ಅರಕಲಗೂಡು-ಹುಟ್ಟು ನಿಶ್ಚಿತ,ಸಾವು ಖಚಿತ ಇವೆರಡರ ನಡುವೆ ಇರುವ ಬದುಕಿನಲ್ಲಿ ನಾವು ಏನು ಸಾಧನೆ ಮಾಡುತ್ತೇವೆ,ಏನು ಸಂದೇಶ ನೀಡುತ್ತೇವೆ ಎನ್ನುವುದು ಮುಖ್ಯ.ಮಹಾತ್ಮ ಗಾಂಧೀಜಿ ಅವರು ಇದನ್ನೇ “ನನ್ನ ಬದುಕೇ ನನ್ನ ಸಂದೇಶ” ಎಂದು ಸರಳವಾಗಿ ಹೇಳಿದರು.ಸತ್ಯ,ಶಾಂತಿ,ಅಹಿಂಸೆ ಇವು ಅವರು ಬೋಧಿಸಿದ 3 ತತ್ವಗಳು. ಬದುಕಿನಲ್ಲಿ ಇವನ್ನು ಅಳವಡಿಸಿಕೊಂಡರೆ ಖಂಡಿತವಾಗಿಯೂ ಸನ್ಮಾರ್ಗದ ಮೂಲಕ ನಾವು ಗುರಿ ತಲುಪಬಹುದು ಎಂದು ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲ್ಲೂಕು ಅಧ್ಯಕ್ಷರಾದ ಹೆಚ್ ಪಿ ಶ್ರೀಧರ್ ಗೌಡ ಹೇಳಿದರು.
ಮಹಾತ್ಮ ಗಾಂಧೀಜಿ ಅವರ 155ನೇ ಜಯಂತಿ ಹಾಗೂ ಅವರು ಬೆಳಗಾವಿ ಸ್ವಾತಂತ್ರ್ಯ ಸಂಗ್ರಾಮದ ನೇತೃತ್ವ ವಹಿಸಿ 100 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಅರಕಲಗೂಡು ಕಾಂಗ್ರೆಸ್ ಸಮಿತಿ ವತಿಯಿಂದ ಪಟ್ಟಣದ ಬನ್ನಿಮಂಟಪ ದಿಂದ ಅನಕೃ ವೃತ್ತದವರೆಗೆ ಹಮ್ಮಿಕೊಂಡಿದ್ದ “ಗಾಂಧಿ ನಡಿಗೆ” ಪಾದಯಾತ್ರೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇಂದು ನೂರಾರು ಕಾರ್ಯಕರ್ತರು,ನಾಯಕರು ಹೆಜ್ಜೆ ಹಾಕುವ ಮೂಲಕ ಜಗತ್ತಿಗೆ ಶಾಂತಿ ಸಂದೇಶ ಸಾರಿದ ಮಹಾತ್ಮ ಗಾಂಧೀಜಿ ಅವರಿಗೆ ಗೌರವ ಸಮರ್ಪಿಸಿದ್ದೇವೆ.ದೇಶ ಸರ್ವಾಧಿಕಾರಿ ಮನೋಸ್ಥಿತಿಯವರ ಕೈಗೆ ಸಿಕ್ಕಿದ್ದು ಆದಷ್ಟು ಬೇಗ ಅವರಿಂದ ಬಿಡುಗಡೆ ಸಿಕ್ಕಿ ಶಾಂತಿ ಸೌಹಾರ್ದತೆ ನೆಲೆಗೊಳ್ಳಲಿ ಎಂದು ಹೆಚ್ ಪಿ ಶ್ರೀಧರಗೌಡ ತಿಳಿಸಿದರು.
ಅರಕಲಗೂಡು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿಗಳಾದ ಟಿ ಎಂ ಶಾಹಿದ್ ಟೆಕ್ಕಿಲ್, ಕಾಂಗ್ರೆಸ್ ಮುಖಂಡರಾದ ಎಂ ಟಿ ಕೃಷ್ಣೆಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಸನ್ನಕುಮಾರ್,ಪ ಪಂ ಅಧ್ಯಕ್ಷರಾದ ಪ್ರದೀಪ್ ಕುಮಾರ್,ಪ ಪಂ ಉಪಾಧ್ಯಕ್ಷರಾದ ಸುಭಾನ್ ಷರೀಫ್,ಜಿಲ್ಲಾ ಕುರುಬ ಸಂಘದ ಉಪಾಧ್ಯಕ್ಷರು ಹಾಗೂ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸದಸ್ಯರಾದ ಎಸ್ ಎಲ್ ಗಣಪತಿ,
ಕಾಂಗ್ರೆಸ್ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದಶರಥ,ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಹಾಗೂ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸದಸ್ಯರಾದ ಪುಟ್ಟಯ್ಯ ,ಅರಕಲಗೂಡು ನಗರಾಭಿವೃದ್ಧಿ ಪ್ರಾಧಿಕರಾದ ಅಧ್ಯಕ್ಷರಾದ ಗುರುಮೂರ್ತಿ,ಎನ್ ಎಸ್ ಯು ಐ ತಾಲ್ಲೂಕು ಅಧ್ಯಕ್ಷರಾದ ಶ್ರೀಕಾಂತ್,ಜಿಲ್ಲಾ ಐ ಎನ್ ಟಿ ಯು ಸಿ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್ ,ಅರಕಲಗೂಡು ಟೌನ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರು ಹಾಗೂ ಆಶ್ರಯ ಸಮಿತಿ ಸದಸ್ಯರಾದ ಮುಸಾವೀರ್ ,ಆಶ್ರಯ ಸಮಿತಿ ಸದಸ್ಯರಾದ ವಿಜಿಕುಮಾರ್,ಮಹಿಳಾ ಘಟಕದ ತಾಲ್ಲೂಕು ಅಧ್ಯಕ್ಷರಾದ ರಾಧ ,ಸುಮ,ರಂಗನಾಥ ,ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರುಗಳಾದ ಸೋಮಶೇಖರ್ ಕಬ್ಬಳಿಗೆರೆ, ಸತ್ಯರಾಜ್,ಧರ್ಮ,ಸಲೀಂ,ಕೆಡಿಪಿ ಸದಸ್ಯರಾದ ಸುರೇಶ್ ಸೋಮನಹಳ್ಳಿ, ತಾಲ್ಲೂಕು ಎಸ್ ಸಿ-ಎಸ್ ಟಿ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಪಟ್ಟಣ ಮಂಜು,ಪಕ್ಷದ ಆನೇಕ ಪಧಾಧಿಕಾರಿಗಳು, ಮುಖಂಡರುಗಳು, ಕಾರ್ಯಕರ್ತರುಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
————-ಶಶಿಕುಮಾರ್ ಕೆಲ್ಲೂರು