು, ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಹಾಲಿ ಮೀಸಲಿರುವ 5% ಅನುದಾನದಲ್ಲಿ ಸ್ವಯಂ ಉದ್ಯೋಗಕ್ಕೆ ಅವಕಾಶ ಮಾಡಿ ಕೊಡಬೇಕು ಎಂದು ಕೋರಿ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಒಕೂಟದ ಉಪಾಧ್ಯಕ್ಷ ರಂಗಯ್ಯ.ಎಂ, ಶಿರಾ ರೆಹನ್‌ಪಾಶ, ತರೂರ್ ಮಂಜಣ್ಣ, ಮಧುಗಿರಿ ವೆಂಕಟೇಶ್, ರಂಗನಾಥಪ್ಪ ಹಾಗೂ ಒಕ್ಕೂಟದ ಪದಾಧಿಕಾರಿಗಳು ಸದಸ್ಯರು ಹಾಜರಿದ್ದರು.