ಅರಕಲಗೂಡು-ಕರ್ನಾಟಕ ಭೀಮ್ ಸೇನೆ ಆಟೋ ಚಾಲಕರ ಮತ್ತು ಮಾಲೀಕರ ಸಂಘ ಉದ್ಘಾಟನೆ-ಬಡಜನರ ಸೇವೆ ಮಾಡುವಂತೆ ಸಲಹೆ ನೀಡಿದ ಶಂಕರ್ ರಾಮಲಿಂಗಯ್ಯ

ಅರಕಲಗೂಡು-ಬಡ ರೋಗಿಗಳಿಗೆ ಹಾಗು ಗರ್ಭಿಣಿ ಸ್ತ್ರೀಯರಿಗೆ ಆಟೋಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡುವಂತೆ ಕರ್ನಾಟಕ ಭೀಮ್ ಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶಂಕರ್ ರಾಮಲಿಂಗಯ್ಯ ಆಟೋ ಚಾಲಕರುಗಳಲ್ಲಿ ಮನವಿ ಮಾಡಿದರು.

ಅವರು ಕರ್ನಾಟಕ ಭೀಮ್ ಸೇನೆ ಸಂಘಟನೆ ವತಿಯಿಂದ ನಡೆದ ನೂತನ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಉದ್ಘಾಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ಸಂವಿಧಾನ ಶಿಲ್ಪಿ ಬಾಬಾಸಾಹೇಬರು ಬಡವರ ಮತ್ತು ದೀನದಲಿತರ ಉದ್ದಾರಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು.ಅಷ್ಟೆಲ್ಲ ಹೋರಾಟಗಳನ್ನು ನಾವು ಮಾಡಲು ಸಾಧ್ಯವಾಗದೆ ಹೋದರು ನಮ್ಮ ಕೈಲಾದ ಮಟ್ಟಿಗೆ ಬಡವರ ಸೇವೆಗಳನ್ನು ಮಾಡಿ ಬಾಬಾಸಾಹೇಬರಿಗೆ ಆ ಮೂಲಕ ಗೌರವ ನೀಡಬೇಕೆಂದು ಅವರು ಆಟೋ ಚಾಲಕರಿಗೆ ಕರೆ ನೀಡಿದರು.

ಕರ್ನಾಟಕ ಭೀಮ್ ಸೇನೆ ಸಂಘಟನೆಯ ಹಾಸನ ಜಿಲ್ಲಾ ಉಪಾಧ್ಯಕ್ಷರಾದ ಗಣೇಶ್ ಮಾತನಾಡಿ ನಮ್ಮ ಸಂಘಟನೆಯ ಮೂಲ ಉದ್ದೇಶ ಸೇವೆಯೇ ಆಗಿದೆ.ಸಂಘಟನೆ ರಾಜ್ಯದ ಎಲ್ಲಾ ಜಿಲ್ಲೆ ತಾಲೂಕುಗಳಲ್ಲೂ ಉತ್ತಮವಾಗಿ ಸರ್ವ ಜನಾಂಗದ ಉದ್ದಾರಕ್ಕಾಗಿ ಕಾರ್ಯ ನಿರ್ವಹಿಸುತ್ತಿದೆ.ದೀನದಲಿತರ ಬಡವರ ಅಲ್ಪಸಂಖ್ಯಾತರ ಹಿಂದುಳಿದ ವರ್ಗದ ಎಲ್ಲಾ ಜನಾಂಗದ ಬಡವರಿಗೆ ಸಹಾಯ ಮಾಡುತ್ತಾ ಬಂದಿದೆ.ನೊಂದವರಿಗೆ ದನಿಯಾಗಿ ಸರ್ಕಾರದ ಸವಲತ್ತುಗಳನ್ನು ಬಡವರಿಗೆ ಕೊಡಿಸುವ ಕೆಲಸ ಮಾಡುತ್ತಿದೆ.ಇಲ್ಲಿಯೂ ಸಹ ನೀವುಗಳು ಸಂಘಟನೆಯ ದ್ಯೇಯೋದ್ದೇಶಗಳಿಗೆ ಚ್ಯುತಿ ಬಾರದ ಹಾಗೆ ಸಂಘವನ್ನು ಕಟ್ಟಿ ಉಳಿಸಿ ಬೆಳೆಸುವಂತೆ ಸಲಹೆ ನೀಡಿದರು.

ಈ ಸಂದರ್ಭ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಪುತ್ಥಳಿಗೆ ರಾಜ್ಯ ಸಮಿತಿ ,ಮೈಸೂರು ಜಿಲ್ಲೆ,ಹಾಸನ ಜಿಲ್ಲೆ ,ಅರಕಲಗೂಡು, ಪಿರಿಯಾಪಟ್ಟಣ, ಹುಣಸೂರು ಘಟಕಗಳ ಪದಾಧಿಕಾರಿಗಳು ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಿದರು.

ಕರ್ನಾಟಕ ಭೀಮ ಸೇನೆ ರಾಜ್ಯ ಸಂಘಟನಾ ಕಾರ್ಯದರ್ಶಿ ಸುರೇಶ್ ಗವಿಯಪ್ಪ , ರಾಜ್ಯ ಕಾರ್ಯದರ್ಶಿ ಕುಮಾರ್ ಡಿ, ಮೈಸೂರು ಕೊಡಗು ವಿಭಾಗಿಯ ಅಧ್ಯಕ್ಷ ಸಂತೋಷ್ ,ಹುಣಸೂರು ತಾಲೂಕು ಅಧ್ಯಕ್ಷ ಮಧು, ಪಿರಿಯಾಪಟ್ಟಣ ತಾಲೂಕು ಅಧ್ಯಕ್ಷ ಮಹಾದೇವ್ ಜೆ ,ಕಾರ್ಯಧ್ಯಕ್ಷ ಅಶೋಕ್ ಎಸ್, ಕುಮಾರ್, ಮುಖಂಡರಾದ ಚಂದ್ರಣ್ಣ, ರಮೇಶ್, ಸುದೀರ್ ,ಚಂದ್ರು, ಮಂಜು, ರಾಕೇಶ್, ಮತ್ತು ಆಟೋ ಚಾಲಕರ ಸಂಘದ ಸದಸ್ಯರು ಹಾಜರಿದ್ದರು.

————–-ಶಶಿಕುಮಾರ್ ಕೆಲ್ಲೂರು

Leave a Reply

Your email address will not be published. Required fields are marked *

× How can I help you?