ಅರಕಲಗೂಡು-ವೈಕುಂಠ ಏಕಾದಶಿ ಪ್ರಯುಕ್ತ ಹುಲಿಕಲ್ ಗ್ರಾಮದಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಇಂದು ಬೆಳಗ್ಗೆ ಆಗಮಿಸಿದ್ದ ಜಿಲ್ಲಾಧಿಕಾರಿ ಸಿ.ಸತ್ಯಭಾಮ ರವರನ್ನು ನಿವೃತ್ತ ಐ.ಜಿ ಕಸ್ತೂರಿರಂಗನ್ ಹಾಗೂ ದೇವಸ್ಥಾನದ ಭಕ್ತ ಮಂಡಳಿ ವತಿಯಿಂದ ಪೂರ್ಣ ಕುಂಭ ಸ್ವಾಗತದೊಂದಿಗೆ ಸ್ವಾಗತಿಸಲಾಯಿತು.
ದೇವರ ದರ್ಶನ ಪಡೆದು ಮಾತನಾಡಿದ ಸಿ, ಸತ್ಯಭಾಮ ಅವರು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ದೇವರ ದರ್ಶನ ಪಡೆಯುತ್ತಿದ್ದು,ಆ ದೇವರು ಎಲ್ಲಾ ಕುಟುಂಬಗಳಿಗೂ ಒಳ್ಳೆಯದು ಮಾಡಲಿ.ನಮ್ಮ ಜಿಲ್ಲೆ ಹಾಗೂ ನಮ್ಮ ರಾಜ್ಯದ ಜನಕ್ಕೆ ಒಳ್ಳೆಯದಾಗಲಿ ಎಂದು ಆ ದೇವರಲ್ಲಿ ಬೇಡಿಕೊಂಡಿದ್ದೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಜರಾಯಿ ತಹಶೀಲ್ದಾರ್ ಲತಾ, ತಾಲೂಕು ಕಚೇರಿಯ ಶಿರಸ್ಧೆದಾರರಾದ ಸಿ. ಸ್ವಾಮಿ, ಉಪತಹಶೀಲ್ದಾರರಾದ ರವಿ, ರಾಜಸ್ವ ನಿರೀಕ್ಷಕರಾದ ರಾಘವೇಂದ್ರ, ಗ್ರಾಮ ಆಡಳಿತ ಅಧಿಕಾರಿಗಳಾದ ಕಾವ್ಯ, ಪುನೀತ್, ಮೆಹಬೂಬ್ ಪಟೇಲ್, ಸೌಮ್ಯ, ಕಂದಾಯ ಇಲಾಖೆ ಸಿಬ್ಬಂದಿಗಳು ಮತ್ತು ಗ್ರಾಮಸ್ಥರು ಹಾಜರಿದ್ದರು.
————–—ಶಶಿಕುಮಾರ್ ಕೆಲ್ಲೂರು