ಅರೇಹಳ್ಳಿ:ಹಲವಾರು ಯುವ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ಸಲುವಾಗಿ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಆಯೋಜಿ ಸಲಾಗುತ್ತಿದೆ ಎಂದು ಅರೇಹಳ್ಳಿಯ ಶಟಲ್ ಬ್ಯಾಡ್ಮಿಂಟನ್ ಕ್ಲಬ್ ಅಧ್ಯಕ್ಷ ರಂಗಸ್ವಾಮಿ ಹೇಳಿದರು.
ಬೇಲೂರು ತಾಲೂಕು ಅರೇಹಳ್ಳಿಯ ರೋಟರಿ ಭವನದಲ್ಲಿ ಗೆಳೆಯರ ಬಳಗ ಹಾಗೂ ಶಟಲ್ ಬ್ಯಾಡ್ಮಿಂಟನ್ ಕ್ಲಬ್ ಸಹಯೋಗದಲ್ಲಿ ಆಯೋಜಿ ಸಲಾಗಿದ್ದ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಯುವ ಉದ್ಯಮಿ ವಿರೂಪಾಕ್ಷರವರ ಪ್ರಾಯೋಜಕತ್ವದಲ್ಲಿ ಇಂದು ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗಿದೆ. ನಾನಾ ತಾಲೂಕು ಕ್ಲಬ್‍ಗಳ ಕ್ರೀಡಾಪಟುಗಳು ಭಾಗವಹಿಸಲಿದ್ದು ಉದಯೋನ್ಮುಖ ಆಟಗಾರರಿಗೆ ಇದು ಉತ್ತಮ ವೇದಿಕೆಯಾಗಲಿದೆ. ಈ ಪಂದ್ಯಾವಳಿಯನ್ನು ಆಯೋಜನೆ ಮಾಡಲು ಸಹಕಾರ ನೀಡಿದ ರೋಟರಿ ಕ್ಲಬ್ ಹಾಗೂ ಟ್ರಸ್ಟ್ ಅಧ್ಯಕ್ಷರಿಗೆ ಮತ್ತು ಸದಸ್ಯರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.
ಹಿರಿಯ ಬ್ಯಾಡ್ಮಿಂಟನ್ ಆಟಗಾರ ಹಾಗೂ ಕಾಫಿ ಬೆಳೆಗಾರ ಸುಹೀಲ್ ಉರ್ ರೆಹಮಾನ್ ಮಾತನಾಡಿ, ಗೆಳೆಯರ ಬಳಗ ಸಂಘ ಹಾಗೂ ಕ್ಲಬ್ ನ ವತಿಯಿಂದ ಈ ಭನವದಲ್ಲಿ ಅನೇಕ ಪಂದ್ಯಾವಳಿಗಳನ್ನು ಏರ್ಪಡಿಸಿ ಯಶಸ್ಸು ಕಂಡಿದ್ದೇವೆ. ಮುಂದಿನ ದಿನಗಳಲ್ಲಿ ಈ ಕ್ಲಬ್ ಉತ್ತಮ ಆಟಗಾ ರರಿಗೆ ಪ್ರೋತ್ಸಾಹ ನೀಡುವುದರ ಮೂಲಕ ಕ್ರೀಡಾಪಟುಗಳನ್ನು ಹುರಿದುಂಬಿಸುವ ಕಾರ್ಯ ಮತ್ತಷ್ಟು ಮಾಡಬೇಕು ಎಂದು ಮನವಿ ಮಾಡಿದರು.
ಈ ವೇಳೆ 17 ವರ್ಷದೊಳಗಿನ ಶಾಲಾ ಮಕ್ಕಳ ಕ್ರೀಡಾಕೂಟದಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿಗಳಾದ ಜ್ಞಾನೇಶ್ವರಿ(ಮಲ್ನಾಡ್ ಶಾಲೆ]ಜಾಯ್ಸಟನ್ ಡಿಸೋಜಾ( ಅನುಗ್ರಹ ಆಂಗ್ಲ ಮಾಧ್ಯಮ ಪ್ರೌಢಶಾಲೆ), ಮೈತ್ರಿ (ರೋಟರಿ ಶಾಲೆ) ಹಾಗೂ ಕ್ರೀಡಾಕೂಟದ ಪ್ರಾಯೋಜಕರಾದ ವಿರೂಪಾಕ್ಷರವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಯುವ ಉದ್ಯಮಿ ವಿರೂಪಾಕ್ಷ ಬೆಂಗಳೂರು, ಮಹೇಶಣ್ಣ, ಮಂಜುನಾಥ್, ಗ್ರಾಪಂ ಮಾಜಿ ಸದಸ್ಯ ಇಸಾಕ್, ಸುಹೀಲ್, ಬಾಡ್ಮಿಂಟನ್ ಕ್ಲಬ್ ಎಲ್ಲಾ ಸದಸ್ಯರು ಭಾಗವಹಿಸಿದ್ದರು.