ಅರಕಲಗೂಡು- ತಾಲೂಕು ರಾಮನಾಥಪುರ ಕಾವೇರಿ ನದಿಯಲ್ಲಿ ಸ್ವಚ್ಚತಾ ಕಾರ್ಯ ಹಾಗೂ ಅರತಿ ಪೂಜೆ


ರಾಮನಾಥಪುರ– ಭಾಷೆಗಳ ಮತ್ತು ಸಂಸ್ಕೃತಿಯ ಗಡಿಗಳನ್ನು ಮೀರಿ ಸಹೋದರತ್ವವನ್ನು ರೂಪಿಸುವ ಶಕ್ತಿ ಪ್ರಕೃತಿ ಮತ್ತು ಫರಂಪರವಾಗದೆ. ಕಾವೇರಿಯ ಪರಿಕ್ರಮ ಅಷ್ಟೇ ಅಲ್ಲ ಕಾವೇರಿ ನದಿಯ ಹರಿವ ದಾರಿಯುದ್ಧಕ್ಕೂ ಕಾವೇರಿ ಆರತಿ, ಸ್ವಚ್ಛತೆ, ಜಾಗೃತಿ ಮತ್ತು ಶ್ರದ್ಧೆ ನಮನ ಎಲ್ಲರನ್ನು ಮಾಡಿಕೊಂಡು ಹೋಗಲಾಗುತ್ತದೆ ಎಂದು ಕೊಣನೂರು ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವ ವಿದ್ಯಾಲಯ ನಾಗರಾಜು ಕೋಟೆಕಾರ್ ಅವರು ತಿಳಿಸಿದರು.

ರಾಮನಾಥಪುರದಲ್ಲಿ ಇಂದು ಸೋಮವಾರ ಕಾವೇರಿ ನದಿ ಕಾವೇರಿ ನದಿ ಸ್ವಚ್ಛತೆ, ಹಾಗೂ ಮಹಾಅರತಿ ನಂತರ ಮಾತನಾಡಿದ ಅವರು, ಕಾವೇರಿ ನದಿ ಕನ್ನಡದ ನೆಲದಲ್ಲಿ ಹುಟ್ಟಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಮೂಲಕ ಹರಿದು ಭೂಮಿಯನ್ನು ಸಮೃದ್ಧಗೊಳಿಸುತ್ತಿದೆ. ಭಾಷೆ ಮತ್ತು ಸಾಂಸ್ಕೃತಿಕ ವಿಭಿನ್ನತೆಯ ನಡುವೆಯೂ ಎರಡು ರಾಜ್ಯಗಳನ್ನು ಪೋಷಿಸುವ ಜೀವನದಿಯಾಗಿದೆ, ಲೋಪಮುದ್ರಯ ಪೋಷಕ ಶಕ್ತಿಯಂತೆ ಕಾವೇರಿ ಎರಡೂ ರಾಜ್ಯಗಳಿಗೆ ಜೀವನದಿಯಾಗಿ ಸಲಹುತ್ತಾಳೆ, ಹೀಗಾಗಿ ಅವಳನ್ನು ಹಾಳುಗೆಡುವುದಂತೆ ಉಳಿಸಿಕೊಳ್ಳುವ ಹೊಣೆಗಾರಿಕೆ ನಮ್ಮಲ್ಲರದಾಗಿದೆ ಎಂದು ನಾಗರಾಜು ತಿಳಿಸಿದರು.

ಈ ಸಂದರ್ಭದಲ್ಲಿ ಹಾಸನ ಜಿಲ್ಲಾ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಅಧ್ಯಕ್ಷರು ಎಂ.ಎನ್. ಕುಮಾರಸ್ವಾಮಿ, ಪ್ರಧಾನ ಕಾರ್ಯದರ್ಶಿ ಕಾಳಬಾಯಿ, ಖಜಾಂಚಿ ರಘು, ಸಂಘಟನಾ ಕಾರ್ಯದರ್ಶಿ ಪಿ.ಎನ್.ಟಿ. ಶಿವಪ್ಪ. ತಾಲೂಕು ಅಧ್ಯಕ್ಷ ಸಿದ್ದರಾಜು ಖಜಾಂಚಿ ಕೇಶವ ಸದಸ್ಯರಾದ ಕೊಣನೂರು ಸರಗೂರು ಸುರೇಶ್, ಸೌಮ್ಯ, ಸುಧಾ ಮುಂತಾದವರು ಇದ್ದರು.

  • ಶಶಿಕುಮಾರ

Leave a Reply

Your email address will not be published. Required fields are marked *