ಅರಕಲಗೂಡು-ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ ) ವತಿಯಿಂದ ‘ಆರೋಗ್ಯವಂತ ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ’ವಿಷಯಕ್ಕೆ ಸಂಬಂಧಿಸಿದಂತೆ ವನಿತಾ ಚಂದ್ರಮೋಹನ್ ರವರಿಂದ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಶಿಕ್ಷಕರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ,ನಾಗಲಕ್ಷ್ಮಿಯವರು ಮಹಿಳೆಯರಲ್ಲಿ ಕಂಡುಬರುವ ರಕ್ತಹೀನತೆ, ಪ್ರಸವಪೂರ್ವ ಮತ್ತು ಪ್ರಸವ ನಂತರದ ಅರೋಗ್ಯದ ಬಗ್ಗೆ,ಗರ್ಭ ಕೋಶ ಮತ್ತು ಸ್ತನ ಕ್ಯಾನ್ಸರ್ ಕಾಯಿಲೆಗಳ ಬಗ್ಗೆ ಸಂಘದ ಮಹಿಳಾ ಸದಸ್ಯರ ಜೊತೆ ಸಂವಾದ ಕಾರ್ಯಕ್ರಮ ನಡೆಸಿದರು.
ಕಾರ್ಯಕ್ರಮ ದಲ್ಲಿ ಡಾ,ಶ್ರೀಕಾಂತ್, ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆಯ ಸದಸ್ಯರಾದ ಪ್ರಕಾಶ್, ತಾಲೂಕಿನ ಯೋಜನಾಧಿಕಾರಿ ಜಿನಪ್ಪ ಎಸ್ ಬಿ ,ತಾಲೂಕು ಸಮನ್ವಯಾಧಿಕಾರಿ ಸಪ್ನಾ,ಕೃಷಿ ಮೇಲ್ವಿಚಾರಕರಾದ ಸುನಿಲ್,ಲೆಕ್ಕ ಪರಿಶೋಧಕಿ ಭಾರತಿ,ತಾಲೂಕು ನೋಡೆಲ್ ಅಧಿಕಾರಿ ಅಭಿಜಿತ್,ಮೇಲ್ವಿಚಾರಕ ರವೀಂದ್ರ,ಕೇಂದ್ರದ ಸಂಯೋಜಕರು, ಕೇಂದ್ರ ಸದಸ್ಯರು ಉಪಸ್ಥಿತರಿದ್ದರು.
——-ಶಶಿಕುಮಾರ್ ಕೆಲ್ಲೂರು