ಅರಕಲಗೂಡು-ಬಹಳ ದಿನಗಳಿಂದ ನಿಲುಗಡೆಗೊಂಡಿದ್ದ ಮಾದಿಹಳ್ಳಿ,ಶಾನುಭೋಗನಹಳ್ಳಿ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಸ್ ಗೆ ಮತ್ತೆ ಮರುಚಾಲನೆ ನೀಡಲಾಗಿದೆ.
ಈ ಬಸ್ ಸ್ಥಗಿತಗೊಂಡಿದ್ದರಿಂದ ಅರಕಲಗೋಡಿಗೆ ದಿನನಿತ್ಯವೂ ಸಂಚರಿಸುವ ವಿದ್ಯಾರ್ಥಿಗಳಿಗೆ ಇತರ ಕೆಲಸ ಕಾರ್ಯಗಳ ನಿಮಿತ್ತ ತೆರಳಬೇಕಿದ್ದ ರೈತರು ಹಾಗು ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗಿತ್ತು.
ಈ ಸಮಸ್ಯೆಯನ್ನು ತಾಲೂಕು ಕಾಂಗ್ರೆಸ್ ಅಧ್ಯಕ್ಷರಾದ ಪ್ರಸನ್ನ ಕುಮಾರ್ ರವರ ಗಮನಕ್ಕೆ ತಂದ ತಕ್ಷಣ ಸಂಬಂಧಪಟ್ಟವರೊಂದಿಗೆ ಮಾತನಾಡಿ ಬಸ್ ಗೆ ಮರುಚಾಲನೆ ಕೊಡಿಸುವಲ್ಲಿ ಸಫಲರಾಗಿದ್ದಾರೆ.
ಇಂದು ಬಸ್ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿ ಮಾತನಾಡಿದ ಪ್ರಸನ್ನ ಕುಮಾರ್, ಈ ಬಸ್ ಸಂಚಾರದ ಅವಶ್ಯಕತೆಯನ್ನು ಗ್ರಾಮಸ್ಥರು ನನ್ನ ಗಮನಕ್ಕೆ ತಂದರು.ನಾನು ಅರಕಲಗೂಡು ವಿಭಾಗದ ಅಧಿಕಾರಿಗಳೊಂದಿಗೆ ಚರ್ಚಿಸಿ ಬಸ್ ಬಿಡುವಂತೆ ಮನವಿ ಮಾಡಿದ್ದೆ.ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಅಧಿಕಾರಿಗಳು ಇಂದು ಮಾದಿಹಳ್ಳಿ, ಶಾನುಭೋಗನಹಳ್ಳಿ ಮಾರ್ಗವಾಗಿ ಬಸ್ ಬಿಟ್ಟಿದ್ದು ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ವಸಂತ್ ಕುಮಾರ್,ವಿಜಾಪುರ ಅರಣ್ಯ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷ ಶಾನ್ ಭೋಗನಹಳ್ಳಿ ರಮೇಶ್, ಗ್ರಾಮಸ್ಥರುಗಳು, ವಿದ್ಯಾರ್ಥಿಗಳು ಹಾಜರಿದ್ದು ಪ್ರಸನ್ನ ಕುಮಾರ್ ರವರಿಗೆ ಧನ್ಯವಾದಗಳನ್ನು ಅರ್ಪಿಸಿದರು.
ಹಿಂದಿನಿಂದಲೂ ಜನಾನುರಾಗಿಯಾಗಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಸನ್ನ ಕುಮಾರ್ ರಾಜ್ಯದಲ್ಲಿ ತಮ್ಮದೇ ಸರಕಾರ ಇರುವ ಸಮಯದಲ್ಲಿ ಬಹಳ ಚಟುವಟಿಕೆಯಿಂದ ಶಾಸಕರ ಹಾಗೆ ಕಾರ್ಯ ನಿರ್ವಹಿಸುತ್ತಿದ್ದು,ಸಾರ್ವಜನಿಕರ ಯಾವುದೇ ತೊಂದರೆಗಳಿರಲಿ ಅಧಿಕಾರಿಗಳ ಬೆನ್ನು ಬಿದ್ದು ಪರಿಹರಿಸಿಕೊಡುತ್ತಿದ್ದಾರೆ.
ಹತ್ತಾರು ವರ್ಷಗಳಿಂದ ತಾಲೂಕು ಕಾಂಗ್ರೆಸ್ ಅಧ್ಯಕ್ಷರಾಗಿರುವ ಪ್ರಸನ್ನ ಕುಮಾರ್ ಶಾಸಕರಾಗಿ ವಿಧಾಸಭೆಯನ್ನು ಪ್ರವೇಶಿಸುವ ಎಲ್ಲ ಅರ್ಹತೆಗಳಿದ್ದರು ಆರ್ಥಿಕ ಕಾರಣವೊಂದರಿಂದ ಹಿಂದೆ ಉಳಿಯುತ್ತಿದ್ದಾರೆ ಎಂಬ ಆರೋಪಗಳಿವೆ.
ಜನ ಹಣವಿದ್ದವರಿಗಷ್ಟೇ ಮತ ನೀಡುತ್ತಾರೆ ಎಂಬ ಅರ್ಥವಿಲ್ಲದ ಮನೋಭಾವನೆಯಿಂದ ಹೊರಬಂದು ಮುಂದಿನ ಚುನಾವಣೆಯಲ್ಲಿ ಸ್ಪರ್ದಿಸಲು ಮುಂದಾಗಬೇಕೆಂಬುದು ಅರಕಲಗೋಡಿನ ಪ್ರಜ್ಞಾವಂತ ಮತದಾರರ ಹಕ್ಕೊತ್ತಾಯವಾಗಿದೆ.
——————--ಶಶಿಕುಮಾರ್ ಕೆಲ್ಲೂರು