ಅರಕಲಗೂಡು – ತಾಲೂಕು ಎ ಬಿ ಎಂ ಹಳ್ಳಿ ಕ್ಲಸ್ಟರ್ ಮಟ್ಟದ ಮಕ್ಕಳ ಕಲಿಕಾ ಹಬ್ಬ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೋಳಲಗೋಡುನಲ್ಲಿ ನಡೆಯಿತು.
ಕಳಸಾರೋಹಣ ಮತ್ತು ಹುಲಿ ವೇಷ ಕುಣಿತದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಇಲಾಖಾಧಿಕಾರಿಗಳು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು ಉಪಾಧ್ಯಕ್ಷರು ಕಾರ್ಯದರ್ಶಿಗಳು ಕ್ಲಸ್ಟರ್ನ ಎಲ್ಲಾ ಶಿಕ್ಷಕರು ಎಸ್ ಡಿ ಎಂ ಸಿ ಅಧ್ಯಕ್ಷರು ಸದಸ್ಯರು ಮತ್ತು ಮಕ್ಕಳೊಂದಿಗೆ ಮೆರವಣಿಗೆ ಮಾಡಲಾಯಿತು.
ಕಾರ್ಯಕ್ರಮದ ಕಲಿಕಾ ಹಬ್ಬದ ಅಧ್ಯಕ್ಷತೆಯನ್ನು ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ಹೀನ ಕೌಸರ್ ವಹಿಸಿಕೊಂಡಿದ್ದರು. ಹೊಳಲಗೋಡು ಶಾಲಾ ಮುಖ್ಯ ಶಿಕ್ಷಕ ಶಾಂತಕುಮಾರ್ ಎಂ ಎಸ್ ಸ್ವಾಗತಿಸಿದರು. ಸಿಆರ್‌ಪಿ ಶಂಕರ್ ಮಾತನಾಡಿ, ಕಾರ್ಯಕ್ರಮದ ಉದ್ದೇಶ ಮತ್ತು ವಿಶೇಷತೆಯನ್ನು ಕುರಿತು ಹೇಳಿದರು.
ಕಾರ್ಯಕ್ರಮಕ್ಕೆ ಇಲಾಖೆ ಮತ್ತು ಹೊಳಲಗೋಡು ಶಾಲೆಯ ಎಸ್ ಟಿ ಎಂ ಸಿ ಹಾಗೂ ಪೋಷಕರ ಸಹಕಾರದೊಂದಿಗೆ ವಿಜೃಂಭಣೆಯಿಂದ ನಡೆಯಿತು.