ಅರಕಲಗೂಡು:ಇತಿಹಾಸ ಪ್ರಸಿದ್ಧ ಮಂಕನಹಳ್ಳಿ ಅಮ್ಮನವರ ಬನಕ್ಕೆ ಸ್ವಂತ ಹಣದಲ್ಲಿ ಶೆಡ್ ನಿರ್ಮಿಸಿದ ಯುವಕರು-ವ್ಯಾಪಕ ಪ್ರಶಂಶೆ

ಅರಕಲಗೂಡು:200 ವರ್ಷಗಳ ಹಳೆಯ ಇತಿಹಾಸ ಹೊಂದಿರುವ,ಹಲವು ವರ್ಷಗಳಿಂದ ಸುಸಜ್ಜಿತ ವ್ಯವಸ್ಥೆ ಇಲ್ಲದ ಮತ್ತು ಸರಿಯಾದ ನಿರ್ವಹಣೆ ಇಲ್ಲದ ಧಾರ್ಮಿಕ ಸ್ಥಳವನ್ನು ಗ್ರಾಮದ ಯುವಕರು ಸ್ವಚ್ಛಗೊಳಿಸಿ ಭಕ್ತರಿಗೆ ಸೌಕರ್ಯ ಕಲ್ಪಿಸಿರುವ ಘಟನೆ ತಾಲೂಕಿನ ಕೆಲಗಳಲೆ ಗ್ರಾಮದಲ್ಲಿ ಇತ್ತೀಚಿಗೆ ನಡೆದಿದೆ.

ಐತಿಹಾಸಿಕವಾಗಿ ಹೆಸರುವಾಸಿಯಾಗಿರುವ ಗ್ರಾಮದ ಮಂಕನಹಳ್ಳಿ ಅಮ್ಮನವರ ಬನಕ್ಕೆ ಯುವಕರೇ ಸ್ವಯಂ ಪ್ರೇರಿತವಾಗಿ 3 ಲಕ್ಷ ರೂ.ವೆಚ್ಚದಲ್ಲಿ ಶೀಟ್ ಅಳವಡಿಸಿ ಶೆಡ್ ನಿರ್ಮಿಸಿ,ಕಸ ಸಂಗ್ರಹಣ ಡಬ್ಬಿಗಳು, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಬನದ ಬಳಿ ಆಳೆತ್ತರಕ್ಕೆ ಬೆಳೆದಿದ್ದ ಗಿಡ, ಗಂಟಿ ಸ್ವಚ್ಛಗೊಳಿಸಿದ್ದಾರೆ.

ಯುವಕರ ಈ ಕಾರ್ಯಕ್ಕೆ ಗ್ರಾಮಸ್ಥರು ಹಾಗೂ ಭಕ್ತಾಧಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಇಂತಹ ಕಾರ್ಯಗಳು ಸದಾ ಮುಂದುವರೆಯಲಿ ಎoದು ಹಾರೈಸಿದ್ದಾರೆ.

Leave a Reply

Your email address will not be published. Required fields are marked *

× How can I help you?