ಅರಕಲಗೂಡು-ಪಟ್ಟಣದ ಶಿಕ್ಷಕರ ಭವನದಲ್ಲಿ ಬರಹಗಾರರ ಸಂಘ(ರಿ)ದ ಅಧ್ಯಕ್ಷರು, ಸಂಘಟಕರಾದ ಸುಂದರೇಶ್ ಡಿ
ಉಡುವೇರೆ ಅವರ ನೇತೃತ್ವದಲ್ಲಿ ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ ಹೆಚ್.ಎನ್ ನಂಜೇಗೌಡರ ಸ್ಮರಣಾರ್ಥ ಹಿನ್ನೆಲೆ ವಿಶಿಷ್ಟ,ವಿಭಿನ್ನ ಕಾರ್ಯಕ್ರಮ ಜರುಗಿತು.
ರಾಜಕೀಯ ಧುರೀಣ, ನೀರಾವರಿ ತಜ್ಞ ಎಂದು ಕರೆಯಲ್ಪಡುವ ಹೆಚ್. ಎನ್. ನಂಜೇಗೌಡರ ಸ್ಮರಣಾರ್ಥದ ಕಾರ್ಯಕ್ರಮ ಕ್ಕೆ ಕನ್ನಡ ಧ್ವಜಾರೋಹಣ ಹಾಗೂ ಚುಟುಕು ಸಾಹಿತ್ಯ ಪರಿಷತ್ತಿನ ಧ್ವಜಾರೋಹಣ ಮಾಡುವ ಮೂಲಕ ಶಾಸಕ ಎ.ಮಂಜು ಚಾಲನೆ ನೀಡಿದರು.
ಹೆಚ್.ಎನ್ ನಂಜೇಗೌಡರ ಅವರ ಬದುಕು,ರಾಜಕೀಯ ನಡೆ, ರೈತಪರವಾದ ಸೇವೆ ಕುರಿತಂತೆ ಡಾ.ನಿಂಬೆಹಳ್ಳಿ ಚಂದ್ರಶೇಖರ್, ಹಾಗೂ ಹೆಚ್.ಎಸ್.ಗೋವಿಂದೇಗೌಡರು ಬರೆದ ಕೃತಿಗಳನ್ನು ಫೊ.ಅನಸೂಯ,ಪ್ರಾಶುಪಾಲರಾದ ಮಹೇಶ್ ಪ್ರಾಂಶುಪಾಲರು ಪರಿಚಯ ಮಾಡಿಕೊಟ್ಟರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರಿಗೆ ಕೂಡು ಮಾಡುವ ಪ್ರಶಸ್ತಿ ಪ್ರದಾನವನ್ನು ಗಣ್ಯರು ನೆರವೇರಿಸಿದರು.ಸಾಹಿತಿ ಗೊರೂರು ಅನಂತರಾಜು ಮತ್ತಿತರ ಕವಿಗಳ ಉಪಸ್ಥಿತಿಯಲ್ಲಿ ‘ಕವಿ ಕಾವ್ಯ ಗಾಯನ ಮತ್ತು ಕಲಾಕುಂಚ’ಎಂಬ ವಿಶಿಷ್ಟ ಕಾರ್ಯಕ್ರಮವು ಜರುಗಿತು.
ಕಾರ್ಯಕ್ರಮದಲ್ಲಿ ಕವಿಗಳಾದ ಗೊರೂರು ಅನಂತರಾಜು, ಸಾಹಿತಿ ಬೋರೇಗೌಡ, ಅರಸೀಕೆರೆ ಸಾವಿತ್ರಮ್ಮ, ಪ್ರೇಮಾ ಪ್ರಶಾಂತ್, ಬಸರಾಳು ಶಿವರಾಮ್, ಪ್ರದೀಪ್ ಕುಮಾರ್, ದಿವಾಕರ್,ಶಶಿಕುಮಾರ್,ಜಿ.ಟಿ ಕುಮಾರಸ್ವಾಮಿ ಗಂಗೂರು,ನರಸೇಗೌಡರು ವಡ್ಡರಹಳ್ಳಿ, ಸ್ವಾಮಿ ನಾಯಕ್, ಅನುಸೂಯ, ಕೆ.ಪಿ, ಹೆಚ್ .ಎನ್ ನಂಜೇಗೌಡ, ಹೆಚ್.ಈ ಅಶೋಕ್ ಸೇರಿದಂತೆ ಇತರರು ಹಾಜರಿದ್ದರು.