ರಾಮನಾಥಪುರ-ವಿಶ್ವಕರ್ಮರು ಜಗತ್ತು ಕಂಡ ಶ್ರೇಷ್ಠ ವಾಸ್ತುಶಿಲ್ಪಿಗಳು.ಭಾರತದ ಶಿಲ್ಪ ಕೆತ್ತನೆಯನ್ನು ವಿಶ್ವದ ಜನರು ಮೂಕವಿಸ್ಮಿತರಾಗಿ ನೋಡುವಂತೆ ಮಾಡುವಲ್ಲಿ ಅವರ ಪಾತ್ರ ಮಹತ್ವದ್ದು-ಮಂಟೇಲಿಂಗಾಚಾರ್

ರಾಮನಾಥಪುರ-ವಿಶ್ವಕರ್ಮರು ಜಗತ್ತು ಕಂಡ ಶ್ರೇಷ್ಠ ವಾಸ್ತುಶಿಲ್ಪಿಗಳು.ಭಾರತದ ಶಿಲ್ಪ ಕೆತ್ತನೆಯನ್ನು ವಿಶ್ವದ ಜನರು ಮೂಕವಿಸ್ಮಿತರಾಗಿ ನೋಡುವಂತೆ ಮಾಡುವಲ್ಲಿ ಅವರ ಪಾತ್ರ ಮಹತ್ತರವಾದದ್ದು ಎಂದು ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕರು ಹಾಗೂ ವಿಶ್ವಕರ್ಮ ಸಮಾಜದ ಮುಖಂಡರಾದ ಮಂಟೇಲಿಂಗಾಚಾರ್ ಹೇಳಿದರು.

ರಾಮನಾಥಪುರದ ವಿಶ್ವಕರ್ಮ ಸಮುದಾಯದ ಭವನದಲ್ಲಿ ನಡೆದ ವಿಶ್ವಕರ್ಮ ಬ್ರಾಹ್ಮಣ ಸಮಾಜದ ಗುರುಗಳಾದ ಅನಂತ ಶ್ರೀ ವಿಭೂಷಿತ ಶಿವಸುಜ್ಲಾನತೀರ್ಥಮಹಾಸ್ವಾಮಿಗಳವರ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ವಿಶ್ವದ ಎಲ್ಲ ದೇವಾಲಯಗಳ ದೇವರ ವಿಗ್ರಹಗಳನ್ನು ಕೆತ್ತಿದ ಕೀರಿ ವಿಶ್ವಕರ್ಮ ಸಮುದಾಯಕ್ಕೆ ಸಲ್ಲುತ್ತದೆ.ಭಾರತದ ದೈವತ್ವ ಪರಂಪರೆಯನ್ನು ಜೀವಂತವಾಗಿಡುವಲ್ಲಿ ವಿಶ್ವಕರ್ಮರ ಪಾತ್ರ ಮಹತ್ವದ್ದು.ಇಂತಹ ಸಮಾಜ ಇಂದು ಸಮಾನತೆಗಾಗಿ ಹೋರಾಡುವ ಸ್ಥಿತಿ ಬಂದಿರುವುದು ಶೋಚನೀಯವಾಗಿದೆ ಎಂದು ಮಂಟೇಲಿಂಗಾಚಾರ್ ಬೇಸರ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಶ್ರೀ ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರು ಗೋವಿಂದರಾಜ್,ಉಪಾಧ್ಯಕ್ಷ ಮಹೇಶ್, ಕಾರ್ಯದರ್ಶಿ ದೇವರಾಜ್, ಸಹಕಾರ್ಯದರ್ಶಿ ಯೋಗಚಾರ್, ಖಜಾಂಚಿ ತ್ಯಾಗರಾಜಮೂರ್ತಿ,
ವಿಶ್ವಕರ್ಮ ಸಮಾಜದ ಮುಖಂಡರಾದ ವೆ. ದಿವಾಕರಸ್ವಾಮಿ, ವೆ. ಸುಬ್ರಹ್ಮಣ್ಯಚಾರ್,ನಂಜುಂಡಸ್ವಾಮಿ,ಸಣ್ಣಪ್ಪಚಾರ್, ಯೋಗನಂದಮೂರ್ತಿ,ಪೋಸ್ಟ್ ರಾಜಣ್ಣ, ರಾಜಣ್ಷ ಮುಂತಾದವರು ಇದ್ದರು.

——————-ಶಶಿಕುಮಾರ್ ಕೆಲ್ಲೂರು

Leave a Reply

Your email address will not be published. Required fields are marked *

× How can I help you?