ಅರಕಲಗೂಡು : ಅರಕಲಗೂಡು-ಪಟ್ಟಣ-ಪಂಚಾಯಿತಿಯಲ್ಲಿ-₹9.73 ಲಕ್ಷ ಉಳಿತಾಯ-ಬಜೆಟ್-ಮಂಡನೆ

ಅರಕಲಗೂಡು: ಪಟ್ಟಣ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಎಸ್.ಎಸ್.ಪ್ರದೀಪ್ ಕುಮಾರ್ 2025-26 ನೇ ಸಾಲಿಗೆ 9.73 ಲಕ್ಷ ಉಳಿತಾಯ ಬಜೆಟ್ ಮಂಡಿಸಿದರು.

ಇಂದು ನಡೆದ ಸಭೆಯಲ್ಲಿ ಮುಂಗಡ ಪತ್ರ ಮಂಡಿಸಿದರು.’ಆರಂಭಿಕ ಶಿಲ್ಕು ₹ 1.24 ಕೋಟಿ ಆದಾಯ ನಿರೀಕ್ಷೆ ಮಾಡಲಾಗಿದೆ.ವಿವಿಧ ಅಭಿವೃದ್ದಿ ಹಾಗೂ ಆಡಳಿತಾತ್ಮಕ ಕಾರ್ಯಗಳಿಗೆ₹19.32ಕೋಟಿ ವೆಚ್ಚವಾಗಲಿದ್ದು, ₹9.73 ಲಕ್ಷ ಉಳಿತಾಯವಾಗಲಿದೆ’

‘ಪಟ್ಟಣದ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅನುದಾನ ನಿರೀಕ್ಷಿಸಲಾಗಿದೆ. ಕುಡಿಯುವ ನೀರು ಬೀದಿ ದೀಪ , ನೈರ್ಮಲ್ಯ , ರಸ್ತೆ, ಚರಂಡಿ, ಉದ್ಯಾನ , ಸ್ಮಶಾನ ಅಭಿವೃದ್ಧಿ ಸೇರಿದಂತೆ ಮೂಲಸೌಕರ್ಯ ಕಲ್ಪಿಸಲು ಬಜೆಟ್ ನಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ’ ಎಂದರು.

ಆದಾಯದಲ್ಲಿ ಆಸ್ತಿ ತೆರಿಗೆ ₹1.50 ಕೋಟಿ, ಮಳಿಗೆ ಬಾಡಿಗೆ ₹7.46 ಕೋಟಿ , ನೀರಿನ ತೆರಿಗೆ ₹45.66 ಲಕ್ಷ ಅಭಿವೃದ್ಧಿ ಶುಲ್ಕ 15.61 ಲಕ್ಷ,ವಾರದ ಸಂತೆ ವಿವಿಧ ಬಾಬ್ತುಗಳ ಹರಾಜಿನಿಂದ ₹18.18 ಕೋಟಿ ಆದಾಯ ನಿರೀಕ್ಷಿಸಲಾಗಿದೆ. ವೆಚ್ಚದಲ್ಲಿ ಸಿಬ್ಬಂದಿ ವೇತನ ₹3ಕೋಟಿ , ಮಳಿಗೆ ಅಭಿವೃದ್ಧಿ ಕಾಮಗಾರಿಗೆ ₹85 ಲಕ್ಷ ಎಸ್ ಟಿಪಿ ಘಟಕಕ್ಕೆ ಜಮೀನು ಖರೀದಿಗಾಗಿ ₹3ಕೋಟಿ ರಸ್ತೆ ಚರಂಡಿ ದುರಸ್ತಿಗೆ ₹50 ಲಕ್ಷ ಸೇರಿದಂತೆ ₹19.32 ಕೋಟಿ ವೆಚ್ಚವಾಗಲಿದೆ.ಈ ಬಾರಿಯ ಬಜೆಟ್ ನಲ್ಲಿ ಪತ್ರಕರ್ತರ ಆರೋಗ್ಯ ನಿಧಿ ತೆರದಿದ್ದು,₹50ಸಾವಿರ ವಂತಿಗೆ
ನೀಡಿಲಾಗಿದೆ ಎಂದು ಮಾಹಿತಿ ನೀಡಿದರು.

ಆಡಳಿತ ಪಕ್ಷವಾದ ಕಾಂಗ್ರೆಸ್ ಸದಸ್ಯರು ಬಜೆಟ್ ಅನ್ನು ಸ್ವಾಗತಿಸಿದರು.

ಸದಸ್ಯೆ ಎಚ್ . ಎಸ್.ರಶ್ಮಿ ಮಾತನಾಡಿ , ರಸ್ತೆ ಬದಿ ವ್ಯಾಪಾರಿಗಳಿಗೆ ಪುಡ್ ಕೋರ್ಟ್ ತೆರೆಯಲು ಕ್ರಮ ಕೈಗೊಳ್ಳಬೇಕು . ಇದರಿಂದ ಸ್ವಚ್ಛತೆ ಜೊತೆಗೆ ಪಟ್ಟಣದ ಅಂದವೂ ಹೆಚ್ಚಲಿದೆ ಎಂದು ಸಲಹೆ ಮಾಡಿದರು. ಈ ಕುರಿತು ಕ್ರಮ ಕೈಗೊಳ್ಳುವುದಾಗಿ ಅಧ್ಯಕ್ಷ ಪ್ರದೀಪ್ ಕುಮಾರ್ ತಿಳಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಸುಬಾನ್ ಷರೀಫ್ , ಮುಖ್ಯಾಧಿಕಾರಿ ಬಸವರಾಜ ಟಾಕಪ್ಪ ಶಿಗ್ಗಾಂವಿ , ಉಪಸ್ಥಿತರಿದ್ದರು.

  • ಶಶಿಕುಮಾರ್

Leave a Reply

Your email address will not be published. Required fields are marked *

× How can I help you?