ಅರಕಲಗೂಡು-ದೊಡ್ಡಮಗ್ಗೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ-ನಿವೃತ್ತ ಶಿಕ್ಷಣಾಧಿಕಾರಿ ಜೆ.ಬಿ.ತಮಣ್ಣಗೌಡರಿಗೆ ಗೌರವ ಸಮರ್ಪಣೆ

ಅರಕಲಗೂಡು-ಜಿಲ್ಲಾ ವಸತಿ ಶಾಲೆಗಳ ಒಕ್ಕೂಟದಿಂದ ತಾಲ್ಲೂಕಿನ ದೊಡ್ಡಮಗ್ಗೆ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವದಲ್ಲಿ ನಿವೃತ್ತ ಶಿಕ್ಷಣಾಧಿಕಾರಿ ಜೆ.ಬಿ.ತಮಣ್ಣಗೌಡ ಅವರನ್ನು ಸನಾನಿಸಲಾಯಿತು.

ಕನ್ನಡ ರಾಜ್ಯೋತ್ಸವಕ್ಕೆ ಚಾಲನೆ ನೀಡಿದ ಶಾಸಕ ಎ.ಮಂಜು ಅವರು ಮಾತನಾಡಿ, ವಸತಿ ಶಾಲೆಗಳಿರುವುದರಿಂದ ಗ್ರಾಮೀಣ ಪ್ರದೇಶದ ಪ್ರತಿಭಾವಂತ ಮಕ್ಕಳಿಗೆ ಅನುಕೂಲವಾಗುತ್ತಿದೆ. ಪೋಷಕರು ಹಾಗು ಮಕ್ಕಳು ಅದರ ಸದುಪಯೋಗ ಪಡೆಯಬೇಕು. ಆತವಿಶ್ವಾಸದಿಂದ ವ್ಯಾಸಂಗ ಮಾಡಬೇಕು. ಜೆ.ಬಿ.ತಮಣ್ಣಗೌಡ ಅವರಂತಹ ಶಿಕ್ಷಕರು ಜಿಲ್ಲೆಯಲ್ಲಿ ಇದ್ದಾರೆ ಎಂಬುದೇ ಹೆಮೆಯ ಸಂಗತಿ ಎಂದರು.

ತಮಣ್ಣಗೌಡ ಅವರು ಶಿಕ್ಷಣ ಕ್ಷೇತ್ರದಲ್ಲಿ ಗುರುತರ ಸೇವೆ ಸಲ್ಲಿಸಿದ್ದು,ಮಕ್ಕಳಿಗಾಗಿ ತಮ್ಮ ಜೀವನವನ್ನೇ ಸಮರ್ಪಣೆ ಮಾಡಿದ್ದಾರೆ. ಕಂದಲಿ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 20 ವರ್ಷ ಪ್ರಾಂಶುಪಾಲರಾಗಿದ್ದ ಅವರು ತಮಗೆ ಬರುತ್ತಿದ್ದ ಸಂಬಳದ ಬಹುಪಾಲನ್ನು ವಿದ್ಯಾರ್ಥಿಗಳಿಗೆ ಮೀಸಲಿಟ್ಟಿದ್ದರು. ಕಂದಲಿ ವಸತಿ ಶಾಲೆಯ ಪ್ರಾಂಶುಪಾಲರಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಶಿಕ್ಷಣಾಧಿಕಾರಿ ಹಾಗು ಎಸ್.ಎಸ್.ಎಲ್.ಸಿ ನೋಡಲ್ ಅಧಿಕಾರಿಯಾಗಿದ್ದ ಅವರು ಆ. 30ರಂದು ಸೇವಾ ನಿವೃತ್ತಿ ಹೊಂದಿದ್ದಾರೆ.ಜಿಲ್ಲೆಯ ಎಲ್ಲಾ 38 ವಸತಿ ಶಾಲೆಗಳ ಪರವಾಗಿ ಅವರನ್ನು ಗೌರವಿಸಲಾಯಿತು.

ಬಿಸಿಎಂ ಅಧಿಕಾರಿ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ.ನಾರಾಯಣ್, ವಸತಿ ಶಾಲೆಗಳ ನೌಕರರ ಸಂಘದ ರಾಜ್ಯಾಧ್ಯಕ್ಷ ರವಿಚಂದ್ರನ್, ಜಿಲ್ಲಾಧ್ಯಕ್ಷ ಸಿ.ಎನ್.ಉಷಾ, ಜಿಲ್ಲಾ ಸಂಯೋಜನಾಧಿಕಾರಿ ಸುಮಂತ್, ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ರಾಜಾ ರವಿಚಂದ್ರನ್, ದೊಡ್ಡ ಮಗ್ಗೆ ಅಂಬೇಡ್ಕರ್ ವಸತಿ ಶಾಲೆ ಪ್ರಾಂಶುಪಾಲೆ ಸುಮಲತಾ, ಬರಗೂರು ಶಾಲೆ ಪ್ರಾಂಶುಪಾಲ ಗಿರೀಶ್, ಸಂಪತ್‌ರಾಜು, ತಾರಾನಾಥ್, ಶಂಕರ್, ಶೃತಿ ಇತರರಿದ್ದರು.

Leave a Reply

Your email address will not be published. Required fields are marked *

× How can I help you?