ಅರಕಲಗೂಡು-ಸಾಲ ಬಾದೆ-ತಾಳಲಾರದೆ-ವಿಷ-ಸೇವಿಸಿ-ರೈತ- ಆತ್ಮಹ*ತ್ಯೆ


ಅರಕಲಗೂಡು – ತಾಲೂಕು, ಕಸಬಾ ಹೋಬಳಿಯ ಕಳ್ಳಿಮುದ್ದನಹಳ್ಳಿ ಗ್ರಾಮದ, ಕೇಶವಯ್ಯ ಎಂಬುವವರು , ಸಾಲಭಾದೆ ತಾಳಲಾರದೆ, ಮರ್ಯಾದಿಗೆ ಅಂಜಿ ,,ವಿಷ ಸೇವಿಸಿ ತಡರಾತ್ರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.


ಕೇಶವಯ್ಯ ಎಂಬುವವರು ಸುಮಾರು 60 ವರ್ಷ ಮನೆ ಕಟ್ಟಲು ಮತ್ತು ವ್ಯವಸಾಯದ ಉದ್ದೇಶಕ್ಕಾಗಿ, ವಿವಿಧ ಬ್ಯಾಂಕುಗಳಿಂದ ಮತ್ತು ಮೈಕ್ರೋ ಫೈನಾನ್ಸ್ ಗಳಿಂದ ಸಾಲ ಮಾಡಿದ್ದರು. ಖಾಸಗಿ ಮೈಕ್ರೋ ಫೈನಾನ್ಸ್ ನಿಂದ ಸಾಲ ಪಡೆದು ಎರಡು ತಿಂಗಳು ಹಣ ಕಟ್ಟುವುದಕ್ಕೆ ತಡವಾಗಿದ್ದಕ್ಕೆ, ಸತತ ಐದು ದಿವಸಗಳ ಕಾಲ, ಮನೆ ಹತ್ತಿರ ಬಂದು ರಾತ್ರಿ 8-9 ಗಂಟೆಯ ತನಕ ಮನೆ ಮುಂದೆ ಕುಳಿತು, ಮನೆ ಹತ್ತಿರ ಗಲಾಟೆಮಾಡಿ ಮನೆಯ ಬಾಗಿಲಿಗೆ ಒಂದು ನೋಟಿಸ್ ಅನ್ನು ಅಂಟಿಸಿ,, ನಿಮ್ಮ ಮನೆಯನ್ನು ಹರಾಜು ಹಾಕಿಸುತ್ತೇವೆ ಎಂದು ಹೆದುರಿಸಿದ್ದರು ಎನ್ನಲಾಗಿದೆ.

ಕೇಶವಯ್ಯನವರು ಮೈಕ್ರೋ ಫೈನಾನ್ಸ್ ನವರಿಗೆ ಹೆದರಿಕೊಂಡು ಭಯಗೊಂಡು ವಿಚಲಿತರಾಗಿ ಆತ್ಮಹ*ತ್ಯೆಗೆ ಶರಣಾಗಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಈ ವೇಳೆ ಬಿಎಸ್ಪಿ ಮುಖಂಡ ಅತ್ನಿ ಹರೀಶ್ ಅವರು ಮಾತನಾಡಿ, ಈ ಮೈಕ್ರೋ ಫೈನಾನ್ಸ್ ಮತ್ತು ಅಕ್ರಮ ಬಡ್ಡಿ ದಂದೆ ನಡೆಸುತ್ತಿರುವ ವಿರುದ್ಧ ಪ್ರಕರಣವನ್ನು ದಾಖಲಿಸಿ ಅವರ ಕುಟುಂಬ ವರ್ಗದವರಿಗೆ ಸರಕಾರದಿಂದ ಪರಿಹಾರವನ್ನು ಕೊಡಬೇಕು ಎಂದು ಆಗ್ರಹಿಸಿದರು.


ಈ ಸಂಬಂಧ ಸ್ಥಳಕ್ಕೆ ಆಗಮಿಸಿದ ತಾಲೂಕು ಆಡಳಿತ ಸಿಬ್ಬಂದಿಗಳಿಗೆ, ಸೂಕ್ತ ತನಿಖೆ ಮಾಡಿಸಿ, ಈ ಘಟನೆಗೆ ಕಾರಣರಾದ ಮೈಕ್ರೋ ಫೈನಾನ್ಸ್ ಕಂಪನಿ ವಿರುದ್ಧ ,ಪ್ರಕರಣ ದಾಖಲಿಸಿ, ಕುಟುಂಬಸ್ಥರಿಗೆ ಸರ್ಕಾರದಿಂದ ಪರಿಹಾರ ಒದಗಿಸಿಕೊಟ್ಟು ,,ಮೃತರ ಕುಟುಂಬಕ್ಕೆ ನ್ಯಾಯ ಒದಗಿಸಿ ಕೊಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಉಪತಹಶೀಲ್ದಾರ್ ರವರಾದ ಸ್ವಾಮಿರವರು ,,ಆರಕ್ಷಕ ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳು,, ಕಳ್ಳಿ ಮುದ್ದನಹಳ್ಳಿ ಗ್ರಾಮದ ,ವಿಜಯ್ ರವರು , ಗುರು ರವರು ಹಾಗೂ ಗ್ರಾಮದ ಮುಖಂಡರುಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

× How can I help you?