ಅರಕಲಗೂಡು;ಗ್ಯಾರಂಟಿ ಅನುಷ್ಠಾನ ಸಮಿತಿಯ ಕಚೇರಿಯನ್ನು ತಾಲೂಕು ಗ್ಯಾರಂಟಿ ಯೋಜನೆಯ ತಾಲೂಕು ಅಧ್ಯಕ್ಷರಾದ ಹೆಚ್ ಪಿ ಶ್ರೀಧರ್ ಗೌಡ ಉದ್ಘಾಟಿಸಿದರು.
ತಾಲೂಕು ಪಂಚಾಯತಿಯಲ್ಲಿ ಕಛೇರಿಯಿದ್ದು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಕುಂದು ಕೊರತೆಗಳೇನಾದರೂ ಇದ್ದರೆ ಕಚೇರಿಗೆ ಭೇಟಿ ನೀಡಿ ಪರಿಹರಿಸಿಕೊಳ್ಳಬಹುದು ಎಂದು ಹೆಚ್ ಪಿ ಶ್ರೀಧರ್ ಗೌಡ ಇದೆ ಸಂದರ್ಭದಲ್ಲಿ ಹೇಳಿದರು.
ಕಾಂಗ್ರೆಸ್ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಸಮರ್ಪಕ ವಿತರಣೆಯ ಜವಾಬ್ದಾರಿಯನ್ನು ನಿಭಾಯಿಸಲು ನನ್ನನು ನೇಮಿಸಲಾಗಿದೆ.ಜೊತೆಗೆ ಹಲವು ಸದಸ್ಯರನ್ನೊಳಗೊಂಡ ಕಮಿಟಿಯಿದ್ದು ಯೋಜನೆಗೆ ಸಂಬಂದಿಸಿದ ಅಥವಾ ಇನ್ನ್ಯಾವುದೇ ಸಮಸ್ಯೆಗಳಿದ್ದರೂ ಕಚೇರಿಗೆ ಭೇಟಿ ನೀಡಿ ಮಾಹಿತಿ ನೀಡಬಹುದು.ಅವನ್ನು ಸರಿಪಡಿಸಿಕೊಡಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುವುದಾಗಿ ಅವರು ತಾಲೂಕಿನ ಜನತೆಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿಗಳು,ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ,ಚೆಸ್ಕಾಂ ಅಧಿಕಾರಿಗಳು,ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆ ಅಧಿಕಾರಿಗಳು,ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಅಧಿಕಾರಿಗಳು,ಉದ್ಯೋಗ ಅಧಿಕಾರಿಗಳು,ಕೆ ಎಸ್ ಆರ್ ಟಿ ಸಿ ಡಿಪೋ ಮ್ಯಾನೇಜರ್ ಮತ್ತು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರುಗಳು ಹಾಗೂ ಗ್ಯಾರಂಟಿ ಯೋಜನೆಯ ಫಲಾನುಭಾವಿಗಳು ಉಪಸ್ಥಿತರಿದ್ದರು.
ಒಂದು ಮೆಚ್ಚುಗೆಯ ಮಾತು…
ಹೆಚ್ ಪಿ ಶ್ರೀಧರ ಗೌಡರವರು ಕಳೆದ ವಿಧಾಸಭಾ ಚುನಾವಣೆಯಲ್ಲಿ ಅರಕಲಗೂಡು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ದಿಸಿ ಸೋಲು ಕಂಡಿದ್ದರು.
ಚುನಾವಣೆ ಮುಗಿದು ಫಲಿತಾಂಶ ಬರುವುದನ್ನು ಕಾಯದೆ ಎಂದಿನಂತೆಯೇ ತಮ್ಮ ಜನಸೇವೆಯನ್ನು ಮುಂದುವರೆಸಿದ್ದರು.
ಇವತ್ತಿಗೂ ಕೂಡ ತಮ್ಮ ಸೋಲಿನ ಕಹಿಯನ್ನು ಎಲ್ಲಿಯೂ ವ್ಯಕ್ತಪಡಿಸದೆ ಒಬ್ಬ ಶಾಸಕರ ಹಾಗೆಯೇ ಕ್ಷೇತ್ರದ ಜನರ ಕಷ್ಟ ಸುಖಗಳನ್ನು ಅವರ ಮದ್ಯೆಯೇ ಇದ್ದು ಹಂಚಿಕೊಂಡು,ಯಾಕಾದರೂ ಇಂತಹ ವ್ಯಕ್ತಿಯನ್ನು ಸೋಲಿಸಿದೆವಪ್ಪಾ ಎಂದು ತಾಲೂಕಿನ ಮತದಾರರು ಬೇಸರಪಟ್ಟುಕೊಳ್ಳುವಂತೆ ಮಾಡಿರುವುದು ಮಾತ್ರ ಸುಳ್ಳಲ್ಲ.
——————-ಶಶಿಕುಮಾರ್ ಕೆಲ್ಲೂರು