ಅರಕಲಗೂಡು-ವಿಶ್ವ ಏಡ್ಸ್ ದಿನಾಚರಣೆ ಪ್ರಯುಕ್ತ ಸಾರ್ವಜನಿಕ ಆಸ್ಪತ್ರೆಯ ವತಿಯಿಂದ ಜನಜಾಗೃತಿ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ನ್ಯಾಯಾಧೀಶೆ,ಶ್ರೀಮತಿ,ಚಂಪಾಶ್ರೀ,ನ್ಯಾಯಾಧೀಶರಾದ,ಶ್ರೀ,ರಘು ರವರು ಜಾಗ್ರತಿ ಜಾಥಾಕ್ಕೆ ಚಾಲನೆ ನೀಡಿದರು.
ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾದ ಡಾ.ದೀಪಕ್,ಐ.ಸಿ.ಟಿ.ಸಿ ವಿಭಾಗದ ಪರಶುರಾಮ್ ಶಿರೂರ್, ಗೌರಮ್ಮ ಪ್ರಕಾಶ್, ಪರಮೇಶ್, ಚಂದ್ರೇಗೌಡ, ತನುಜಾ, ಮಲ್ಲಿಕಾರ್ಜುನ್,ಅರುಣ್ ಕುಮಾರ,ಶುಶ್ರೂಷಕ ಅಧಿಕಾರಿಗಳ ಮೇಲ್ವಿಚಾರಕರಾದ ಹರಿಣಾಕ್ಷಿ, ಆಸ್ಪತ್ರೆಯ ಸಕಲ ಸಿಬ್ಬಂದಿ ವರ್ಗದವರು ಜಾಥಾದಲ್ಲಿ ಭಾಗವಹಿಸಿದರು.
ಜನಜಾಗೃತಿ ಜಾಥಾ ಆಸ್ಪತ್ರೆಯಿಂದ ಪ್ರಾರಂಭಗೊಂಡು ನಗರದ ಪ್ರಮುಖ ಬೀದಿಗಳಲ್ಲಿ ಪ್ರಚಾರ ನಡೆಸಿತು. ಸಮಾರೋಪ ಕಾರ್ಯಕ್ರಮವು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ನಡೆಯಿತು.
ಐ.ಟಿ.ಐ ಕಾಲೇಜಿನ ತರಬೇತಿ ಅಧಿಕಾರಿಗಳಾದ ಯೋಗನಾಥ ಎ.ಎಸ್ ಅವರು ಸ್ವಾಗತಿಸಿದರು.ಆಸ್ಪತ್ರೆಯ ಆಪ್ತ ಸಮಾಲೋಚಕರಾದ ಪರಶುರಾಮ ಶಿರೂರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರೇ,ಡಾ,ಪುಷ್ಪಲತಾ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದರು.
ಹಾಸನದ ಡ್ಯಾಪ್ಕೋ ಕಾರ್ಯಾಲಯದ ಮೇಲ್ವಿಚಾರಕರಾದ ರವಿಕುಮಾರ್ ಅವರು ಎಚ್ಐವಿ ಕಾಯಿಲೆ ಹರಡುವ ವಿಧಾನಗಳು ಹಾಗೂ ಬಲಿಯಾಗದಿರಲು ತೆಗೆದುಕೊಳ್ಳಬೇಕಾಗಿರುವ ಮುನ್ನೆಚ್ಚರಿಕ ಕ್ರಮಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು.
ತಾಲೂಕು ಪಂಚಾಯತಿಯ ಧರ್ಮೇಂದ್ರವರು ಮಾತನಾಡಿ,ಎಚ್ಐವಿ ಸೋಂಕಿತರಿಗೆ ಸರ್ಕಾರದಿಂದ ಸಿಗುವಂತಹ ಸವಲತ್ತುಗಳ ಬಗ್ಗೆ ಮಾಹಿತಿ ಕೊಟ್ಟರು.
ಕಾರ್ಯಕ್ರಮದಲ್ಲಿ ತೌಫಿಕ್ ಅಹಮದ್,ಪ್ರಕಾಶ್ ಎಂ,ಮಲ್ಲಿಕಾರ್ಜುನ್, ಗೌರಮ್ಮ, ಕ್ಷೇತ್ರ ಆರೋಗ್ಯಶಿಕ್ಷಣಾಧಿಕಾರಿ ಪರಮೇಶ್,ಚಂದ್ರೇಗೌಡ,ಚೈತನ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆ ಯ ವೆಂಕಟೇಶ್, ಚಂದ್ರಶೇಖರ್,ಸುನಂದ,ವಿದ್ಯಾರ್ಥಿಗಳು ಭಾಗವಹಿಸಿದ್ದರು.
—--ಶಶಿಕುಮಾರ್ ಕೆಲ್ಲೂರು