ಅರಕಲಗೂಡು-ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಈಗಾಗಲೇ 4 ಜನ ಡಿ ದರ್ಜೆ ನೌಕರರು ಕಾರ್ಯನಿರ್ವಹಸುತ್ತಿದ್ದರು ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಕಚೇರಿಗೆ ಮತ್ತೊಬ್ಬ ಡಿ ದರ್ಜೆ ನೌಕರರನ್ನು ನೇಮಕ ಮಾಡಿಕೊಳ್ಳಲಾಗಿದ್ದು ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಪ್ರಸ್ತುತ ಅಗತ್ಯ ಇಲ್ಲದೆ ಹೋದರು ನಾಲ್ಕು ಜನ ಪೌರ ಕಾರ್ಮಿಕರನ್ನು ಡಿ ದರ್ಜೆ ನೌಕರರನ್ನಾಗಿ ನೇಮಕ ಮಾಡಿಕೊಂಡು ಸಾರ್ವಜನಿಕರ ತೆರಿಗೆ ಹಣವನ್ನು ಪೋಲು ಮಾಡುತ್ತಿರುವ ಆಡಳಿತ ಮಂಡಳಿ ಬಸ್ ನಿಲ್ದಾಣದ ಬಳಿ ಇರುವ ಪಾರ್ಕ್ ನೋಡಿಕೊಳ್ಳುತ್ತಿದ್ದ ಕೇಶವ ಎಂಬ ಕಾರ್ಮಿಕನನ್ನು ಅಧ್ಯಕ್ಷರ ಹಾಗು ಉಪಾಧ್ಯಕ್ಷರ ಕಚೇರಿಗಳಿಗೆ ಸೀಮಿತವಾಗುವಂತೆ ನೇಮಕ ಮಾಡಿಕೊಂಡು ಮತ್ತದೇ ಚಾಳಿಯನ್ನು ಮುಂದುವರೆಸಿದೆ.
ಈ ಬಗ್ಗೆ ಹಾಲಿ ಸದಸ್ಯರುಗಳು,ಅಧಿಕಾರಿ ವರ್ಗ ಹಾಗು ಸಂಘಸಂಸ್ಥೆಗಳ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದು ಜಿಲ್ಲಾಧಿಕಾರಿಗಳು ಗಮನ ಹರಿಸಿ ನಷ್ಟವಾಗುತ್ತಿರುವ ಸಾರ್ವಜನಿಕರ ತೆರಿಗೆ ಹಣವನ್ನು ಉಳಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
————–ಶಶಿಕುಮಾರ್ ಕೆಲ್ಲೂರು