ಕೊರಟಗೆರೆ -ಸಿದ್ದರಬೆಟ್ಟ ಶ್ರೀ ಮಠದಲ್ಲಿ ನಡೆಯುವ ಉಚಿತ ಸಾಮೂಹಿಕ ವಿವಾಹಕ್ಕೆ ಅರ್ಜಿ ಆಹ್ವಾನ

ಕೊರಟಗೆರೆ :- ಪ್ರಸಿದ್ದ ಪುಣ್ಯ ಕ್ಷೇತ್ರವಾದ ತಾಲೂಕಿನ ಸಿದ್ದರಬೆಟ್ಟ ಶ್ರೀ ಬಾಳೆಹೊನ್ನೂರು ಖಾಸಾ ಶಾಖಾ ಮಠದ ೧೯ನೇ ವಾರ್ಷಿಕೋತ್ಸವದ ಅಂಗವಾಗಿ ಉಚಿತ ಸಾಮೂಹಿಕ ವಿವಾಹ, ಸಿದ್ದಶ್ರೀ ಪ್ರಶಸ್ತಿ ಪ್ರಧಾನ ಹಾಗೂ ಜನಜಾಗೃತಿ ಧರ್ಮ ಸಮಾವೇಶ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಸಾಮೂಹಿಕ ವಿವಾಹಕ್ಕೆ ಅರ್ಹ ವ್ಯಕ್ತಿಗಳು ಅರ್ಜಿ ಸಲ್ಲಿಸುವಂತೆ ಶ್ರೀ ಮಠದ ಪೀಠಾಧ್ಯಕ್ಷ  ಶ್ರೀ ವೀರಭದ್ರಶಿವಾಚಾರ್ಯಸ್ವಾಮೀಜಿ ತಿಳಿಸಿದರು. 

ಕೊರಟಗೆರೆ ತಾಲೂಕಿನ ಸಸ್ಯ ಸಂಜೀವಿನಿ ಐತಿಹಾಸಿಕ ಧಾರ್ಮಿಕ ಕ್ಷೇತ್ರವಾದ ಸಿದ್ದರಬೆಟ್ಟದ ಶ್ರೀ ಮಠದಲ್ಲಿ ಏರ್ಪಡಿಸಿದ್ದ ಶ್ರೀ ಬಾಳೆಹೊನ್ನೂರು ಖಾಸಾ ಶಾಖಾ ಮಠದ 19ನೇ ವಾರ್ಷಿಕೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯ ನಂತರ ಪ್ರತಿಕೆಗೆ ಮಾಹಿತಿ ನೀಡಿ ಕಳೆದ ವರ್ಷದಂತೆ ಈ ವರ್ಷವು ಸಹ ವಾರ್ಷಿಕೋತ್ಸವ ಕಾರ್ಯಕ್ರಮ ಜೂ.8 ರಂದು ರಂಭಾಪುರಿ ವೀರಸಿಂಹಾಸನಾಧೀಶ್ವರ ಜಗದ್ಗುರು ಪ್ರಸನ್ನರೇಣುಕಾ ಡಾ,ವೀರಸೋಮೇಶ್ವರ ರಾಜದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದರ ದಿವ್ಯ ಸಾನಿದ್ಯದಲ್ಲಿ ಏರ್ಪಡಿಸಿದ್ದು ಈ ಕಾರ್ಯಕ್ರಮದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ, ಜಗಜ್ಯೋತಿ ಶ್ರೀ ಬಸವೇಶ್ವರರ ಜಯಂತೋತ್ಸವ, ವೀರಶೈವ ವಟುಗಳಿಗೆ ಉಚಿತ ದೀಕ್ಷಾ ಸಂಸ್ಕಾರ ಮತ್ತು ಉಚಿತ ಸಾಮೂಹಿಕ ಆದರ್ಶ ವಿವಾಹ ಹಾಗೂ ಜನಜಾಗೃತಿ ಧರ್ಮ ಸಮಾವೇಶದೊಂದಿಗೆ ಸಮಾಜದಲ್ಲಿ ಉತ್ತಮ ಸೇವೆ ಸಲ್ಲಿಸಿರುವ ಸಾಧಕರಿಗೆ ಸಿದ್ದಶ್ರೀ ಪ್ರಶಸ್ತಿ ಪ್ರಧಾನ ಹಾಗೂ ಸದ್ಬಕ್ತರ ಸೂಚನೆಯ ಮೇರೆಗೆ ರೈತರಿಗೆ ಸಸಿ ನೀಡುವ ಕಾರ್ಯಕ್ರಮವನ್ನು ಶ್ರೀ ಮಠದ ಭಕ್ತರ ನೆರವಿನಿಂದ ಮಾಡಲು ತೀರ್ಮಾನಿಸಲಾಗಿದ್ದು ಉಚಿತ ಸಾಮೂಹಿಕ ವಿವಾಹದಲ್ಲಿ ಪಾಲ್ಗೂಳ್ಳುವ ವಧು-ವರರು ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುವಂತೆ ತಿಳಿಸಿದರು.

ಸಾಮೂಹಿಕ ವಿವಾಹ ;– ಉಚಿತ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳಲು ಬಯಸುವ ವಧುವಿಗೆ ೧೮ ವರ್ಷ, ವರನಿಗೆ ೨೧ ವರ್ಷ ಕಡ್ಡಾಯವಾಗಿ ತುಂಬಿರಬೇಕು, ಅಂತಹ ವಧು-ವರರ ಸಂಬಂಧಿಸಿದ ಪೋಷಕರು 31-5-2025 ೩೧-೫-೨೦೨೫ ಶನಿವಾರದೊಳಗೆ ಅಗತ್ಯ ದಾಖಲಾತಿಗಳನ್ನು ಶ್ರೀಮಠದಲ್ಲಿ ಸಲ್ಲಿಸಿ ನೊಂದಾಯಿಸಿಕೊಳ್ಳಬೇಕು, ನಂತರದಲ್ಲಿ ಬರುವ ದಾಖಲಾತಿಗಳನ್ನು ಪರಿಗಣಿಸಲಾಗುವುದಿಲ್ಲ, ವಧು-ವರರಿಗೆ ವಿವಾಹ ಸಮಯದಲ್ಲಿ ಮಾಂಗಲ್ಯ, ಮೂಗುತಿ ಹಾಗೂ ಸಮವಸ್ತ್ರ ನೀಡಲಾಗುವುದು.

ನೀಡಬೇಕಾದ ದಾಖಲಾತಿಗಳು;– ವಧು-ವರರ ಪ್ರತ್ಯೇಕ ೩ ಭಾವಚಿತ್ರಗಳು, ಜನ್ಮದಿನಾಂಕದ ಬಗ್ಗೆ ಜನನ ಪ್ರಮಾಣಪತ್ರ, ಅಥವಾ ಶಾಲಾ ದಾಖಲಾತಿ ಸರ್ಟಿಫೀಕೆಟ್, ವಾಸಸ್ಥಳದ ಬಗ್ಗೆ ಆಧಾರ್ ಕಾರ್ಡ್, ಪಡಿತರ ಚೀಟಿ, ವಧು-ವರರ ಪ್ರಥಮ ವಿವಾಹ ಎಂಬ ಬಗ್ಗೆ ಮಾತಾ-ಪಿತಾರಿಂದ ದೃಡೀಕರಣ ಪತ್ರ ನೀಡಬೇಕು.

ಹೆಚ್ಚಿನ ವಿವರಗಳಿಗಾಗಿ ಶ್ರೀಮಠದ ಡಿ. ದೊಡ್ಡೇಗೌಡ್ರು – 94827 21789, ರಾಮಯ್ಯ ಮಾಸ್ಟರ್ – 94804 97322 , ಬಿ.ಎಸ್. ಜಗದೀಶ್ ಮಾಸ್ಟರ್ – 97318 01048, ಶಿವಶಂಕರ್ – 93537 79377 ರವರನ್ನು ಸಂಪರ್ಕಿಸಲು ತಿಳಿಸಿದರು.

ಈ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಅನೇಕ ಮಠಾಧೀಶರುಗಳು, ಹರಗುರು ಚರಮೂರ್ತಿಗಳು, ಕರ್ನಾಟಕ ಸರ್ಕಾರದ ಸಚಿವರು, ಸಂಸದರು, ಶಾಸಕರು ಮತ್ತಿತರ ಜನಪ್ರತಿನಿಧಿಗಳೆಲ್ಲರೂ ಆಗಮಿಸಲಿದ್ದು ಕಾರ್ಯಕ್ರಮಕ್ಕೆ ಶ್ರೀ ಮಠದ ಸದ್ಬಕ್ತರು ಸುತ್ತಮುತ್ತಲ ಗ್ರಾಮಗಳ ಜನತೆಯ ಈ ಎಲ್ಲಾ ಕಾರ್ಯಕ್ರಮಗಳಿಗೆ ಭಾಗವಹಿಸಿ ತಮ್ಮ ತನು ಮನ ಧನ ಸಮರ್ಪಣೆಯೊಂದಿಗೆ ಯಶಸ್ವಿಗೊಳಿಸಿ ಎಂದು ತಿಳಿಸಿದರು.

Leave a Reply

Your email address will not be published. Required fields are marked *