ಅರೇಹಳ್ಳಿ-ಶಿಕ್ಷಕ ವೃತ್ತಿಯ ಜೊತೆಗೆ ತಮ್ಮನ್ನು ಸಮಾಜಸೇವೆಯಲ್ಲಿಯೂ ಸಕ್ರೀಯರಾಗಿ ತೊಡಗಿಸಿಕೊಂಡಿರುವ ಕೆಸಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಮುಖ್ಯೋಪಾ ಧ್ಯಾಯರಾದ ಸಂಪತ್ ಟಿ.ಸಿ ರವರು ತಮ್ಮ ಶಾಲೆಯ ವಿಶೇಷ ಚೇತನ ಮಗು ವಿಹಾಂತ್ ನ ಮನೆಗೆ ತೆರಳಿ ಕೇಕ್ ಕತ್ತರಿಸುವ ಮೂಲಕ ಹೊಸ ವರ್ಷಾಚರಣೆಯನ್ನು ಬಹಳ ವಿಶಿಷ್ಟವಾಗಿ ಆಚರಣೆ ಮಾಡಿದ್ದಾರೆ.
ಶಾಲೆಯಲ್ಲಿ 3 ನೇ ತರಗತಿಯಲ್ಲಿ ಓದುತ್ತಿರುವ ವಿಹಾನ್ ವಿಶೇಷಚೇತನನಾಗಿದ್ದರು ಓದಿನಲ್ಲಿ ಮುಂದಿದ್ದಾನೆ.ಮಗುವಿನ ಸರ್ವತೋಮುಖ ಬೆಳವಣಿಗೆಗೆ ಹಾಗೂ ಆತ್ಮಸ್ಥೈರ್ಯ ತುಂಬುವ ಸಲುವಾಗಿ ಇಂತಹ ಸಣ್ಣಪುಟ್ಟ ಕಾರ್ಯಗಳನ್ನು ನಾನು ಹಾಗು ನಮ್ಮ ಶಾಲೆಯ ಶಿಕ್ಷಕರು ಮಾಡುತ್ತಲಿರುತ್ತೇವೆ.
ಹೊಸ ವರ್ಷವನ್ನು ಸಿ.ಆರ್.ಪಿ ರಾಮಯ್ಯ ನೇತೃತ್ವದಲ್ಲಿ ಆತನ ಮನೆಗೆ ಬಂದು ಅವನ ಕೈಯ್ಯಲ್ಲಿಯೇ ಕೇಕ್ ಕತ್ತರಿಸಿ ಆಚರಿಸಲಾಗಿದೆ ಎಂದು ಟಿ.ಸಿ ಸಂಪತ್ ತಿಳಿಸಿದರು.
ಟಿ.ಸಿ ಸಂಪತ್ ರವರ ಈ ನಡೆಗೆ ಬೇಲೂರಿನ ಖ್ಯಾತ ಸಮಾಜಸೇವಾ ಸಂಸ್ಥೆ 24 /7 ನ ಮುಖ್ಯಸ್ಥರಾದ ನೂರ್ ಅಹಮ್ಮದ್ ರವರು ಮೆಚ್ಚುಗೆ ಸೂಚಿಸಿದ್ದು ಈ ಕಾರ್ಯ ಸಮಾಜಕ್ಕೆ ಮಾದರಿಯಾದದ್ದು ಎಂದಿದ್ದಾರೆ.
ಈ ಸಂದರ್ಭದಲ್ಲಿ ಪೋಷಕರಾದ ಶಿವರಾಜು,ಪ್ರಮೀಳ ಹಾಗೂ ಊರಿನ ಮುಖಂಡರು ಹಾಜರಿದ್ದರು.