ಅರಕಲಗೂಡು-ರೈತರು ಕೃಷಿಯ ಜೊತೆಗೆ ಉಪಕಸುಬುಗಳಾದ ಹೈನುಗಾರಿಕೆ,ಕುರಿ,ಕೋಳಿ ಸಾಕಣೆಗಳನ್ನು ಮಾಡುವ ಮೂಲಕ ಆರ್ಥಿಕವಾಗಿ ಗಟ್ಟಿಯಾಗಲು ಸಾಧ್ಯವಿದೆ ಎಂದು ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ,ಬಿ.ಸಿ ಟ್ರಸ್ಟ್ ನ ತಾಲೂಕು ಯೋಜನಾಧಿಕಾರಿ ಎಸ್.ಬಿ ಜಿನ್ನಪ್ಪ ತಿಳಿಸಿದರು.
ಗೊರಗುಂಡಿ ಗ್ರಾಮದಲ್ಲಿ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕೃಷಿ ತರಬೇತಿ,ರೈತ ಕ್ಷೇತ್ರ ಪಾಠ ಶಾಲೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ನಾವು ಕೃಷಿ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು ರೈತರು ಇದನ್ನು ಸದುಪಯೋಗಪಡಿದುಕೊಳ್ಳಬೇಕು. ಕೃಷಿಯ ಜೊತೆಯಲ್ಲಿ ಉಪ ಕೃಷಿಗಳನ್ನು ಅಳವಡಿಸಿಕೊಂಡಾಗ ಲಾಭದಾಯಕವಾಗಿ ಅಭಿವೃದ್ಧಿ ಹೊಂದಬಹುದು ಎಂದರು.
ಸ್ವಉದ್ಯೋಗ ತರಬೇತಿ ಕೇಂದ್ರದ ನಿರ್ದೇಶಕ ಪ್ರಕಾಶ್ ಮಾತನಾಡಿ, ಯುವಕ-ಯುವತಿಯರು,ಸ್ವ ಉದ್ಯೋಗ ನಡೆಸಲು ಉಪಯೋಗವಾಗುವ ಮೋಟಾರ್ ರಿಪೇರಿ,ಫೋಟೋ ಮತ್ತು ವಿಡಿಯೋಗ್ರಫಿ,ಟೈಲರಿಂಗ್,ಪಾಸ್ಟ್ ಫುಡ್,ಇನ್ನಿತರ ತರಬೇತಿಗಳನ್ನು ಪಡೆಯುವ ಮೂಲಕ ಸ್ವಾವಲಂಬಿಯಾಗಿ ಬದುಕಿ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಾಕಮ್ಮ,ವಲಯದ ಮೇಲ್ವಿಚಾರಕಿ ಶೀಲಾ,ಕೃಷಿ ಮೇಲ್ವಿಚಾರಕ ಸುನಿಲ್ ಕುಮಾರ್ ಎಂ,ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಪುಟ್ಟಮ್ಮ,ಗ್ರಾಮದ ರೈತರು ಹಾಗೂ ಸ್ವಸಹಾಯ ಸಂಘದ ಸದಸ್ಯರು ಭಾಗವಹಿಸಿದ್ದರು.
——-ಶಶಿಕುಮಾರ್ ಕೆಲ್ಲೂರು