ಅರಕಲಗೂಡು;ರಾಜ್ಯ ಹೆದ್ದಾರಿ ಪ್ರಾಧಿಕಾರದವರು ಮಾಗಡಿ-ಸೋಮವಾರಪೇಟೆ ರಸ್ತೆ ಆಗಲೀಕರಣ ಕಾಮಗಾರಿ ನಡೆಸುತ್ತಿದ್ದು ರೈತರಿಂದ ವಶಪಡಿಸಿಕೊಳ್ಳಲಾಗಿರುವ ಭೂಮಿಗೆ ಸರಿಯಾದ ಪರಿಹಾರ ನೀಡಬೇಕು ಹಾಗು ವೈಜ್ಞಾನಿಕವಾಗಿ ಕಾಮಗಾರಿ ನಡೆಸಬೇಕು ಎಂದು ಆಗ್ರಹಿಸಿ ಸುವರ್ಣ ಕರ್ನಾಟಕ ರಕ್ಷಣಾ ಸೇನೆ ಆಹೋರಾತ್ರಿ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಂಡಿದೆ.
ಸಿದ್ದಾಪುರ ಗೇಟ್ ಸರ್ಕಲ್ ಸೋಮವಾರ ಬೆಳಗ್ಗೆಯಿಂದ ಸಂಘಟನೆಯ ರಾಜ್ಯಾಧ್ಯಕ್ಷರಾದ ಡಾ ರಾಘವೇಂದ್ರ ಗೌಡರ ನೇತೃತ್ವದಲ್ಲಿ ನಡೆಯುತ್ತಿರುವ ಸತ್ಯಾಗ್ರಹದಲ್ಲಿ ನೂರಾರು ಜನ ಪದಾಧಿಕಾರಿಗಳು ಹಾಗು ರೈತರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಡಾ ರಾಘವೇಂದ್ರ ಗೌಡ ರಾಜ್ಯ ಹೆದ್ದಾರಿ ಪ್ರಾಧಿಕಾರ ಕೈಗೊಂಡಿರುವ ಮಾಗಡಿ-ಸೋಮವಾರಪೇಟೆ ರಸ್ತೆ ಅಭಿವೃದ್ಧಿಗೆ ನಮ್ಮ ವಿರೋಧವಿಲ್ಲ.ಆದರೆ ಅವರು ಜಮೀನು ನೀಡಿದ ರೈತರಿಗೆ ಮನೆ ಕಳೆದುಕೊಂಡವರಿಗೆ ಸರಿಯಾದ ಪರಿಹಾರವನ್ನು ನೀಡಿಲ್ಲ.
ಗುತ್ತಿಗೆದಾರ ಅವೈಜಾನಿಕವಾಗಿ ಕಾಮಗಾರಿ ನಡೆಸುತ್ತಿದ್ದು ನಿದಾನಗತಿಯಲ್ಲಿಯೂ ನಡೆಯುತ್ತಿದೆ.ಈ ಕಾರಣಕ್ಕೆ ಈಗಾಗಲೇ ಲೆಕ್ಕವಿಲ್ಲದಷ್ಟು ಜನ ವಾಹನ ಸವಾರರು ಅಪಘಾತ ಮಾಡಿಕೊಂಡು ಕೈಕಾಲು ಮುರಿದುಕೊಂಡಿದ್ದಾರೆ ಬಹಳಷ್ಟು ಜನರ ಪ್ರಾಣಗಳು ಹೊರಟುಹೋಗಿವೆ.
ಇವೆಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗುವವರೆಗೂ ನಾವು ಅಹೋರಾತ್ರಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸುವರ್ಣ ಕರ್ನಾಟಕ ರಕ್ಷಣಾ ಸೇನೆ ಪದಾಧಿಕಾರಿಗಳು, ರೈತರು,ಗ್ರಾಮಸ್ಥರು ಸಂಘಟನೆಯ ರಾಜ್ಯ ಮಹಿಳಾ ಅಧ್ಯಕ್ಷರಾದ ಮಧುಶ್ರೀ, ರಾಜ್ಯ ಉಪಾಧ್ಯಕ್ಷ ಧನಪಾಲ್ ಗೌಡ, ಕೃಷ್ಣೇಗೌಡ, ಮೆಕಾನಿಕ್ ರಮೇಶ್, ಕಾಡನೂರು ದಿವಾಕರ್ ಗೌಡ, ಶೇಖರ್, ಮಣಿ ಮಲ್ಲೇಶ್, ಕರ್ನಾಟಕ ರಾಜ್ಯ ಭ್ರಷ್ಟಾಚಾರ ನಿಗ್ರಹದಳ ಸಂಸ್ಥೆ ರಾಜ್ಯ ಕಾರ್ಯದರ್ಶಿ ಹೂಡೆನೂರು ಮಂಜು,
ಬೇಕರಿ ರಮೇಶ್ ಗೌಡ, ಧರ್ಮಪ್ಪ, ಪ್ರದೀಪ್ ರುದ್ರಪಟ್ಟಣ, ವಕೀಲ ವಿಜಯಕುಮಾರ್,ಜಯಣ್ಣ, ಸುನಿಲ್, ಚೈತ್ರ, ಸ್ವಾಮಿ ಗೌಡ,ಚಂದ್ರೇಗೌಡ,ಗೋವಿಂದೇಗೌಡ,ಅಶೋಕ್, ಜಗದೀಶ್, ವಿನಯ್, ದಿನೇಶ್, ಸುರೇಶ್, ಪ್ರದೀಪ್, ಶಿವ, ರವೀಂದ್ರ, ಪ್ರಕಾಶ್ ಗೌಡ,ಜಗದೀಶ್ ಗೌಡ,ಆನಂದ ಆಚಾರ್,ಅನಿತಾ ಆಚಾರ್, ಗಂಗಾಧರ ಆಚಾರ್, ಅನಂತ ಆಚಾರ್, ಪಾಂಡು, ದರ್ಶನ್, ಶಶಾಂಕ್, ರತ್ನಮ್ಮ, ಶಿವರಾಜ್, ಮಹದೇವ್ ಸಿದ್ದಾಪುರ, ರಮೇಶ್ ಗೌಡ ,ಪಾಂಡು, ದೇವರಾಜೇಗೌಡ, ಮೂರ್ತಿ, ಪಾರ್ವತಮ್ಮ, ಸ್ವಾಮಿ ಶೆಟ್ಟಿ, ಮಂಚ ಶೆಟ್ಟಿ, ಜೀವನ್ ಶಿವಶೆಟ್ಟಿ, ಅಬ್ಬೂರು ಕಮಲಮ್ಮ, ಶಿಗೋಡು ಕಾಳಯ್ಯ, ಪ್ರಜ್ವಲ್ , ನಂಜೇಗೌಡ, ಇನ್ನು ಮುಂತಾದವರು ಇದ್ದರು.
————————-ಶಶಿಕುಮಾರ್ ಕೆಲ್ಲೂರು