ಅರಕಲಗೂಡು– ತಾಲೂಕು NNMS ಪರೀಕ್ಷೆಯಲ್ಲೂ ಅರಕಲಗೂಡು ತಾಲ್ಲೂಕಿಗೆ ಐದನೆ ಸ್ಥಾನ.ವಿದ್ಯಾರ್ಥಿಗಳಿಗೆ ಮಿನಿ IAS ಎಂದೇ ಕರೆಸಿಕೊಳ್ಳುವ NNMS ಪರೀಕ್ಷೆಯಲ್ಲೂ ಅರಕಲಗೂಡು ತಾಲ್ಲೂಕು ಕಡೆಯ ಸ್ಥಾನದಿಂದ ಐದನೆ ಸ್ಥಾನಕ್ಕೆ ಜಿಗಿದಿದೆ.
ಕಳೆದ ಸಾಲಿನಲ್ಲಿ ನಡೆದ ಆಯ್ಕೆ ಪರೀಕ್ಷೆಯಲ್ಲಿ ತಾಲ್ಲೂಕಿನಾದ್ಯಂತ 18 ವಿದ್ಯಾರ್ಥಿಗಳು ಆಯ್ಕೆಯಾಗಿ ಕೀರ್ತಿ ತಂದಿರುತ್ತಾರೆ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಕೆ ಪಿ ನಾರಾಯಣ ತಿಳಿಸಿದರು.
ಈ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗುವ ಮಕ್ಕಳಿಗೆ 9 ನೇ ತರಗತಿಯಿಂದ 12 ನೇ ತರಗತಿಯ ವರೆಗೆ ಸತತವಾಗಿ ಪ್ರತೀ ತಿಂಗಳಿಗೆ 1000 ದಂತೆ ನಾಲ್ಕು ವರ್ಷಗಳ ಕಾಲ 48000 ವಿದ್ಯಾರ್ಥಿ ವೇತನ ಪಡೆಯಲು ಅರ್ಹರಾಗುತ್ತಾರೆ ಎಂದು ತಿಳಿಸಿದರು.

ಈ ವರ್ಷವೂ ಕೂಡಾ ಅತೀ ಹೆಚ್ಚು ಮಕ್ಕಳು ಆಯ್ಕೆಯಾಗುವಂತೆ ಕ್ರಿಯಾಯೋಜನೆ ಸಿದ್ದಪಡಿಸಿದ್ದೇವೆ ಈ ಅಪರೂಪದ ಸಾಧನೆಗೆ ಕಾರಣಕರ್ತರಾದ ತಾಲ್ಲೂಕಿನ ನೋಡಲ್ ಅಧಿಕಾರಿ ಸಂಪನ್ಮೂಲ ವ್ಯಕ್ತಿಗಳು ಮತ್ತು ಮಕ್ಕಳನ್ನ ಮಾನ್ಯ ಶಾಸಕರ ಉಪಸ್ಥಿತಿಯಲ್ಲಿ ಅಭಿನಂದಿಸಲಾಗುವುದು ಎಂದಿದ್ದಾರೆ.
– ಶಶಿಕುಮಾರ್