ಚಿಕ್ಕಮಗಳೂರು-ನಗರದ ಶಂಕರಪುರ ಬಡಾವಣೆಯ ನಿವಾಸಿಗಳಿಗೆ ರಸ್ತೆ ಮತ್ತು ಒಳ ಚರಂಡಿ ಕಾಮಗಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಭೀಮ್ ಬ್ರಿಗೇಡ್ ಮುಖಂಡರು ಅಪರ ಜಿಲ್ಲಾಧಿಕಾರಿ ನಾರಾಯಣ ಕನಕರಡ್ಡಿ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಬ್ರಿಗೇಡ್ ಅಧ್ಯಕ್ಷ ಹರೀಶ್ ಮಿತ್ರ ಕಳೆದ ಮೂರು ವರ್ಷಗಳಿಂದ ವಾರ್ಡ್ ಅವ್ಯವಸ್ಥೆಯಿದೆ ಕೂಡಿದೆ. ಆಯುಕ್ತರನ್ನು ಸ್ಥಳಕ್ಕೆ ಕರೆಸಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಕಳಪೆ ಕಾಮಗಾರಿ ಎಸಗಿರುವ ಆಯುಕ್ತರು, ಇಂಜಿನಿಯರ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಶಂಕರಪುರ ಬಡಾವಣೆಗೆ ನಗರದ ರಾಮನಹಳ್ಳಿ, ವಿಜಯಪುರ, ಬಸವನಹಳ್ಳಿ, ಎಂ.ಜಿ.ರಸ್ತೆ, ಅಂಭೇ ಡ್ಕರ್ ರಸ್ತೆ, ಟಿಪ್ಪುನಗರ, ಶಂಕರಪುರ ಮೂಲಕ ಹಿರೇಮಗಳೂರಿನ ಹೋಗುವ ವ್ಯವಸ್ಥೆಯಿದೆ. ಆದರೆ ಆ ಯುಕ್ತರು, ಇಂಜಿನಿಯರ್‌ಗಳ ಅವೈಜ್ಞಾನಿಕ ಕಾಮಗಾರಿಯಿಂದ ಪ್ರತಿ ವಾರ್ಡ್ಗಳ ಒಳಚರಂಡಿ ನೀರು 11 ಮತ್ತು 13ನೇ ವಾರ್ಡ್ಗಳ ಮನೆಗಳಿಗೆ ನುಗ್ಗುತ್ತಿದೆ ಎಂದು ಆರೋಪಿಸಿದರು.

ಮಳೆಗಾಲದಲ್ಲಿ ಶಂಕರಪುರದ ನಿವಾಸಿಗಳ ಗೋಳು ಕೇಳುವವರಿಲ್ಲ. ಸಂಪೂರ್ಣ ಕೆಸರುಗದ್ದೆಯಂತಾ ಗಲಿದೆ. ಶಾಲೆಗೆ ತೆರಳುವ ಮಕ್ಕಳು ಪರದಾಡುವಂತಾಗುತ್ತದೆ. ಬೈಕ್ ಸವಾರರು ಬಿದ್ದು ಗಾಯಗೊಂಡಿದ್ದಾ ರೆ. ಕಾರಿನ ಚಕ್ರಗಳು ಕೆಸರಿನಲ್ಲಿ ಹೂತುಕೊಂಡಿರುವ ಪರಿಸ್ಥಿತಿಯಿದ್ದು ಕೆಲವೊಮ್ಮೆ ಭಾರೀ ಅಪಘಾತಗಳೂ ಸಂಭವಿಸಿದೆ ಎಂದು ಹೇಳಿದರು.
ನಗರದ ಪ್ರತಿ ವಾರ್ಡ್ಗಳಿಂದಲೂ 2 ಅಡಿ ಅಗಲದ ಪೈಪ್‌ಗಳನ್ನು ಅಳವಡಿಸಿಕೊಂಡು ಬಂದಿದ್ದು, ಶಂಕರಪುರದ 13ನೇ ವಾರ್ಡ್ಗೆ ಕೊನೆಗೊಂಡಿದೆ. 11ರಲ್ಲಿ ಸುಮಾರು 50 ವರ್ಷದ ಹಳೆಯ 1/2 ಅಡಿ ಪೈಪ್ ಅಳವಡಿಸಲಾಗಿದ್ದು, ನಗರದ ಒಳಚರಂಡಿ ನೀರು 2 ಅಡಿ ಪೈಪ್‌ನಲ್ಲಿ ಬಂದು, ಹಳೆಯ ಪೈಪ್‌ನಲ್ಲಿ ಹೋಗದೇ, 13 ಮತ್ತು 11 ನೇ ವಾರ್ಡಿನ ಮನೆಗಳಿಗೆ ನುಗ್ಗುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಾರ್ಡಿನ ನಿವಾಸಿಗಳಾದ ಭೀಮಯ್ಯ ರಾಜು, ಕೃಷ್ಣೇಗೌಡ, ಶಾಂತ, ರಾಜು, ಸ್ವಾಮಿ, ಶಶಿಕಲಾ, ಚನ್ನಮ್ಮ, ಅರುಣ್‌ಕುಮಾರ್, ನವೀನ್, ಗೀತಾ, ಇಬ್ರಾಹಿಂ, ಧನಂಜಮ್ಮ ಹಾಜರಿದ್ದರು.
- ಸುರೇಶ್ ಎನ್.