ಅರಕಲಗೂಡು – ವೀರಶೈವ ಸಮಾಜದ ವತಿಯಿಂದ ಶ್ರೀ ಶಿವಕುಮಾರ ಸ್ವಾಮೀಜಿಗಳ ಹುಟ್ಟುಹಬ್ಬ ಆಚರಣೆ ಹಬ್ಬವನ್ನು, ಪುಷ್ಪಾರ್ಚನೆ ಮತ್ತು ದಾಸೋಹ ಕಾರ್ಯಕ್ರಗಳನ್ನು ಏರ್ಪಡಿಸುವುದರ ಮೂಲಕ, ಪಟ್ಟಣದ ಗಣಪತಿ ಕೊತ್ತಲಿನಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲಾ ಸಮಾಜದ ಮುಖಂಡರುಗಳನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿಗಳಾದ ಸೌಮ್ಯ ರವರು, ಉಪ ತಹಸಿಲ್ದಾರ್ ಸ್ವಾಮಿರವರು, ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಪ್ರದೀಪ್ ರವರು ತಾಲೂಕು ವೈದ್ಯಾಧಿಕಾರಿಗಳಾದ ಪುಷ್ಪಲತಾ ರವರು ಉದ್ಯಮಿಗಳಾದ ದಿವಾಕರ್ ರವರು, ರವರು, ನರಸೇ ಗೌಡ ಮುಂತಾದವರು ಹಾಜರಿದ್ದರು.
– ಶಶಿಕುಮಾರ್, ಕೆಲ್ಲೂರು