ಅರಸೀಕೆರೆ-ನಗರದ ಜೆ.ಸಿ ಆಸ್ಪತ್ರೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಶಿಲ್ಪಶ್ರೀ.ಸಿ ಅಧೀಕ್ಷಕರಾಗಿ ಪದೋನ್ನತಿ ಹೊಂದಿ ವರ್ಗಾವಣೆ ಗೊಂಡಿದ್ದು ಅವರನ್ನು ಇಂದು ಆಸ್ಪತ್ರೆಯ ಸಿಬ್ಬಂದಿಗಳು ಗೌರವಪೂರ್ಣವಾಗಿ ಸನ್ಮಾನಿಸಿ ಬೀಳ್ಕೊಟ್ಟರು.
ಆಸ್ಪತ್ರೆಯ ಆಡಳಿತ ವೈದ್ಯಧಿಕಾರಿಗಳಾದ ಡಾ.ಸುರೇಶ್ ಮಾತನಾಡಿ,ಶಿಲ್ಪಶ್ರೀ.ಸಿ ರವರು ನಮ್ಮ ಆಸ್ಪತ್ರೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕಳೆದ ಎಂಟು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದು, ತಮ್ಮ ಸೌಮ್ಯ ಸ್ವಭಾವ ಹಾಗು ಜವಾಬ್ದಾರಿಯುತ ಕರ್ತವ್ಯದ ನಿರ್ವಹಣೆಯ ಕಾರಣಕ್ಕೆ ಎಲ್ಲರಿಗು ಅಚ್ಚುಮೆಚ್ಚಾಗಿದ್ದರು.
ಅಧೀಕ್ಷಕರಾಗಿ ಪದೋನ್ನತಿ ಹೊಂದಿರುವ ಅವರು ಕುಣಿಗಲ್ ತಾಲೂಕು ಆಸ್ಪತ್ರೆಯಲ್ಲಿ ಕರ್ತವ್ಯಕ್ಕೆ ನಿಯುಕ್ತಿಗೊಂಡಿದ್ದು,ಅವರ ಮುಂದಿನ ಪಯಣ ಸುಖಕರವಾಗಿರಲಿ ಎಂದು ಹಾರೈಸಿದರು.
ಬೀಳ್ಕೊಡುಗೆ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿಲ್ಪಶ್ರೀ.ಸಿ,ಕಳೆದ ಎಂಟು ವರ್ಷಗಳಿಂದ ನನ್ನನ್ನು ನನ್ನೆಲ್ಲ ಸಹದ್ಯೋಗಿಗಳು,ವೈದ್ಯರು ಮನೆಯ ಮಗಳಂತೆ ನೋಡಿಕೊಂಡಿದ್ದಾರೆ.ಇಲ್ಲಿಂದ ವರ್ಗಾವಣೆಗೊಳ್ಳಲು ನನಗೆ ಬೇಸರವಿದೆ.ಮತ್ತೊಮ್ಮೆ ಇಲ್ಲಿಯೇ ಕರ್ತವ್ಯ ನಿರ್ವಹಿಸಬೇಕೆಂಬ ಮಹಾದಾಸೆಯಿದ್ದು ನನಗೆ ಇಲ್ಲಿಯವರೆಗೂ ಸಹಕರಿಸಿದ ಎಲ್ಲರಿಗು ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಜೆ.ಸಿ ಆಸ್ಪತ್ರೆಯ ಸಹಾಯಕ ಆಡಳಿತ ಅಧಿಕಾರಿ ಕಮಲಾಕ್ಷಿ,ಹಾಸನ ಡಿ.ಎಚ್. ಓ ಕಚೇರಿಯ ಅಧೀಕ್ಷಕರಾದ ಇಂದಿರಾ.ಜೆ ಸಿ ಆಸ್ಪತ್ರೆಯ ಕಚೇರಿ ಅಧೀಕ್ಷಕರಾದ ಸುಧಾಕರ್,ಡಾ,ಷಡಕ್ಷರಿ,ಡಾ,ಡಿಂಪಲ್,ಡಾ,ರಜನೇಶ್ ಬಾಬು,ಡಾ,ಮಹೇಂದ್ರ, ಡಾ,ರಾಕೇಶ್, ಡಾ,ಧನಂಜಯ್,ಡಾಕ್ಟರ್ ಶಂಕರ್,ಆಸ್ಪತ್ರೆಯ ರಕ್ಷಾ ಸಮಿತಿಯ ಸದಸ್ಯರುಗಳಾದ ರೇವಣ್ಣ. ಹೇಮಂತ್,ಮಂಜುನಾಥ,ಖಾನ್,ವಿಭವ ಇಟ್ಟಗಿ,ರೇಖಾ ಜಯಣ್ಣ,ಸಮಾಜ ಸೇವಕರಾದ ಎಸ.ಎಲ್.ಏನ್ ಯೋಗೇಶ್,ಅರಸೀಕೆರೆ ಸರ್ಕಾರಿ ನೌಕರ ಸಂಘದ ಮಾಜಿ ಅಧ್ಯಕ್ಷರಾದ ಕೃಷ್ಣಮೂರ್ತಿ, ವಾಣಿ,ನಾಗರತ್ನ ,ಜ್ಯೋತಿ,ಮಂಜುಶ್ರೀ, ಚೈತ್ರ, ನಾಗರಾಜ್, ಹಿರಿಯ ಫಾರ್ಮಸಿ ಅಧಿಕಾರಿ ಶಶಿಕುಮಾರ್,ವಿಜಯಲಕ್ಷ್ಮಿ,ಸಿಸ್ಟರ್ ತಾರಾಮಣಿ,ಭಾಗಿರತಿ, ಬ್ರದರ್ ಲೋಕೇಶ್, ಬ್ರದರ್ ಶಿವಕುಮಾರ್,ಆಸ್ಪತ್ರೆಯ ಸಿಸ್ಟರ್ಗಳಾದ,ಪಾರ್ವತಿ,ಪಿ.ಎಂ,ಮಂಜುಳಾ,ಹೇಮ,ಭಾಗ್ಯ, ಅನುಸೂಯ,ಮಂಜುಳಾ,ವೀಣಾ,ಲ್ಯಾಬ್ ಟೆಕ್ನಿಷಿಯನ್ ರಘು, ಆನಂದ, ನಿರ್ಮಲ, ಕುಸುಮ, ಸಾರ್ವಜನಿಕರು ಹಾಜರಿದ್ದರು.
—————ಜೀವನ್ ಕುಮಾರ್ ಕಣಕಟ್ಟೆ