ಅರಕಲಗೂಡು-ಆರ್.ಎಸ್.ಎಸ್ ಪ್ರಮುಖ್ ನಟೇಶ್ ನಿಧನ-ತುಂಬ ಲಾರದ ನಷ್ಟ ಎಂದ ಶಾಸಕ ಸಿಮೆಂಟ್ ಮಂಜು

ಅರಕಲಗೂಡು-ಆರ್.ಎಸ್.ಎಸ್ ನ ಪ್ರಮುಖರಾದ ನಟೇಶ್ ರವರ ಅಕಾಲಿಕ ಮರಣ ತಾಲೂಕಿಗೆ ಮತ್ತು ಜಿಲ್ಲೆಗೆ ತುಂಬಲಾರದ ನಷ್ಟ ಉಂಟುಮಾಡಿದೆ ಎಂದು ಸಕಲೇಶಪುರ ಶಾಸಕ ಸಿಮೆಂಟ್ ಮಂಜು ಕಂಬನಿ ಮಿಡಿದರು.

ಮೃತರ ಅಂತಿಮ ದರ್ಶನ ಪಡೆದು,ಕುಟುಂಬ ವರ್ಗದವರಿಗೆ ಧೈರ್ಯ ತುಂಬಿ ಮಾತನಾಡಿದ ಅವರು,ನಟೇಶ್ ರವರು ಸಣ್ಣ ವಯಸ್ಸಿನಲ್ಲಿಯೇ ಸಂಘದ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡಿದ್ದರು.’ನನಗಾಗಿ ಸ್ವಲ್ಪ,ಸಮಾಜಕ್ಕಾಗಿ ಸರ್ವಸ್ವ’ ಎಂಬ ಸಂಘದ ದ್ಯೇಯವಾಕ್ಯವನ್ನು ಪಾಲಿಸಿಕೊಂಡು ತಮ್ಮ ಜೀವನದ ಹೆಚ್ಚಿನ ಸಮಯವನ್ನು ಸಮಾಜಕ್ಕಾಗಿ ಮುಡಿಪಾಗಿಟ್ಟ ಅವರು ಹಿರಿಯರ ಸೂಚನೆಯಂತೆ ಬಿಜೆಪಿ ಪಕ್ಷದ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಕಾಫಿ ಬೆಳೆಗಾರರ ಸಂಘದ ಸಂಘಟನೆಯಲ್ಲೂ ಪ್ರಮುಖ ಪಾತ್ರ ವಹಿಸಿದ್ದ ಅವರು,ಹಾಸನ ಹಾಲು ಒಕ್ಕೂಟದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.

ಆರ್.ಎಸ್.ಎಸ್ ನ ಎಲ್ಲ ಹಿರಿಯ-ಕಿರಿಯ ಪ್ರಮುಖರ ಜೊತೆ ಉತ್ತಮ ಸಂಪರ್ಕ ಹೊಂದಿ ನಮಗೆಲ್ಲರಿಗೂ ಉತ್ತಮ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು.ಅವರ ಹಠಾತ್ ಸಾವು ಬಹಳ ಬೇಸರ ತರಿಸಿದೆ.ಅವರ ಆತ್ಮಕ್ಕೆ ದಯಾಮಯನಾದ ಭಗವಂತನು ಸದ್ಘತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ಸಿಮೆಂಟ್ ಮಂಜು ತಿಳಿಸಿದರು.

————-ಶಶಿಕುಮಾರ್ ಕೆಲ್ಲೂರು

Leave a Reply

Your email address will not be published. Required fields are marked *

× How can I help you?