ಅರಕಲಗೂಡು– ಸುವರ್ಣ ಕರ್ನಾಟಕ ರಕ್ಷಣಾ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರು ಹಾಗೂ ಡಾಕ್ಟರ್ ಸರೋಜಿನಿ ಮಹಿಷಿ ಚಳುವಳಿ ಹೋರಾಟಗಾರರು ಡಾ. ಎಸ್ ರಾಘವೇಂದ್ರ ಗೌಡ್ರು ಪೊಲೀಸ್ ಇಲಾಖೆಯಲ್ಲಿ ಉತ್ತಮ ಕರ್ತವ್ಯ ನಿರ್ವಹಣೆಗಾಗಿ ಹೊಳೆನರಸೀಪುರ ವೃತ್ತ ನಿರೀಕ್ಷಕ ದಕ್ಷ ಪ್ರಾಮಾಣಿಕ ಅಧಿಕಾರಿ ಹಾಗೂ ಸ್ನೇಹಜೀವಿ ಬಿ ಆರ್ ಪ್ರದೀಪ್ ಕುಮಾರ್ ರವರಿಗೆ ಮೊದಲಿಗೆ ಹೃದಯಪೂರ್ವಕ ಅಭಿನಂದನೆಗಳು ಎಂದು ಪ್ರದೀಪ್ ಕುಮಾರ್ ಹೇಳಿದರು.
ಅವರು ತಾಲೂಕು ರಾಷ್ಟ್ರಪತಿ ಪದಕ ಪಡೆದಂತ ದಕ್ಷ ಪ್ರಾಮಾಣಿಕ ಅಧಿಕಾರಿಗಳಾದ ಬಿ ಆರ್ ಪ್ರದೀಪ್ ಕುಮಾರ್ ರವರಿಗೆ ಬಾನುಗುಂದಿ ಗ್ರಾಮದಲ್ಲಿ ಗ್ರಾಮಸ್ಥರು ಹಾಗೂ ಸುವರ್ಣ ಕರ್ನಾಟಕ ರಕ್ಷಣಾ ಸೇನೆ ಗೌರವ ಪೂರ್ವಕ ಶುಭಾಶಯ ಕೋರಿ ಅಭಿನಂದಿಸಲಾಯಿತು.
ಈ ವೇಳೆ ಮಾತನಾಡಿದ ಅವರು, ಸೇವೆಗಾಗಿ ರಾಷ್ಟ್ರಪತಿ ಪದಕ ಪಡೆದಿರುವ ಇವರು ಸರಳ ಸಜ್ಜನ. ಸಾಮಾಜಿಕ ಪ್ರಾಮಾಣಿಕ ನ್ಯಾಯದ ರೂವಾರಿ ಸಂಪನ್ಮೂಲ ವ್ಯಕ್ತಿ ಹಾಗೂ ದಕ್ಷ ಪ್ರಾಮಾಣಿಕ ಅಧಿಕಾರಿ. ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕೊಣನೂರು ಹೋಬಳಿಯ ಬಾನಗುಂದಿ ಗ್ರಾಮದಲ್ಲಿ ಹುಟ್ಟಿ ಬೆಳೆದಂತ ಊರಿನಲ್ಲಿ ಸನ್ಮಾನ ಮಾಡಿಸಿಕೊಳ್ಳುವುದು ಹೆಮ್ಮೆಯ ವಿಷಯ ಎಂದು ಶ್ಲಾಘಿಸಿದರು.

ಪೊಲೀಸ್ ಎಂದರೆ ಭಯವಲ್ಲ ಭರವಸೆ. ಒಬ್ಬ ಪೊಲೀಸ್ ಅಧಿಕಾರಿ ತನ್ನ ಕರ್ತವ್ಯದಲ್ಲಿ ತೋರುವ ಬದ್ಧತೆ ಹಾಗೂ ಕರ್ತವ್ಯ ನಿಷ್ಠೆ ಪರಿಣಾಮ ಬೀರುತ್ತವೆ. ಅಧಿಕಾರಿಗಳು ಸದ್ದಿಗ್ದ ಪರಿಸ್ಥಿತಿಯಲ್ಲಿ ತೆಗೆದುಕೊಳ್ಳುವ ನಿರ್ಧಾರದಿಂದ ನಾಗರಿಕರ ಪ್ರಶಂಸಗೆ ಗುರಿಯಾಗುತ್ತಾರೆ. ಇಲಾಖೆಯಲ್ಲಿ ಇಂಥವರ ಆಡಳಿತ ಹಾಗೂ ಸೇವೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಪ್ರದೀಪ್ ಕುಮಾರ್ ಅವರಿಗೆ ರಾಷ್ಟ್ರಪತಿ ಪದಕ ಪ್ರಶಸ್ತಿ ಬಂದಿರುವುದು ಅವರ ಕರ್ತವ್ಯ ನಿಷ್ಠೆಗೆ ಸಂದ ಗೌರವ ಎಂದರು.
ಈ ಸಂದರ್ಭದಲ್ಲಿ ಸೇನೆಯ ರಾಜ್ಯಾಧ್ಯಕ್ಷರು ಡಾ. ಎಸ್ ರಾಘವೇಂದ್ರ ಗೌಡ್ರು, ಮಹಿಳಾ ರಾಜ್ಯ ಅಧ್ಯಕ್ಷ ಮಧುಶ್ರೀ ಚೌಡೇಗೌಡ್ರು, ಬಿ ಸಿ ರಾಜೇಗೌಡರು ರಾಜಣ್ಣ, ಹಾಗೂ ತಾಲೂಕು ಪದಾಧಿಕಾರಿಗಳಾದ ಗಿರೀಶ್, ಮೆಕಾನಿಕ್ ರಮೇಶ್ ಸಿಬಿ ತೋಟ, ಪ್ರಕಾಶ್ ಹೋಬಳಿ ಅಧ್ಯಕ್ಷ ಆನಂದ ಆಚಾರ್, ಅನಿತಾ ಆಚಾರ್, ಗಂಗಾಧರ ಅಚಾರ್, ಚಂದ್ರೇಗೌಡರು ಭರತ್ ಗೌಡ, ಪುನೀತ್ ಆಚಾರ್, ಗೋಪಾಲ್ ಆಚಾರ್ ಹಾಗೂ ಬಾನುಗುಂದಿ ಶ್ರೀ ದೊಡ್ಡಮ್ಮತಾಯಿ ಯುವಕರ ಬಳಗ ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶುಭ ಕೋರಿ ಅಭಿನಂದಿಸಲಾಯಿತು.