ಅರಕಲಗೂಡು-ಪೊಲೀಸ್ ಪ್ರಕಟಣೆ-ಮೃತ ವ್ಯಕ್ತಿಯ ವಾರಸುದಾರರ ಪತ್ತೆಗೆ ಮನವಿ

ಅರಕಲಗೂಡು-ಶಂಭುನಾಥಪುರದ ಬಳಿಯಲ್ಲಿ ವಯಸ್ಸಿಕರೊಬ್ಬರು ಅಸ್ವಸ್ಥರಾಗಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ಸುಮಾರು 70 /80 ವರ್ಷ ಆಸುಪಾಸಿನ ವ್ಯಕ್ತಿಯೊಬ್ಬರನ್ನು ಇದೆ ತಿಂಗಳ ನಾಲ್ಕನೇ ತಾರೀಕು ಸರಕಾರಿ ಆಸ್ಪತ್ರೆಗೆ ತಂದು ಚಿಕಿತ್ಸೆಗೆ ದಾಖಲಿಸಿದ್ದರು.

ಆದರೆ ಆ ವ್ಯಕ್ತಿ ಚಿಕಿತ್ಸೆ ಫಲಕಾರಿ ಆಗದೆ ಇಂದು ಮೃತಪಟ್ಟಿದ್ದು ದೂರು ದಾಖಲಿಸಿಕೊಂಡಿರುವ ಪೊಲೀಸರು ಆತನ ವಾರಸುದಾರರ ಪತ್ತೆಗೆ ಮುಂದಾಗಿದ್ದಾರೆ.

ಯಾರಿಗಾದರೂ ಈ ಹಿರಿಯ ಜೀವದ ಬಗೆಗೆ ಮಾಹಿತಿ ಗೊತ್ತಿದ್ದಲ್ಲಿ ಪೊಲೀಸ್ ಠಾಣೆಯ ಮೊಬೈಲ್ ಸಂಖ್ಯೆಗಳಾದ 9880903606/9480804763 ಗೆ ತಿಳಿಸಲು ಕೋರಲಾಗಿದೆ.

Leave a Reply

Your email address will not be published. Required fields are marked *

× How can I help you?