ರಾಮನಾಥಪುರ-ಮಕ್ಕಳಲ್ಲಿ ಸಂಸ್ಕೃತ ಭಾಷೆಯ ಬಗ್ಗೆ ಆಸಕ್ತಿ ಬೆಳೆಯಬೇಕು,ಸಂಸ್ಕೃತ ಭಾಷೆಯ ಪ್ರಚಾರ ಪ್ರಸಾರಕ್ಕಾಗಿ ನಮ್ಮ ಶಾಲೆಯಿಂದ ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತೇವೆ ಎಂದು ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಯ ಜಿ ಎಸ್ ತಾರನಾಥ್ ಅವರು ಭರವಸೆ ನೀಡಿದರು.
ಶ್ರೀ ಪಟ್ಟಾಭಿರಾಮ ಗ್ರಾಮಾಂತರ ವಿದ್ಯಾವರ್ಧಕ ಸಂಘ ಹಾಗೂ ಶ್ರೀ ಪಟ್ಟಾಭಿರಾಮ ಸಂಸ್ಕೃತ ಪಾಠಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ಹೊನ್ನೇನಹಳ್ಳಿ ಗ್ರಾಮದಲ್ಲಿರುವ ಶಾಲೆಯ ಸಭಾಂಗಣದಲ್ಲಿ ನಡೆದ ‘ಅಸ್ಮಾಕಂ ಸಂಸ್ಕೃತಮ್ ಸಂಸ್ಕೃತೋತ್ಸ’ವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರ ಮತ್ತು ಸಂಸ್ಕೃತ ವಿಶ್ವವಿದ್ಯಾಲಯವು ಸಂಸ್ಕೃತದ ಏಳಿಗೆಗೆ ಶ್ರಮಿಸುತ್ತಿದೆ.ಕಲಿಯಲು ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಹಲವು ಸವಲತ್ತನ್ನು ನೀಡಲಾಗುತ್ತಿದೆ ಈ ಅವಕಾಶಗಳನ್ನು ಮಕ್ಕಳು ಮತ್ತು ಶಿಕ್ಷಕರುಗಳು ಬಳಸಿಕೊಳ್ಳಬೇಕು ಎಂದರು.
ಶ್ರೀ ಪಟ್ಟಾಭಿರಾಮ ಗ್ರಾಮಾಂತರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಎಸ್ .ಶ್ರೀನಿವಾಸ್ ಕಾರ್ಯಕ್ರಮ ಉದ್ಘಾಟಿಸಿದರು.ಬಸವಪಟ್ಟಣ ಪಬ್ಲಿಕ್ ಶಾಲೆಯ ಸಂಸ್ಕೃತ ಶಿಕ್ಷಕಿ ಹೆಚ್ .ಟಿ ಲಕ್ಷ್ಮಿಕಾಶಿ ಉಪನ್ಯಾಸ ನೀಡಿದರು.
ಮುಖ್ಯ ಅತಿಥಿಗಳಾಗಿ ಗ್ರಾಮಾಂತರ ಪ್ರೌಢಶಾಲೆಯ ವಿದ್ಯಾವರ್ಧಕ ಸಂಘದ ಶಾಲೆಯ ಅಧ್ಯಕ್ಷರಾದ ಆರ್. ಆರ್. ಶ್ರೀನಿವಾಸ್,ಮುಖ್ಯೋಪಾಧ್ಯಾಯರಾದ ಜಿ.ಎಸ್ .ಶಿವರಾಮೇಗೌಡ ಪತ್ರಕರ್ತೆ ದೇವಕಿ ಚಂದ್ರಶೇಖರ್, ಮುಖ್ಯೋಪಾಧ್ಯಾಯರಾದ ಉಮಾಶಂಕರ್ ಮುಂತಾದವರು ಭಾಗವಹಿಸಿದ್ದರು.
———————————-ಶಶಿಕುಮಾರ್ ಕೆಲ್ಲೂರ್